ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಆರ್ಪುರಂ ತ್ರಿಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿ ಶ್ವೇತಾ ಪುದುಚೇರಿಯಲ್ಲಿ ಸಿಕ್ಕಿಬಿದ್ದಿದ್ದಾಳೆ. ತಂದೆ, ತಾಯಿ ಹಾಗೂ ತಂಗಿಯನ್ನು ಮರ್ಡರ್ ಮಾಡಿ ಬಾಯ್ಫ್ರೆಂಡ್ ಜೊತೆ ಓಡಿಹೋಗಿದ್ದ ಶ್ವೇತಾಳನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಮತ್ತೋರ್ವ ಆರೋಪಿ ಕೆನತ್ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಶ್ವೇತಾ ಕುಟುಂಬದ ಮನೆಯಲ್ಲಿ ಪೊಲೀಸರು ಹುಟುಕಾಟ ನಡೆಸಿದ್ದು, ಶ್ವೇತಾ ಪರ್ಸನಲ್ ಡೈರಿ ಪೊಲೀಸರಿಗೆ ಸಿಕ್ಕಿದೆ. ಇದರಲ್ಲಿ ಶ್ವೇತಾ ನನಗೆ ಬೇಸರವಾಗ್ತಿದೆ, ನಾನು ಒಂಟಿ ಅನಿಸ್ತಿದೆ, ನಾನು ಖುಷಿಯಾಗಿದ್ದೇನೋ ಅಥವಾ ಡಿಪ್ರೆಶನ್ನಲ್ಲಿ ಇದ್ದೀನೋ ಗೊತ್ತಾಗ್ತಾ ಇಲ್ಲ ಎನ್ನುವ ವಿಚಿತ್ರ ಬರಹಗಳನ್ನು ಮಿಕ್ಸ್ಡ್ ಫೀಲಿಂಗ್ಸ್ ಬಗ್ಗೆ ಬರೆದಿದ್ದಾರೆ.
ಕಳೆದ ಎರಡು ದಿನಗಳಿಂದ ಒಂದು ಕಡೆ ನಿಲ್ಲದೇ ಆರೋಪಿ ಶ್ವೇತಾ ಹಾಗೂ ಪ್ರಿಯಕರ ಕೆನತ್ ಸಂಚಾರ ಮಾಡುತ್ತಿದ್ದರು. ಇವರಿಬ್ಬರ ಪತ್ತೆಗಾಗಿ ವೈಟ್ ಫೀಲ್ಡ್ ವಿಭಾಗದ ಆರು ವಿಶೇಷ ಪೊಲೀಸ್ ತಂಡಗಳು ಶೋಧ ಕಾರ್ಯ ನಡೆಸುತ್ತಿದ್ದರು. ಇದೀಗ ಶ್ವೇತಾ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದು, ಪ್ರಿಯಕರನಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ.



