ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಹಾಗೂ ಮೈತ್ರಿ ಪಕ್ಷಗಳ ನಡುವೆ ಇದೀಗ ಬಿಡದಿ ಟೌನ್‌ಶಿಪ್ ವಿಚಾರವಾಗಿ ಪೋಸ್ಟರ್ ವಾರ್ ಆರಂಭವಾಗಿದೆ. ರೈತರ ಹೋರಾಟಕ್ಕೆ ಸಾಥ್ ನೀಡಿರುವ ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ಪೋಸ್ಟರ್ ವಾರ್ ಆರಂಭಿಸಿದೆ.
ಇಂದು ಬಿಡದಿಗೆ ಬಿಜೆಪಿ ನಿಯೋಗ ಭೇಟಿ ನೀಡಲಿದ್ದು, ಎಲ್ಲಾ ಕಡೆ ಪೋಸ್ಟರ್ ಅಂಟಿಸಿ ಕಾಂಗ್ರೆಸ್ ವ್ಯಂಗ್ಯವಾಗಿದೆ. ಯೋಜನೆ ವಿರುದ್ಧ ಪಾದಯಾತ್ರೆಗೆ ಕರೆ ನೀಡಿರುವ ಜೆಡಿಎಸ್ ವಿರುದ್ಧವೂ ಪೋಸ್ಟರ್ ಹಾಕಿ ವ್ಯಂಗ್ಯಮಾಡಿದೆ. ರೈತರ ಭೂಮಿ ಕದ್ದ ಆರ್.ಅಶೋಕ್, ಬಿರಿಯಾನಿ ಅಡ್ಡೆಯ ಚಿಲ್ಲರೆ ನಾರಾಯಣಸ್ವಾಮಿ, ಆರ್‌ಟಿಜಿಎಸ್ ಕಳ್ಳ ವಿಜಯೇಂದ್ರಗೆ ಬಿಡದಿ ಟೌನ್ ಶಿಪ್‌ಗೆ ಸ್ವಾಗತ ಎಂದು ಪೋಸ್ಟರ್ ಅಂಟಿಸಲಾಗಿದೆ.
ಜೊತೆಗೆ ಅನಿತಾ ಕುಮಾರಸ್ವಾಮಿ, ಎಚ್‌ಡಿಕೆ, ನಿಖಿಲ್ ಫೋಟೊಗಳನ್ನು ಹಾಕಿ ಬೇನಾಮಿ ಆಸ್ತಿಯ ಒಡೆಯರು ಎಂದೆಲ್ಲಾ ಪೋಸ್ಟ್ ಹಾಕಿ ವ್ಯಂಗ್ಯ ಮಾಡಿದ್ದಾರೆ.



