June 21, 2026
Sunday, June 21, 2026
spot_img

CRISPY| ಕೇವಲ 15 ನಿಮಿಷಗಳಲ್ಲಿ ಮಾಡಿ ಗರಿಗರಿಯಾದ ಕ್ರಿಸ್ಪಿ ಕಾರ್ನ್: ಸಂಜೆಯ ಸ್ನ್ಯಾಕ್ಸ್‌ಗೆ ಬೆಸ್ಟ್!

ರೆಸ್ಟೋರೆಂಟ್‌ ಶೈಲಿಯ ‘ಕ್ರಿಸ್ಪಿ ಕಾರ್ನ್ ಫ್ರೈ’ ಎಂದರೆ ಮಕ್ಕಳಿಂದ ದೊಡ್ಡವರವರೆಗೆ ಎಲ್ಲರಿಗೂ ಅಚ್ಚುಮೆಚ್ಚು. ಮಳೆಗಾಲದ ಸಂಜೆ ಅಥವಾ ಟೀ ಟೈಮ್‌ಗೆ ಬಿಸಿಬಿಸಿಯಾಗಿ, ಗರಿಗರಿಯಾಗಿ ತಿನ್ನಲು ಇದು ಅತ್ಯುತ್ತಮವಾದ ಸ್ನ್ಯಾಕ್ಸ್ ಆಗಿದೆ.  

ಬೇಕಾಗುವ ಸಾಮಗ್ರಿಗಳು:

ಸ್ವೀಟ್ ಕಾರ್ನ್ (ಸಿಹಿ ಜೋಳ)

ಕಾರ್ನ್ ಫ್ಲೋರ್

ಅಕ್ಕಿ ಹಿಟ್ಟು

ಮೈದಾ ಹಿಟ್ಟು

ಕಾಶ್ಮೀರಿ ಕೆಂಪು ಮೆಣಸಿನಕಾಯಿ ಪುಡಿ

ಕಾಳುಮೆಣಸಿನ ಪುಡಿ

ಚಾಟ್ ಮಸಾಲ

ನಿಂಬೆ ರಸ

ಕೊತ್ತಂಬರಿ ಸೊಪ್ಪು ಮತ್ತು ಈರುಳ್ಳಿ

ಉಪ್ಪು ಮತ್ತು ಎಣ್ಣೆ

ಮಾಡವ ವಿಧಾನ:

ಮೊದಲು 2 ಕಪ್ ಸ್ವೀಟ್ ಕಾರ್ನ್ ಅನ್ನು ಉಪ್ಪು ಹಾಕಿದ ನೀರಿನಲ್ಲಿ 4 ನಿಮಿಷ ಕುದಿಸಿ, ನಂತರ ನೀರನ್ನು ಸೋಸಬೇಕು. ಬಿಸಿ ಜೋಳಕ್ಕೆ 3 ಚಮಚ ಕಾರ್ನ್ ಫ್ಲೋರ್, 2 ಚಮಚ ಅಕ್ಕಿ ಹಿಟ್ಟು ಮತ್ತು ಉಪ್ಪು ಹಾಕಿ ಚೆನ್ನಾಗಿ ಬೆರೆಸಿ. ಕಾದ ಎಣ್ಣೆಯಲ್ಲಿ ಮಧ್ಯಮ ಉರಿಯಲ್ಲಿ 3-4 ನಿಮಿಷ ಜೋಳವು ಗರಿಗರಿಯಾಗುವವರೆಗೆ ಕರಿಯಬೇಕು. ನಂತರ ಕರಿದ ಜೋಳಕ್ಕೆ 1 ಚಮಚ ಚಾಟ್ ಮಸಾಲ, 1 ಚಮಚ ಖಾರದ ಪುಡಿ ಮತ್ತು 1 ಚಮಚ ನಿಂಬೆ ರಸ ಹಾಕಿ ಮಿಕ್ಸ್ ಮಾಡಿದರೆ ‘ಕ್ರಿಸ್ಪಿ ಕಾರ್ನ್ ಫ್ರೈ’ ಸಿದ್ಧವಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !