June 20, 2026
Saturday, June 20, 2026
spot_img

SNACKS | ಕೇವಲ 10 ನಿಮಿಷದಲ್ಲಿ ಮಾಡಿ ಗರಿಗರಿ ‘ವೆಜ್ ಲಾಲಿಪಾಪ್’: ಸಂಜೆ ಚಹಾ ಜತೆ ಸವಿಯಲು ಬೆಸ್ಟ್ ಸ್ನಾಕ್!

ವೆಜ್ ಲಾಲಿಪಾಪ್ ಸಂಜೆ ಚಹಾ ಜತೆ ಸವಿಯಲು ಮಕ್ಕಳು ಮತ್ತು ದೊಡ್ಡವರೆಲ್ಲರಿಗೂ ಇಷ್ಟವಾಗುವ ಒಂದು ಅತ್ಯುತ್ತಮ ತಿಂಡಿ. ಇದನ್ನು ಪಡ್ಡು ಪಾತ್ರೆಯಲ್ಲಿ ಕಡಿಮೆ ಎಣ್ಣೆ ಬಳಸಿ ಆರೋಗ್ಯಕರವಾಗಿ ಮಾಡಬಹುದು.

ಬೇಕಾಗುವ ಸಾಮಗ್ರಿಗಳು:

ಆಲೂಗಡ್ಡೆ

ಕ್ಯಾರೆಟ್ ತುರಿ

ಕ್ಯಾಪ್ಸಿಕಂ

ಹಸಿ ಬಟಾಣಿ

ಖಾರದ ಪುಡಿ

ಗರಂ ಮಸಾಲ

ಚಾಟ್ ಮಸಾಲ

ಶುಂಠಿ-ಬೆಳ್ಳುಳ್ಳಿ ಪೇಸ್ಟ್

ಮೈದಾ ಅಥವಾ ಕಾರ್ನ್‌ಫ್ಲೋರ್

ಬ್ರೆಡ್ ಪುಡಿ

ಕೊತ್ತಂಬರಿ ಸೊಪ್ಪು

ಉಪ್ಪು:

ಎಣ್ಣೆ

ಟೂತ್‌ಪಿಕ್ ಅಥವಾ ಐಸ್‌ಕ್ರೀಂ ಕಡ್ಡಿಗಳು

ಮಾಡುವ ವಿಧಾನ

 ಮೊದಲು ಒಂದು ಪಾತ್ರೆಯಲ್ಲಿ ಬೇಯಿಸಿದ ಆಲೂಗಡ್ಡೆ, ಕ್ಯಾರೆಟ್, ಕ್ಯಾಪ್ಸಿಕಂ ಮತ್ತು ಬಟಾಣಿಗಳನ್ನು ಹಾಕಿ ಚೆನ್ನಾಗಿ ಸೇರಿಸಿ. ಅದಕ್ಕೆ ಖಾರದ ಪುಡಿ, ಗರಂ ಮಸಾಲ, ಚಾಟ್ ಮಸಾಲ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕೊತ್ತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು. ನಂತರ ಒಂದು ಸಣ್ಣ ಬೌಲ್‌ನಲ್ಲಿ ಮೈದಾ ಅಥವಾ ಕಾರ್ನ್‌ಫ್ಲೋರ್ ಹಾಗೂ ಸ್ವಲ್ಪ ನೀರು ಸೇರಿಸಿ ಗಂಟಿಲ್ಲದಂತೆ ತೆಳ್ಳಗಿನ ಪೇಸ್ಟ್ ಮಾಡಿಕೊಂಡು. ಮತ್ತೊಂದು ತಟ್ಟೆಯಲ್ಲಿ ಬ್ರೆಡ್ ಪುಡಿಯನ್ನು ಹರಡಿ ಇಟ್ಟುಕೊಂಡು ಕಲಸಿದ ತರಕಾರಿ ಮಿಶ್ರಣದಿಂದ ಸಣ್ಣ ಸಣ್ಣ ನಿಂಬೆಹಣ್ಣಿನ ಗಾತ್ರದ ಉಂಡೆಗಳನ್ನು ಮಾಡಿಕೊಳ್ಳಬೇಕು.

ನಂತರ ಪ್ರತಿ ಉಂಡೆಯನ್ನು ಮೊದಲು ಮೈದಾ ನೀರಿಗೆ ಅದ್ದಿ, ನಂತರ ಬ್ರೆಡ್ ಪುಡಿಯಲ್ಲಿ ಚೆನ್ನಾಗಿ ಹೊರಳಿಸಿ ಕೋಟಿಂಗ್ ಮಾಡಿ. ಪಡ್ಡು ಪಾತ್ರೆಯನ್ನು ಒಲೆಯ ಮೇಲಿಟ್ಟು ಬಿಸಿ ಮಾಡಿ, ಎಲ್ಲಾ ಗುಳಿಗಳಿಗೆ ಸ್ವಲ್ಪ ಸ್ವಲ್ಪ ಎಣ್ಣೆ ಹಾಕಿ. ಸಿದ್ಧಪಡಿಸಿದ ವೆಜ್ ಉಂಡೆಗಳನ್ನು ಗುಳಿಗಳಲ್ಲಿಟ್ಟು, ಮಧ್ಯಮ ಉರಿಯಲ್ಲಿ ಎಲ್ಲಾ ಕಡೆ ತಿರುಗಿಸುತ್ತಾ ಗರಿಗರಿಯಾಗಿ ಮತ್ತು ಚಿನ್ನದ ಬಣ್ಣ ಬರುವವರೆಗೆ ಬೇಯಿಸಿ. ನಂತರ ಬೆಂದ ಉಂಡೆಗಳನ್ನು ಹೊರಗೆ ತೆಗೆದು, ಪ್ರತಿ ಉಂಡೆಯ ಮಧ್ಯಕ್ಕೆ ಒಂದು ಟೂತ್‌ಪಿಕ್ ಅಥವಾ ಐಸ್‌ಕ್ರೀಂ ಕಡ್ಡಿಯನ್ನು ಚುಚ್ಚಿದರೆ ಬಿಸಿಬಿಸಿ ವೆಜ್ ಲಾಲಿಪಾಪ್ ಸಿದ್ಧವಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !