June 21, 2026
Sunday, June 21, 2026
spot_img

TRAVEL | ಮಳೆಗಾಲದ ಅಂದ ಸವಿಯೋದಕ್ಕೆ ಮಾನ್ಸೂನ್‌ ಟ್ರಿಪ್ಸ್‌, ನಮ್ಮ ಶಿವಮೊಗ್ಗದ ಬಜೆಟ್‌ ಫ್ರೆಂಡ್ಲಿ ತಾಣಗಳಿವು

ಮನೆಯಲ್ಲೇ ಕುಳಿತು ಅವರಿವರ ಇನ್ಸ್ಟಾ ಪೋಸ್ಟ್‌ ನೋಡುತ್ತಾ ಇವರೆಲ್ಲಾ ಎಷ್ಟು ಚಂದದ ಮಳೆಗಾಲದ ಟ್ರಿಪ್‌ ಮಾಡ್ತಿದ್ದಾರೆ ಅಂದುಕೊಳ್ಳೋ ಬದಲು ಬಜೆಟ್‌ನಲ್ಲಿ ಬೆಸ್ಟ್‌ ಟ್ರಿಪ್‌ ಮಾಡಬಹುದು. ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಅಂಡರ್‌ರೇಟೆಡ್‌. ಎಲ್ಲರೂ ಅದರ ಪಕ್ಕದಲ್ಲೇ ಇರುವ ಚಿಕ್ಕಮಗಳೂರಿನ ತಾಣಗಳ ಮೇಲೆ ಫೋಕಸ್‌ ಮಾಡ್ತಾರೆ. ಆದರೆ ಅರೆ ಮಲೆನಾಡು ಶಿವಮೊಗ್ಗದಲ್ಲಿಯೂ ಸಾಕಷ್ಟು ಕಣ್ತುಂಬುವ ಅದ್ಭುತ ತಾಣಗಳಿವೆ. ಶಿವಮೊಗ್ಗ ಸಿಟಿಯಲ್ಲಿ ಏನೆಲ್ಲಾ ಇದೆ? ಜಿಲ್ಲೆಯಲ್ಲಿ ಏನೆಲ್ಲಾ ಇದೆ? ಇಲ್ಲಿದೆ ಡೀಟೇಲ್ಸ್‌..

ಶಿವಮೊಗ್ಗ ಸಿಟಿ
ಶಿವಮೊಗ್ಗ ಸುತ್ತಮುತ್ತಲೇ ಏನಾದ್ರೂ ನೋಡಬೇಕು ಅನಿಸಿದ್ರೆ ಗಾಜನೂರು ಡ್ಯಾಂ, ತಾವರೆಕೊಪ್ಪ ಹುಲಿ ಮತ್ತು ಸಿಂಹಧಾಮ, ಅರಕೆರೆ ಶಿವಾಲಯ, ಶಿವಪ್ಪನಾಯಕನ ಅರಮನೆ, ಮಂಡಗದ್ದೆ, ಗಾಂಧಿ ಪಾರ್ಕ್‌ ಸುತ್ತಬಹುದು.

ಶಿವಮೊಗ್ಗ ಜಿಲ್ಲೆ ರೌಂಡ್ಸ್‌
ನಿಜವಾದ ಹಸಿರನ್ನು ಸವಿಯಬೇಕು ಎಂದು ಬಯಸೋದಾದ್ರೆ ಮೊದಲು ತೀರ್ಥಹಳ್ಳಿಯ ಕಡೆ ಹೆಜ್ಜೆ ಹಾಕಿ, ಹಚ್ಚ ಹಸಿರಿನ ಮಧ್ಯೆ ನಿಮ್ಮ ಪಯಣ ಸಾಗುತ್ತದೆ. ಸಕ್ರೇಬೈಲು,ಕವಲೇದುರ್ಗ, ತೀರ್ಥಹಳ್ಳಿ ಬ್ರಿಡ್ಜ್‌, ಕವಿಮನೆ ಕುಪ್ಪಳ್ಳಿ, ಶೃಂಗೇರಿ, ಸಿರಿಮನೆ ಫಾಲ್ಸ್‌, ಮತ್ಸಕನ್ಯ ಫಾಲ್ಸ್‌ ಅದ್ಭುತವಾಗಿ ಇರುತ್ತದೆ. ದಾರಿಯಲ್ಲಿ ಮಂಗಗಳಿಗೆ ಜಾಗ್ರತೆ.


