June 17, 2026
Wednesday, June 17, 2026
spot_img

ಹೊಟ್ಟೆ ಚೆನ್ನಾಗಿದ್ರೆ ಆರೋಗ್ಯ ಚೆನ್ನಾಗಿರತ್ತೆ, ಕರುಳಿನ ಖುಷಿಗಾಗಿ ಈ ಪದಾರ್ಥಗಳನ್ನು ಸೇವಿಸಿ

ದೇಹದಲ್ಲಿ ಯಾವುದೇ ಆರೋಗ್ಯ ಸಮಸ್ಯೆ ಆರಂಭವಾಗೋದು ಹೊಟ್ಟೆಯಿಂದಲೇ. ಹೊಟ್ಟೆಯನ್ನು ಚೆನ್ನಾಗಿ ಇಟ್ಟುಕೊಂಡರೆ ರೋಗಗಳು ನಮ್ಮಿಂದ ದೂರ ಇರುತ್ತವೆ. ಹೊಟ್ಟೆ ಉಬ್ಬರ, ಮಲಬದ್ಧತೆ, ಆಲಸ್ಯ ಹಾಗೂ ನಿದ್ದೆಯ ಸಮಸ್ಯೆ ಇದ್ದರೆ ಕರುಳಿನ ಆರೋಗ್ಯದ ಬಗ್ಗೆ ಗಮನ ಕೊಡೋದು ಮುಖ್ಯವಾಗುತ್ತದೆ. ಈ ಆಹಾರಗಳನ್ನು ಊಟದಲ್ಲಿ ಸೇರಿಸಿಕೊಂಡ್ರೆ ನಿಮ್ಮ ಹೊಟ್ಟೆ ಖುಷಿಪಡುತ್ತದೆ.

ಕಪ್ಪು ಜೀರಿಗೆ
ಕರಿ ಜೀರಿಗೆಯಲ್ಲಿ ಥೈಮೋಕ್ವಿನೋನ್‌ ಸಮೃದ್ಧವಾಗಿವೆ, ಇದು ಒಂದು ರೀತಿಯ ಪಾಲಿಫಿನಾಲ್ ಆಗಿದ್ದು ಹೊಟ್ಟೆಯ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಡಾರ್ಕ್‌ ಚಾಕೋಲೆಟ್‌
ಶೇ.೭೦ಕ್ಕಿಂತ ಹೆಚ್ಚು ಡಾರ್ಕ್‌ ಇರುವ ಚಾಕೋಲೆಟ್‌ಗಳನ್ನು ತಿನ್ನುವುದರಿಂದ ಹೊಟ್ಟೆ ಖುಷಿಯಾಗಿರುತ್ತದೆ. ಡಾರ್ಕ್ ಚಾಕೊಲೇಟ್ ಫ್ಲೇವನಾಯ್ಡ್‌ಗಳನ್ನು ಹೊಂದಿದ್ದು, ಇದು ನಿಮ್ಮ ಕರುಳಿಗೆ ಪ್ರಿಬಯಾಟಿಕ್ ಫೈಬರ್‌ ಒದಗಿಸುತ್ತದೆ. ಇದು ನಿಮ್ಮ ಮೆದುಳಿನ ಆರೋಗ್ಯವನ್ನು ಸುಧಾರಿಸುವ ಒಂದು ರೀತಿಯ ಪಾಲಿಫಿನಾಲ್ ಹೊಂದಿದೆ.

ಬ್ಲೂಬೆರಿ
ಇದು ಆಹಾರದ ಪಾಲಿಫಿನಾಲ್‌ಗಳ ಅತ್ಯಂತ ಪ್ರಬಲವಾದ ನೈಸರ್ಗಿಕ ಮೂಲಗಳಲ್ಲಿ ಸೇರಿದೆ. ಅಲ್ಲದೆ ಆಂಥೋಸಯಾನಿನ್ ಅನ್ನು ಹೊಂದಿದ್ದು ಉರಿ‌ಯೂತವನ್ನು ತಡೆಯುತ್ತದೆ.

ಬೆಳ್ಳುಳ್ಳಿ
ಬೆಳ್ಳುಳ್ಳಿ ಜೈವಿಕ ಸಕ್ರಿಯ ಸಂಯುಕ್ತಗಳ ಶಕ್ತಿಶಾಲಿ ಮಿಶ್ರಣವಾಗಿದ್ದು, ಹೆಚ್ಚಿನ ಸಾಂದ್ರತೆಯ ಪಾಲಿಫಿನಾಲ್‌ಗಳನ್ನು ಹೊಂದಿದೆ. ಇದು ಕ್ವೆರ್ಸೆಟಿನ್‌ನಲ್ಲಿ ಸಮೃದ್ಧವಾಗಿದ್ದು, ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುವ ಸಂಯುಕ್ತವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !