October 16, 2026
Friday, October 16, 2026
spot_img

Soup | ಮನೆಯಲ್ಲೇ ಮಾಡಿ ಸ್ಪೆಷಲ್ ಥಾಯ್ ಸೂಪ್: ಮಳೆ ಬರೋವಾಗ ಬಿಸಿ ಬಿಸಿಯಾಗಿ ಸವಿದರೆ ಸಾಕು ಅಲ್ವಾ

ಥಾಯ್ ಸೂಪ್‌ಗಳು ತಮ್ಮ ಖಾರ, ಹುಳಿ ಮತ್ತು ಸಿಹಿ ರುಚಿಯ ಸಮತೋಲನದಿಂದ ವಿಶ್ವದಾದ್ಯಂತ ಜನಪ್ರಿಯವಾಗಿವೆ. ಅದರಲ್ಲೂ ಟಾಮ್ ಖಾ ಸೂಪ್ ಮತ್ತು ಟಾಮ್ ಯಮ್ ಸೂಪ್‌ಗಳಿಗೆ ವಿಶೇಷ ಬೇಡಿಕೆ ಇದೆ. ಸುಲಭವಾಗಿ ಮನೆಯಲ್ಲೇ ಈ ರುಚಿಕರ ಸೂಪ್ ತಯಾರಿಸಬಹುದು.

ಬೇಕಾಗುವ ಪದಾರ್ಥಗಳು
ತೆಂಗಿನ ಹಾಲು – 1 ಕಪ್
ತರಕಾರಿ ಅಥವಾ ಚಿಕನ್ ಸ್ಟಾಕ್ – 2 ಕಪ್
ಲೆಮನ್ ಗ್ರಾಸ್ – 1 ಕಡ್ಡಿ
ಶುಂಠಿ – 1 ಇಂಚು
ಅಣಬೆ – ½ ಕಪ್
ಈರುಳ್ಳಿ – 1
ಟೊಮೆಟೊ – 1
ಹಸಿಮೆಣಸಿನಕಾಯಿ ಅಥವಾ ಥಾಯ್ ಚಿಲ್ಲಿ – 2
ಸೋಯಾ ಸಾಸ್ – 1 ಚಮಚ
ನಿಂಬೆ ರಸ – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ

ಮಾಡುವ ವಿಧಾನ

ಒಂದು ಪಾತ್ರೆಯಲ್ಲಿ ತರಕಾರಿ ಅಥವಾ ಚಿಕನ್ ಸ್ಟಾಕ್ ಹಾಕಿ ಬಿಸಿ ಮಾಡಿ. ಅದಕ್ಕೆ ಲೆಮನ್ ಗ್ರಾಸ್, ಶುಂಠಿ ಮತ್ತು ಮೆಣಸಿನಕಾಯಿ ಸೇರಿಸಿ 10 ನಿಮಿಷ ಕುದಿಸಿ. ನಂತರ ಅಣಬೆ, ಈರುಳ್ಳಿ ಮತ್ತು ಟೊಮೆಟೊ ಹಾಕಿ ಕೆಲವು ನಿಮಿಷ ಬೇಯಿಸಿ.

ತೆಂಗಿನ ಹಾಲು, ಸೋಯಾ ಸಾಸ್ ಹಾಗೂ ಉಪ್ಪು ಸೇರಿಸಿ ಕಡಿಮೆ ಉರಿಯಲ್ಲಿ 5 ನಿಮಿಷ ಬೇಯಲು ಬಿಡಿ. ಗ್ಯಾಸ್ ಆಫ್ ಮಾಡಿದ ಬಳಿಕ ನಿಂಬೆ ರಸ ಸೇರಿಸಿ. ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿ ಬಿಸಿ ಬಿಸಿಯಾಗಿ ಸವಿಯಿರಿ.

Must Read