ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂದಿನ ತಿಂಗಳು ನಟ ಆಮಿರ್ ಖಾನ್ ಗೌರಿ ಸ್ಟ್ರಾಟ್ ಅವರೊಂದಿಗೆ ಸರಳವಾಗಿ ಮದುವೆಯಾಗಲಿದ್ದಾರೆ. ಈ ಸುದ್ದಿ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಆಮಿರ್ ಖಾನ್ ಕಳವಳ ವ್ಯಕ್ತಪಡಿಸಿದ್ದಾರೆ.

ನನ್ನ ಮದುವೆ ಬಗ್ಗೆ ಪರ್ಸನಲ್ ಲೈಫ್ ಬಗ್ಗೆ ಜನರಿಗೆ ಯಾಕಿಷ್ಟು ಆಸಕ್ತಿ? ಮದುವೆ ಅನ್ನೋದು ಖಾಸಗಿ ವಿಷಯ ಅಲ್ವಾ? ನಮ್ಮ ಖಾಸಗಿತನಕ್ಕೆ ಯಾಕೆ ಧಕ್ಕೆ ತರಬೇಕು? ನನ್ನ ಮದುವೆ ಬಗ್ಗೆ ಜನ ತೋರಿಸುತ್ತಿರುವ ಆಸಕ್ತಿಯನ್ನು ಸಿನಿಮಾಗಳು, ಕಲೆ ಈ ಬಗ್ಗೆ ತೋರಿಸಿದ್ರೆ ಉತ್ತಮವಾಗಿರುತ್ತದೆ ಎಂದಿದ್ದಾರೆ.
ತಮ್ಮ ವಿವಾಹದ ಬಗ್ಗೆ ಹರಡಿರುವ ವದಂತಿಗಳಿಗೆ ತೆರೆ ಎಳೆದಿರುವ ಆಮಿರ್ ಖಾನ್, ಯಾವುದೇ ಅದ್ಧೂರಿ ಸಮಾರಂಭವನ್ನು ಆಯೋಜಿಸುತ್ತಿಲ್ಲ ಎಂದು ಹೇಳಿದ್ದಾರೆ. ಈ ಮದುವೆಯು ಅತ್ಯಂತ ಸರಳ ಹಾಗೂ ಖಾಸಗಿಯಾಗಿ ನಡೆಯಲಿದೆ. ಮನೆಯಲ್ಲಿಯೇ ಕುಟುಂಬದ ಸದಸ್ಯರು ಮತ್ತು ಆಪ್ತರ ಸಮ್ಮುಖದಲ್ಲಿ ಸರಳವಾಗಿ ನೋಂದಾಯಿತ ವಿವಾಹ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ.

ಆಮೀರ್ ಖಾನ್‌ಗೆ ಇದು ಮೂರನೇ ಮದುವೆ, ಮೊದಲು ರೀನಾ ದತ್ತಾ ಅವರನ್ನು ಮದುವೆಯಾಗಿದ್ದ ಆಮೀರ್‌ಗೆ ಇಬ್ಬರು ಮಕ್ಕಳಿದ್ದಾರೆ. ನಂತರ ನಿರ್ದೇಶಕಿ ಕಿರಣ್ ರಾವ್ ಅವರನ್ನು ಮದುವೆಯಾದರು. ಅವರಿಗೆ ಒಬ್ಬ ಮಗ ಇದ್ದಾನೆ. ಕಿರಣ್ ಹಾಗೂ ಆಮೀರ್ ಈಗಲೂ ಆತ್ಮೀಯ ಸ್ನೇಹಿತರು. ಇದೀಗ ಬೆಂಗಳೂರು ಮೂಲದ ಗೌರಿ ಅವರನ್ನು ಆಮೀರ್ ಮದುವೆಯಾಗಲಿದ್ದಾರೆ.