ಸಾಗರ ಭಾಗಕ್ಕೆ ನೀವು ಪ್ರಯಾಣ ಮಾಡುವುದಾದರೆ ವರದಮೂಲ, ಸಿಗಂದೂರು, ಹೆಗ್ಗೋಡು, ಗೌರಿಕೆರೆ, ಜೋಗಜಲಪಾತ, ಕೆಳದಿ-ಇಕ್ಕೇರಿ, ಹೊನ್ನೆಮರಡು,ವರದಹಳ್ಳಿ ಕಡೆ ಹೋಗಬಹುದು. ಇಲ್ಲಿ ಇತಿಹಾಸ, ಕಲೆಯ ಮಿಶ್ರಣವಿದೆ.

ಇನ್ನು ನಿಮಗೆ ಸಣ್ಣ ತೊರೆ ಇಷ್ಟ, ನೆಮ್ಮದಿಯ ವಾತಾವರಣ ಇಷ್ಟ ಅನ್ನೋದಾದ್ರೆ ಅಂದದ ಮೃಗವಧೆ ದೇಗುಲಕ್ಕೆ ಭೇಟಿ ನೀಡಿ. ರಾಮ ಜಿಂಕೆಯನ್ನು ಕೊಂದ ಸ್ಥಳವಿದು, ಇಲ್ಲಿ ಪಾಂಡವರು ವನವಾಸ ಮಾಡಿದ್ದರು ಎಂದು ಹೇಳಲಾಗುತ್ತದೆ.

ಟ್ರೆಕ್ಕಿಂಗ್‌ ಪ್ರಿಯರಿಗೂ ಶಿವಮೊಗ್ಗ ಜಿಲ್ಲೆಯಲ್ಲಿ ಅವಕಾಶವಿದೆ. ಅಂಡರ್‌ರೇಟೆಡ್‌ ಎನಿಸಿಕೊಳ್ಳುವ ಕೊಡಚಾದ್ರಿ ಬೆಟ್ಟಕ್ಕೆ ಹೋಗಿನೋಡಿ. ಕಾಲದಾರಿ ಅಥವಾ ಜೀಪ್‌ರೈಡ್‌ನಲ್ಲಿ ನೀವು ಹೋಗಬಹುದು. ಕಾಲದಾರಿಯಾದರೆ ಒಂದಿಡೀ ದಿನ ಬೇಕಾಗಬಹುದು. ಜೀಪ್‌ ರೈಡ್‌ ಆದರೆ ಮೂರರಿಂದ ನಾಲ್ಕು ಗಂಟೆಗಳನ್ನು ಮೀಸಲಿಡಬೇಕು. ಕೊಲ್ಲೂರು, ನಿಟ್ಟೂರು ಇನ್ನಿತರ ಸ್ಥಳಗಳಿಂದ ಜೀಪ್‌ ವ್ಯವಸ್ಥೆ ಇದೆ.

ಇನ್ನು ಸನ್‌ರೈಸ್‌ ನೋಡಬೇಕು ಎಂದಾದರೆ ಮಿಸ್‌ ಮಾಡದೇ ಆಗುಂಬೆ ಘಾಟ್‌ ಸನ್‌ಸೆಟ್‌ ಹಾಗೂ ಸನ್‌ರೈಸ್‌ ಪಾಯಿಂಟ್‌ಗೆ ಭೇಟಿ ನೀಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !