ಬೆಳಗಿನ ಉಪಹಾರಕ್ಕೆ ಯಾವಾಗಲೂ ಒಂದೇ ತರಹದ ಇಡ್ಲಿ ತಿಂದು ಬೇಜಾರಾಗಿದ್ದರೆ, ದೇಹಕ್ಕೆ ರಕ್ತದೊತ್ತಡ ಮತ್ತು ಹಿಮೋಗ್ಲೋಬಿನ್ ಹೆಚ್ಚಿಸುವ ಈ ಸೂಪರ್ ಹೆಲ್ತಿ ಬೀಟ್ರೂಟ್ ಇಡ್ಲಿ ಪ್ರಯತ್ನಿಸಿ.
ಬೇಕಾಗುವ ಸಾಮಗ್ರಿಗಳು:
ಇಡ್ಲಿ ಹಿಟ್ಟು – 2 ಕಪ್
ತುರಿದ ಬೀಟ್ರೂಟ್ – 1 ಕಪ್
ಹಸಿಮೆಣಸಿನಕಾಯಿ – 2
ಸಾಸಿವೆ, ಜೀರಿಗೆ – ತಲಾ 1 ಚಮಚ
ಎಣ್ಣೆ – 2 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ತಯಾರಿಸುವ ಸರಳ ಹಂತಗಳು:
ಮೊದಲು ತುರಿದ ಬೀಟ್ರೂಟ್ ಮತ್ತು ಹಸಿಮೆಣಸಿನಕಾಯಿಯನ್ನು ಸ್ವಲ್ಪ ನೀರು ಹಾಕಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಒಂದು ಪಾತ್ರೆಯಲ್ಲಿ ಎಣ್ಣೆ ಕಾಯಿಸಿ ಸಾಸಿವೆ, ಜೀರಿಗೆ ಒಗ್ಗರಣೆ ಮಾಡಿ. ಅದಕ್ಕೆ ಬೀಟ್ರೂಟ್ ಪೇಸ್ಟ್ ಹಾಕಿ 2 ನಿಮಿಷ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ.
ಈಗ ಈ ಪೇಸ್ಟ್ ಅನ್ನು ಇಡ್ಲಿ ಹಿಟ್ಟಿಗೆ ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇಡ್ಲಿ ತಟ್ಟೆಗೆ ಎಣ್ಣೆ ಸವರಿ, ಸಿದ್ಧಪಡಿಸಿದ ಹಿಟ್ಟನ್ನು ಹಾಕಿ 10 ರಿಂದ 12 ನಿಮಿಷಗಳ ಕಾಲ ಆವಿಯಲ್ಲಿ ಬೇಯಿಸಿ.
ಟ್ವಿಪ್ಸ್: ಬಿಸಿಬಿಸಿಯಾದ ಸಾಫ್ಟ್ ಬೀಟ್ರೂಟ್ ಇಡ್ಲಿಯನ್ನು ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್ ಜೊತೆ ಸವಿಯಲು ನೀಡಿ. ಇದು ನೋಡಲು ಆಕರ್ಷಕವಾಗಿದ್ದು, ಮಕ್ಕಳು ಕೂಡ ಇಷ್ಟಪಟ್ಟು ತಿನ್ನುತ್ತಾರೆ.



