August 20, 2026
Thursday, August 20, 2026
spot_img

ಬಿಎಂಟಿಸಿ ಬೆಲೆ ಏರಿಕೆ ಬಿಸಿ, ದೀರ್ಘ ಪ್ರಯಾಣದ ಬಸ್ ಪಾಸ್ ದರ ಇಂದಿನಿಂದ ದುಬಾರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನಲ್ಲಿ ಬಿಎಂಟಿಸಿ ಕಾರ್ಯವ್ಯಾಪ್ತಿ ವಿಸ್ತರಣೆ ಆಗಿದೆ, ಅದಕ್ಕೆ ತಕ್ಕಂತೆ ಇದೀಗ ದೀರ್ಘ ಪ್ರಯಾಣದ ಬಸ್‌ಪಾಸ್‌ ದರವನ್ನು 1200 ರೂ.ನಿಂದ 1500 ರೂ.ಗೆ ಹೆಚ್ಚಳ ಮಾಡಲಾಗಿದೆ.

ಈ ಪರಿಷ್ಕೃತ ದರ ಇಂದಿನಿಂದಲೇ ಜಾರಿಗೆ ಬರಲಿದೆ. ಸಾಮಾನ್ಯ ಮಾಸಿಕ ಪಾಸಿನ ದರ 1200 ರೂ. ಇರಲಿದೆ. ಇನ್ನು ಬೆಂಗಳೂರಿನ ಹೊರಜಿಲ್ಲೆ ಅಥವಾ ತಾಲೂಕುಗಳಿಗೆ ಪ್ರಯಾಣಿಸುವವರಿಗಾಗಿ ವಿಸ್ತಾರ ಮಾಸಿಕ ಪಾಸ್‌ ಪರಿಚಯಿಸಲಾಗಿದೆ. ಇದಕ್ಕೆ 1500 ರೂ. ನಿಗದಿಪಡಿಸಲಾಗಿದೆ.

ಈಗಿನ್ನೂ ಟಿಕೆಟ್‌ ದರ ಏರಿಕೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಅದಕ್ಕೂ ಮುನ್ನವೇ ದರ ಏರಿಕೆ ಮಾಡಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿಂದೆ ಬೆಂಗಳೂರು ನಗರ ಕೇಂದ್ರದಿಂದ ಕೇವಲ 40 ರಿಂದ 50 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದ ಬಸ್ಸುಗಳು, ಈಗ ಸರ್ಕಾರದ ಆದೇಶದಂತೆ 65 ರಿಂದ 70 ಕಿಲೋಮೀಟರ್ ದೂರದ ಕನಕಪುರ, ರಾಮನಗರ, ಚನ್ನಪಟ್ಟಣ, ಮಾಗಡಿ, ಚಿಕ್ಕಬಳ್ಳಾಪುರ ಮತ್ತು ಮಾಲೂರು ವರೆಗೂ ಸಂಚಾರ ವಿಸ್ತರಿಸಿವೆ. ಈ ವಿಸ್ತರಿತ ಪ್ರದೇಶಗಳಲ್ಲಿ ಸಂಚರಿಸುವ ಸಾರ್ವಜನಿಕರ ಅನುಕೂಲಕ್ಕಾಗಿ 1500 ರೂಪಾಯಿಯ ವಿಸ್ತಾರ ಮಾಸಿಕ ಪಾಸ್ ನೀಡಲಾಗುತ್ತಿದೆ ಎಂದು ಹೇಳಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !