June 24, 2026
Wednesday, June 24, 2026
spot_img

CINE | ಯಶ್ ಗ್ಯಾಂಗ್ ಸೇರಿದ ಹಾಲಿವುಡ್ ಸ್ಟಾರ್ ಟಿಟಿಯಾನಾ: ಜಾಲತಾಣದಲ್ಲಿ ಧೂಳೆಬ್ಬಿಸುತ್ತಿದೆ ಹೊಸ ಲುಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಗೀತು ಮೋಹನ್ ದಾಸ್ ನಿರ್ದೇಶನದ ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾದ ಬಿಡುಗಡೆ ದಿನಾಂಕ ಅಧಿಕೃತಗೊಂಡಿದ್ದು, ಆಗಸ್ಟ್ 26ರಂದು ಜಾಗತಿಕವಾಗಿ ತೆರೆಕಾಣಲಿದೆ. ಯಶ್ ನಾಯಕನಾಗಿದ್ದರೂ, ಇದು ಸಂಪೂರ್ಣ ಮಹಿಳಾ ಪ್ರಧಾನ ಕಥಾಹಂದರ ಹೊಂದಿರಲಿದೆ ಎಂಬ ಚರ್ಚೆ ಗಾಂಧಿನಗರದಲ್ಲಿ ಜೋರಾಗಿದೆ. ಚಿತ್ರದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ ಮತ್ತು ಹುಮಾ ಖುರೇಷಿ ಎಂಬ ಐವರು ಬಲಾಢ್ಯ ನಾಯಕಿಯರಿದ್ದಾರೆ.

ಯಶ್ ಗ್ಯಾಂಗ್ ಸೇರಿದ ಹಾಲಿವುಡ್ ನಟಿ ಟಿಟಿಯಾನಾ!

ಈ ತಾರಾಗಣದ ಜೊತೆಗೆ ಈಗ ಹಾಲಿವುಡ್ ನಟಿ ಹಾಗೂ ಪ್ರಸಿದ್ಧ ಕೊರಿಯೋಗ್ರಾಫರ್ ಟಿಟಿಯಾನಾ (Titiana) ಸೇರ್ಪಡೆಯಾಗಿದ್ದಾರೆ. ಚಿತ್ರದಲ್ಲಿ ಯಶ್ ಅವರ ‘ರಾಯ ಗ್ಯಾಂಗ್’ನ ಪ್ರಮುಖ ಸದಸ್ಯೆಯಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಟಿಟಿಯಾನಾ ಅವರ ‘ಟಾಕ್ಸಿಕ್’ ಸಿನಿಮಾದ ಎನ್ನಲಾದ ಸಖತ್ ಹಾಟ್ ಪೋಸ್ಟರ್ ಒಂದು ಅಭಿಮಾನಿಗಳ ಪೇಜ್‌ಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಸ್ವತಃ ಟಿಟಿಯಾನಾ ತಮ್ಮ ಇನ್‌ಸ್ಟಾಗ್ರಾಂ ಬಯೋದಲ್ಲಿ ‘ಟಾಕ್ಸಿಕ್ ನಟಿ’ ಎಂದು ಬರೆದುಕೊಂಡಿರುವುದು ಕುತೂಹಲ ಮೂಡಿಸಿದೆ.

ಕುಂಫು ಪ್ರವೀಣೆ, ಶೂಟಿಂಗ್ ಎಕ್ಸ್‌ಪರ್ಟ್!

ಟಿಟಿಯಾನಾ ಕೇವಲ ನಟಿಯಷ್ಟೇ ಅಲ್ಲ, ಅತ್ಯುತ್ತಮ ನೃತ್ಯಗಾರ್ತಿ, ಕುಂಫು ಪ್ರವೀಣೆ ಹಾಗೂ ರಿಯಲ್ ಲೈಫ್ ಶೂಟಿಂಗ್ ಎಕ್ಸ್‌ಪರ್ಟ್ ಕೂಡ ಹೌದು. ಅಮೆರಿಕದ ಶೂಟಿಂಗ್ ರೇಂಜ್‌ನಲ್ಲಿ ಅವರು ನಡೆಸುವ ಟಾರ್ಗೆಟ್ ಶೂಟಿಂಗ್ ವಿಡಿಯೋಗಳು ಸದಾ ವೈರಲ್ ಆಗುತ್ತವೆ. ಇವರ ಶೂಟಿಂಗ್ ಸ್ಪಾಟ್‌ಗೆ ಈ ಹಿಂದೆ ಯಶ್ ಹಾಗೂ ಹಲವು ಹಾಲಿವುಡ್ ಸ್ಟಾರ್‌ಗಳು ಭೇಟಿ ನೀಡಿದ್ದರು. ಚಿತ್ರದಲ್ಲಿ ಇವರ ಆಕ್ಷನ್ ಸೀಕ್ವೆನ್ಸ್ ಹೈಲೈಟ್ ಆಗಿರಲಿದ್ದು, ಸಿನಿಮಾದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !