ವಾತಾವರಣ ಬದಲಾದಂತೆ ಕೂದಲಿನ ಆರೋಗ್ಯದ ಬಗ್ಗೆ ಗಮನಕೊಡುವುದು ಮುಖ್ಯವಾಗಿದೆ. ದುಬಾರಿ ಸೆರಮ್‌ಗಳ ಬದಲು ಮನೆಯಲ್ಲಿಯೇ ಮೆಂತ್ಯೆಯ ಹೇರ್‌ಪ್ಯಾಕ್ ಮಾಡಿಕೊಳ್ಳಿ. ಇದನ್ನು ಹಚ್ಚಿದರೆ ಕೂದಲಿನ ಬುಡ ಸ್ಟ್ರಾಂಗ್ ಆಗಿ ಕೂದಲು ಉದುರೋದು ನಿಲ್ಲುತ್ತದೆ. ಇನ್ನು ಹೊಟ್ಟಿನ ಸಮಸ್ಯೆ ಇರುವವರು ಕೂಡ ಮೆಂತ್ಯೆಯ ಫೇಸ್‌ಪ್ಯಾಕ್ ಟ್ರೈ ಮಾಡಬಹುದು.
ಹೇಗೆ ತಯಾರಿಸಬಹುದು?
ಎರಡು ರೀತಿ ಇದನ್ನು ತಯಾರಿಸಬಹುದು. ಮೊದಲ ವಿಧಾನ ಹೀಗಿದೆ..
ಮೂರರಿಂದ ನಾಲ್ಕು ಸ್ಪೂನ್ ಮೆಂತ್ಯೆ ಕಾಳುಗಳನ್ನು ರಾತ್ರಿಯೇ ನೀರಿನಲ್ಲಿ ನೆನೆಸಿ ಇಡಿ. ಮರುದಿನ ಇದನ್ನು ಮಿಕ್ಸಿಗೆ ಹಾಕಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ. ಉತ್ತಮ ಫಲಿತಾಂಶಕ್ಕಾಗಿ ಮೊಸರು ಅಥವಾ ಕೊಬ್ಬರಿ ಎಣ್ಣೆ ಮಿಕ್ಸ್ ಮಾಡಿ. ಬುಡದಿಂದ ಕೂದಲ ತುದಿವರೆಗೂ ಮೆಂತ್ಯೆ ಪೇಸ್ಟ್ ಹಚ್ಚಿ. ನಲವತ್ತು ನಿಮಿಷ ಬಿಟ್ಟು ತಲೆಸ್ನಾನ ಮಾಡಬಹುದು.
ಎರಡನೇ ವಿಧಾನ
ಮೆಂತ್ಯೆಕಾಳುಗಳ ಜೊತೆ ಬಿಸಿಲಿನಲ್ಲಿ ಒಣಗಿಸಿದ ಕರಿಬೇವಿನಸೊಪ್ಪನ್ನು ಹಾಕಿ ಪುಡಿ ಮಾಡಿಕೊಳ್ಳಿ. ನಿಮಗೆ ಯಾವಾಗ ಬೇಕೋ ಆಗ ಮುಕ್ಕಾಲು ಗಂಟೆ ಮುಂಚೆ ಇದಕ್ಕೆ ನೀರು ಹಾಕಿ ಇಡಿ. ಆಗ ಪೇಸ್ಟ್ ತಯಾರಾಗುತ್ತದೆ. ಬುಡದಿಂದ ಕೂದಲ ತುದಿವರೆಗೂ ಮೆಂತ್ಯೆ ಪೇಸ್ಟ್ ಹಚ್ಚಿ. ನಲವತ್ತು ನಿಮಿಷ ಬಿಟ್ಟು ತಲೆಸ್ನಾನ ಮಾಡಬಹುದು.



