June 19, 2026
Friday, June 19, 2026
spot_img

ಚಿಂತೆ ಬಿಡಿ, ತಿಂಡಿ ಮಾಡಿ 4 | ವೇಗವಾಗಿ ತೂಕ ಇಳಿಸಬೇಕೇ? ಹಾಗಿದ್ರೆ ಬ್ರೇಕ್‌ಫಾಸ್ಟ್‌ಗೆ ರೆಡಿ ಮಾಡಿ ಹೆಲ್ತಿ ಬೀಟ್ರೂಟ್ ಇಡ್ಲಿ

ಬೆಳಗಿನ ಉಪಹಾರಕ್ಕೆ ಯಾವಾಗಲೂ ಒಂದೇ ತರಹದ ಇಡ್ಲಿ ತಿಂದು ಬೇಜಾರಾಗಿದ್ದರೆ, ದೇಹಕ್ಕೆ ರಕ್ತದೊತ್ತಡ ಮತ್ತು ಹಿಮೋಗ್ಲೋಬಿನ್ ಹೆಚ್ಚಿಸುವ ಈ ಸೂಪರ್ ಹೆಲ್ತಿ ಬೀಟ್ರೂಟ್ ಇಡ್ಲಿ ಪ್ರಯತ್ನಿಸಿ.

ಬೇಕಾಗುವ ಸಾಮಗ್ರಿಗಳು:
ಇಡ್ಲಿ ಹಿಟ್ಟು – 2 ಕಪ್

ತುರಿದ ಬೀಟ್ರೂಟ್ – 1 ಕಪ್

ಹಸಿಮೆಣಸಿನಕಾಯಿ – 2

ಸಾಸಿವೆ, ಜೀರಿಗೆ – ತಲಾ 1 ಚಮಚ

ಎಣ್ಣೆ – 2 ಚಮಚ

ಉಪ್ಪು – ರುಚಿಗೆ ತಕ್ಕಷ್ಟು

ತಯಾರಿಸುವ ಸರಳ ಹಂತಗಳು:

ಮೊದಲು ತುರಿದ ಬೀಟ್ರೂಟ್ ಮತ್ತು ಹಸಿಮೆಣಸಿನಕಾಯಿಯನ್ನು ಸ್ವಲ್ಪ ನೀರು ಹಾಕಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಒಂದು ಪಾತ್ರೆಯಲ್ಲಿ ಎಣ್ಣೆ ಕಾಯಿಸಿ ಸಾಸಿವೆ, ಜೀರಿಗೆ ಒಗ್ಗರಣೆ ಮಾಡಿ. ಅದಕ್ಕೆ ಬೀಟ್ರೂಟ್ ಪೇಸ್ಟ್ ಹಾಕಿ 2 ನಿಮಿಷ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ.

ಈಗ ಈ ಪೇಸ್ಟ್‌ ಅನ್ನು ಇಡ್ಲಿ ಹಿಟ್ಟಿಗೆ ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇಡ್ಲಿ ತಟ್ಟೆಗೆ ಎಣ್ಣೆ ಸವರಿ, ಸಿದ್ಧಪಡಿಸಿದ ಹಿಟ್ಟನ್ನು ಹಾಕಿ 10 ರಿಂದ 12 ನಿಮಿಷಗಳ ಕಾಲ ಆವಿಯಲ್ಲಿ ಬೇಯಿಸಿ.

ಟ್ವಿಪ್ಸ್: ಬಿಸಿಬಿಸಿಯಾದ ಸಾಫ್ಟ್ ಬೀಟ್ರೂಟ್ ಇಡ್ಲಿಯನ್ನು ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್ ಜೊತೆ ಸವಿಯಲು ನೀಡಿ. ಇದು ನೋಡಲು ಆಕರ್ಷಕವಾಗಿದ್ದು, ಮಕ್ಕಳು ಕೂಡ ಇಷ್ಟಪಟ್ಟು ತಿನ್ನುತ್ತಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !