August 24, 2026
Monday, August 24, 2026
spot_img

ನೀವು ತಿನ್ನೋ ಕಲ್ಲಂಗಡಿ ನೈಸರ್ಗಿಕವಾ ಅಥವಾ ಇಂಜೆಕ್ಷನ್‌ ಕೊಟ್ಟು ಹಣ್ಣು ಮಾಡಿದ್ದಾ? ಹೀಗೆ ಪರೀಕ್ಷಿಸಿ

ಬೇಸಿಗೆಗಾಲ ಮುಗಿತಾ ಬಂದು ಮಳೆ ಆರಂಭವಾಗ್ತಿದೆ. ಈಗ ಸ್ಟಾಕ್‌ ಕ್ಲಿಯರ್‌ ಮಾಡೋದಕ್ಕಾಗಿ ಕಲ್ಲಂಗಡಿ ಹಣ್ಣನ್ನು ಕಡಿಮೆ ಹಣಕ್ಕೆ ನೀಡ್ತಾರೆ. ಹಾಗಂತ ಖರೀದಿಸಿ ಮೋಸ ಹೋಗ್ಬೇಡಿ. ಕಲ್ಲಂಗಡಿ ಹಣ್ಣು ನ್ಯಾಚುರಲ್‌ ಆಗಿ ಹಣ್ಣಾಗಿದ್ಯಾ ಅಥವಾ ಅದಕ್ಕೆ ಇಂಜೆಕ್ಷನ್‌ ಕೊಟ್ಟು ಹಣ್ಣು ಮಾಡಿದ್ದಾರಾ? ಹೀಗೆ ಪರೀಕ್ಷಿಸಿ ನೋಡಿ..

ಕಲ್ಲಂಗಡಿ ಹಣ್ಣು ಕೊಳ್ಳುವ ಮುನ್ನ ಸೂಕ್ಷ್ಮವಾಗಿ ಹಣ್ಣನ್ನು ಗಮನಿಸಿದರೆ ಸಾಕು ನಿಮಗೆ ಪ್ರೂಫ್‌ ಸಿಗುತ್ತದೆ. ಕಲ್ಲಂಗಡಿ ಹಣ್ಣಿನ ಮೇಲೆ ಸಣ್ಣದಾದ, ನ್ಯಾಚುರಲ್‌ ಅಲ್ಲವೇ ಅಲ್ಲ ಎನಿಸುವ ಸಣ್ಣ ಪಂಕ್ಚರ್‌, ಸೀಳು, ಅಥವಾ ಅಂಟಂಟು ಜಾಗ ಇರುತ್ತದೆ. ಈ ಜಾಗದಿಂದ ಇಂಜೆಕ್ಷನ್‌ ಚುಚ್ಚಿರಬಹುದು.

ಕಲ್ಲಂಗಡಿ ಹಣ್ಣು ಮಾಮೂಲಿಗಿಂತ ಅಧಿಕವಾಗಿ ಕೆಂಪಗೆ ಕಾಣಿಸಿದರೆ ಟಿಶ್ಯೂ ಅಥವಾ ಹತ್ತಿಯಲ್ಲಿ ಅದನ್ನು ಚೆನ್ನಾಗಿ ಉಜ್ಜಿ. ಹತ್ತಿ ಮೇಲೆ ಕೆಂಪು ಬಣ್ಣ ಕಾಣಿಸಿದರೆ ಅದನ್ನು ತಿನ್ನೋಕೆ ಹೋಗ್ಬೇಡಿ. ಕಲರ್‌ ಹಾಕಿರೋದು ಪಕ್ಕಾ!

ಹಣ್ಣನ್ನು ಕತ್ತರಿಸಿದ ಮೇಲೆ ಅಲ್ಲಲ್ಲಿ ಮಾತ್ರ ಹಣ್ಣಾಗಿದೆ, ತುಂಬಾ ಹಣ್ಣಾಗಿದೆ ಅಥವಾ ಕಾಯಿ ಕಾಯಿ ರೀತಿ ಇದೆ. ಇಡೀ ಹಣ್ಣಿನ ಟೆಕ್ಸ್ಚರ್‌ ಒಂದು ಜಾಗಕ್ಕಿಂತ ಇನ್ನೊಂದು ಜಾಗದಲ್ಲಿ ಬೇರೆ ಥರ ಇದೆ ಎಂದಾದರೆ ಅದನ್ನು ತಿನ್ನೋಕೆ ಹೋಗ್ಬೇಡಿ.

ಆರ್ಟಿಫಿಶಿಯಲ್‌ ಆಗಿ ಹಣ್ಣು ಮಾಡಿದ್ದರೆ ಕಲ್ಲಂಗಡಿ ಹಣ್ಣಿನ ಬೀಜ ಕಪ್ಪು ಅಥವಾ ಬ್ರೌನ್‌ ಇರೋದಿಲ್ಲ. ಬಿಳಿ, ಖಾಲಿಖಾಲಿಯಾದ ಅಥವಾ ಕಲರ್‌ ಬೇರೆ ರೀತಿ ಇದ್ರೆ ಇದಕ್ಕೆ ಇಂಜೆಕ್ಷನ್‌ ಕಾರಣ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !