June 16, 2026
Tuesday, June 16, 2026
spot_img

BEAUTY | ಮುಖದ ಅಂದವನ್ನು ಹೆಚ್ಚುಮಾಡೋ ಲಿಪ್ಸ್‌ಟಿಕ್‌ ಹಚ್ಚೋದು ಹೇಗೆ ಗೊತ್ತಾ? ಈ ಸ್ಟೆಪ್ಸ್‌ ಪಾಲೋ ಮಾಡಿ

ಎಷ್ಟೇ ಅಂದವಾಗಿ ಮೇಕಪ್‌ ಮಾಡಿಕೊಂಡ್ರೂ ನಿಮ್ಮ ಮುಖ ಹೇಗೆ ಕಾಣತ್ತೆ? ನಿಮ್ಮ ಮೇಕಪ್‌ ಲುಕ್‌ನ್ನು ಕಂಪ್ಲೀಟ್‌ ಮಾಡೋದು ಲಿಪ್ಸ್‌ಟಿಕ್‌! ಹೌದು ಯಾವ ಬಟ್ಟೆಗೆ ಯಾವ ಬಣ್ಣದ ಲಿಪ್ಸ್‌ಟಿಕ್‌ ಹಚ್ಚುತ್ತೀರಿ, ಹೇಗೆ ಹಚ್ಚುತ್ತೀರಿ ಅನ್ನೋದು ತುಂಬಾನೇ ಮುಖ್ಯ. ಉದಾಹರಣೆಗೆ ಕೆಂಪು ಬಟ್ಟೆಗೆ ಕೆಂಪು ಲಿಪ್ಸ್‌ಟಿಕ್‌ ಹಚ್ಚುವಂತಿಲ್ಲ, ಅದರ ಬದಲು ನ್ಯೂಡ್‌ ಲಿಪ್ಸ್‌ ಬೆಸ್ಟ್‌ ಚಾಯ್ಸ್‌. ಇನ್ನು ಹಲವರು ಲಿಪ್ಸ್‌ಟಿಕ್‌ ಹಚ್ಚಿದ ಸ್ವಲ್ಪ ಸಮಯದಲ್ಲೇ ತುಟಿ ಚಾಪಿಯಾಗಿ ಚೆನ್ನಾಗಿ ಕಾಣೋದಿಲ್ಲ. ಲಿಪ್ಸ್‌ ಕಾಳಜಿ ವಹಿಸಿ ನಂತರ ಲಿಪ್ಸ್‌ಟಿಕ್‌ ಹಚ್ಚಿದ್ರೆ ಒಳ್ಳೆಯದು.

ತುಟಿಗೆ ತೇವಾಂಶ ನೀಡಿ: ಲಿಪ್‌ಸ್ಟಿಕ್ ಹಚ್ಚುವ ಮೊದಲು ತುಟಿಯನ್ನು ಮಾಯಿಶ್ಚರೈಸ್ ಮಾಡುವುದು ಅಗತ್ಯ. ತುಟಿಯು ಒಣಗಿದಿದ್ದರೆ ಲಿಪ್‌ಸ್ಟಿಕ್ ಸರಿಯಾಗಿ ಕುಳಿತುಕೊಳ್ಳದು. ಆದ್ದರಿಂದ ಮೊದಲು ಲಿಪ್‌ಬಾಮ್ ಅಥವಾ ಮಾಯಿಶ್ಚರೈಸರ್ ಬಳಸಿ. ಇನ್ನೂ ಡ್ರೈ ಆದ ಲಿಪ್ಸ್‌ ನಿಮ್ಮದಾದರೆ ಎಲ್ಲಾದರೂ ಹೊರಗೆ ಹೋಗುವ ಮುನ್ನ ಒಮ್ಮೆ ಲಿಪ್‌ ಸ್ಕ್ರಬ್‌ ಬಳಕೆ ಮಾಡಿ.

ಲಿಪ್‌ಲೈನರ್ ಬಳಸಿ: ತುಟಿಯ ಆಕಾರವನ್ನು ಹೈಲೈಟ್ ಮಾಡಲು ಲಿಪ್‌ಲೈನರ್ ಅವಶ್ಯಕ. ಲಿಪ್‌ಸ್ಟಿಕ್ ಬಣ್ಣಕ್ಕೆ ಹೊಂದುವ ಲಿಪ್‌ಲೈನರ್ ಬಳಸಿ ತುಟಿಯ ಗಡಿ ಸಿದ್ಧಪಡಿಸಿದರೆ ಲಿಪ್‌ಸ್ಟಿಕ್ ಹೆಚ್ಚು ಸಮಯ ಸುಂದರವಾಗಿ ತೋರುತ್ತದೆ. ಲಿಪ್‌ಲೈನರ್‌ ಆದಷ್ಟು ತುಟಿಯ ನ್ಯಾಚುರಲ್‌ ಬಣ್ಣದ್ದೇ ಬಳಸಿ. ಅಂದರೆ ತುಟಿಯ ಕಾರ್ನರ್‌ನಲ್ಲಿ ಇರುವ ಡಾರ್ಕ್‌ ಬ್ರೌನ್‌ ಬಳಕೆ ಸೂಕ್ತ.

ಒಂದು ಸ್ಟ್ರೋಕ್ ಸಾಕು: ಲಿಕ್ವಿಡ್ ಲಿಪ್‌ಸ್ಟಿಕ್ ಒಂದೇ ಬಾರಿ ಹಚ್ಚಿದರೆ ಸಾಕು. ಎರಡು ಮೂರು ಲೇಯರ್‌ ಹಚ್ಚಿದರೆ ಅದು ಕೇಕ್‌ನಂತೆ ಕಾಣಿಸುತ್ತದೆ. ಹಾಗೆ ಏನು ತಿಂದರೂ ಅರ್ದಂಬರ್ಧ ಹೋಗಿ ಕೆಟ್ಟದಾಗಿ ಕಾಣಿಸುತ್ತದೆ. ಒಂದು ಸ್ಟ್ರೋಕ್‌ ಹಚ್ಚಿ ಒಣಗಲು ಬಿಟ್ಟು ನಂತರ ಬೇಕಿದ್ರೆ ಗ್ಲಾಸ್‌ ಹಚ್ಚಬಹುದು.

ಅಧಿಕ ಬಣ್ಣ ತೆಗೆದುಹಾಕಿ: ಲಿಪ್‌ಸ್ಟಿಕ್ ಹೆಚ್ಚು ಕಂಡರೆ ಟಿಶ್ಯು ಪೇಪರ್ ಬಳಸಿ ನಿಧಾನವಾಗಿ ಒತ್ತಿದರೆ ಅನಗತ್ಯ ಬಣ್ಣ ಕಡಿಮೆಯಾಗುತ್ತದೆ. ಮೊದಲು ಬಣ್ಣ ಆಯ್ಕೆ ಮಾಡಿ, ನಂತರ ಅದಕ್ಕನುಗುಣವಾದ ಲಿಪ್‌ಲೈನರ್ ಬಳಸಿ. ಕೊನೆಯಲ್ಲಿ ಲಿಪ್‌ಸ್ಟಿಕ್ ಹಚ್ಚಿದರೆ ತುಟಿಯ ಆಕರ್ಷಣೆ ಹೆಚ್ಚುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !