October 16, 2026
Friday, October 16, 2026
spot_img

ಉಕ್ರೇನ್‌ನಲ್ಲಿ ಭಾರತೀಯ ಸೈನಿಕರ ನಿಯೋಜನೆ? ಹೊಸ ಪುಸ್ತಕದಲ್ಲಿ ಸ್ಫೋಟಕ ಮಾಹಿತಿ ಬಹಿರಂಗ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಷ್ಯಾ ಮತ್ತು ಉಕ್ರೇನ್ ನಡುವಿನ ಭೀಕರ ಯುದ್ಧಕ್ಕೆ ವಿರಾಮ ಹಾಡಲು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ (JD Vance) ಅವರು ಭಾರತೀಯ ಸೈನಿಕರನ್ನು ಬಳಸಿಕೊಳ್ಳಲು ಗಂಭೀರ ಯೋಜನೆ ರೂಪಿಸಿದ್ದರು ಎಂಬ ಸ್ಫೋಟಕ ಮಾಹಿತಿ ಈಗ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಜೆ.ಡಿ. ವ್ಯಾನ್ಸ್ ಅವರ ರಹಸ್ಯ ಪ್ರಸ್ತಾಪವೇನು?

ಉಕ್ರೇನ್‌ನಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಅಲ್ಲಿ ‘ಶಾಂತಿಪಾಲನಾ ಪಡೆ’ಯಾಗಿ ಭಾರತ ಅಥವಾ ಸೌದಿ ಅರೇಬಿಯಾದ ಸೇನೆಯನ್ನು ನಿಯೋಜಿಸಬೇಕು ಎಂಬುದು ವ್ಯಾನ್ಸ್ ಅವರ ಗಂಭೀರ ಆಲೋಚನೆಯಾಗಿತ್ತು. ಯುದ್ಧ ಪೀಡಿತ ಪ್ರದೇಶದಲ್ಲಿ ಮೂರನೇ ರಾಷ್ಟ್ರದ ಸೈನಿಕರನ್ನು ಬಳಸಿಕೊಂಡು ಪರಿಸ್ಥಿತಿ ನಿಯಂತ್ರಿಸುವುದು ಇದರ ಉದ್ದೇಶವಾಗಿತ್ತು.

ಡೊನಾಲ್ಡ್ ಟ್ರಂಪ್ ನೇರ ತಿರಸ್ಕಾರ!

ಆದರೆ, ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರ ಈ ಕಾರ್ಯತಂತ್ರದ ಪ್ರಸ್ತಾಪವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಒಪ್ಪಲಿಲ್ಲ. ಭಾರತ ಅಥವಾ ಸೌದಿ ಸೇನೆಯನ್ನು ಕಳುಹಿಸುವ ಈ ಯೋಜನೆಯನ್ನು ಟ್ರಂಪ್ ನೇರವಾಗಿಯೇ ತಿರಸ್ಕರಿಸಿದ್ದರು ಎಂದು ತಿಳಿದುಬಂದಿದೆ.

ಹೊಸ ಪುಸ್ತಕದಲ್ಲಿ ‘ಶ್ವೇತಭವನ’ದ ರಹಸ್ಯ ಬಹಿರಂಗ

ನ್ಯೂಯಾರ್ಕ್ ಟೈಮ್ಸ್ ಪತ್ರಕರ್ತರಾದ ಮ್ಯಾಗಿ ಹ್ಯಾಬರ್ಮನ್ ಮತ್ತು ಜೊನಾಥನ್ ಸ್ವಾನ್ ಜಂಟಿಯಾಗಿ ಬರೆದಿರುವ ‘Regime Change: Inside the Imperial Presidency of Donald Trump’ ಎಂಬ ಹೊಸ ಕೃತಿಯಲ್ಲಿ ಈ ರಹಸ್ಯ ಕಾರ್ಯತಂತ್ರದ ಬಗ್ಗೆ ಸಂಪೂರ್ಣ ವಿವರಣೆ ನೀಡಲಾಗಿದೆ. ಸದ್ಯ ಈ ವಿಚಾರ ಅಂತಾರಾಷ್ಟ್ರೀಯ ರಾಜತಾಂತ್ರಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

Must Read