October 9, 2026
Friday, October 9, 2026
spot_img

ವರ್ಷಗಳ ತಪಸ್ಸಿಗೆ ಫಲ, ವೈಭವ್‌ ಸೂರ್ಯವಂಶಿ ಕೈಸೇರಿದ ಟೀಂ ಇಂಡಿಯಾ ಜೆರ್ಸಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಎಲ್ಲರೂ ಕ್ರಿಕೆಟಿಗರಾಗುವ ಕನಸು ಕಾಣುತ್ತಾರೆ ಆದರೆ ಎಲ್ಲೋ ಕೆಲವರಿಗೆ ಮಾತ್ರ ಲಕ್‌, ಹಾರ್ಡ್‌ವರ್ಕ್‌, ತ್ಯಾಗ ಸಾಥ್‌ ನೀಡುತ್ತದೆ. ಈ ಸಾಲಿನಲ್ಲಿ ಯುವ ಕ್ರಿಕೆಟಿಗ ವೈಭವ್‌ ಸೂರ್ಯವಂಶಿ ಕೂಡ ಸೇರಿದ್ದಾರೆ.

ಐರ್ಲೆಂಡ್‌ ಹಾಗೂ ಇಂಗ್ಲೆಂಡ್‌ ವಿರುದ್ಧದ ಟಿ20 ಸರಣಿಗೆ ವೈಭವ್‌ ಸೂರ್ಯವಂಶಿ ಆಯ್ಕೆಯಾಗಿದ್ದು, ಭಾರತ ಹಿರಿಯರ ತಂಡದ ಜೆರ್ಸಿಯನ್ನು ಪಡೆದುಕೊಂಡಿದ್ದಾರೆ. ತಮ್ಮ ಹೆಸರಿನ ಜೆರ್ಸಿಯನ್ನು ಕಂಡು ಭಾವುಕರಾಗಿರುವ ಸೂರ್ಯವಂಶಿ ಇದು ನನ್ನ ಜೀವಮಾನದ ಕನಸು, ಏನನ್ನೂ ನಂಬೋಕೆ ಆಗುತ್ತಿಲ್ಲ ಎಂದಿದ್ದಾರೆ.

ವೈಭವ್‌ಗೆ ಜೆರ್ಸಿ ನೀಡಿದ ಕ್ಷಣದ ವಿಡಿಯೋವನ್ನು ಬಿಸಿಸಿಐ ಹಂಚಿಕೊಂಡಿದೆ. ಈ ಜೆರ್ಸಿಯೊಂದಿಗೆ ವೈಭವ್ ಸೂರ್ಯವಂಶಿ ಟೀಮ್ ಇಂಡಿಯಾ ಪರ ಕಣಕ್ಕಿಳಿದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಏಕೆಂದರೆ ಭಾರತದ ಪರ ಯಾವುದೇ ಆಟಗಾರ 15ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಪಂದ್ಯವಾಡಿಲ್ಲ.

ಒಂದು ವೇಳೆ 15 ವರ್ಷದ ವೈಭವ್ ಸೂರ್ಯವಂಶಿ ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಅಥವಾ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕಣಕ್ಕಿಳಿದರೆ ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ಪಂದ್ಯವಾಡಿದ ದಾಖಲೆ ನಿರ್ಮಿಸಲಿದ್ದಾರೆ. ಈ ಮೂಲಕ ಸಚಿನ್ ತೆಂಡೂಲ್ಕರ್ ಅವರ 37 ವರ್ಷಗಳ ಹಳೆಯ ದಾಖಲೆಯನ್ನು ಮುರಿದು ಹೊಸ ಇತಿಹಾಸ ಬರೆಯಲಿದ್ದಾರೆ.

Must Read