June 24, 2026
Wednesday, June 24, 2026
spot_img

ಕ್ರಿಕೆಟ್ ಬೈಬಲ್ ‘ವಿಸ್ಡನ್’ ಕವರ್ ಪೇಜ್‌ಗೆ ಎಂಟ್ರಿ ಕೊಟ್ಟ ಭಾರತದ ಯುವ ಸೆನ್ಸೇಷನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ರಿಕೆಟ್ ಜಗತ್ತಿನ ಅತ್ಯಂತ ಪ್ರತಿಷ್ಠಿತ ನಿಯತಕಾಲಿಕೆ, “ಕ್ರಿಕೆಟ್‌ನ ಬೈಬಲ್” ಎಂದೇ ಖ್ಯಾತಿಯಾಗಿರುವ ಇಂಗ್ಲೆಂಡ್‌ನ ‘ವಿಸ್ಡನ್’ ಮುಖಪುಟದಲ್ಲಿ ಭಾರತದ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಮಿಂಚಿದ್ದಾರೆ. ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡದಿದ್ದರೂ, ಇಷ್ಟು ಕಿರಿಯ ವಯಸ್ಸಿಗೆ ವಿಸ್ಡನ್ ಕವರ್ ಪೇಜ್‌ನಲ್ಲಿ ಸ್ಥಾನ ಪಡೆದ ವಿಶ್ವದ ಅಪರೂಪದ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

‘ದಾಖಲೆಗಳನ್ನು ಧೂಳೀಪಟ ಮಾಡಿದ ಹುಡುಗ’

ವಿಸ್ಡನ್ ತನ್ನ ನೂತನ ಸಂಚಿಕೆಯ ಮುಖಪುಟದಲ್ಲಿ ವೈಭವ್ ಫೋಟೋ ಬಳಸಿ, “ಕ್ರಿಕೆಟ್ ದಾಖಲೆಗಳನ್ನು ಧೂಳೀಪಟ ಮಾಡಿದ ಹುಡುಗ” ಎಂಬ ವಿಶೇಷ ಕ್ಯಾಪ್ಷನ್ ನೀಡಿದೆ. ಈ ಸಂಚಿಕೆಯಲ್ಲಿ ವೈಭವ್ ಅವರ ಸ್ಫೋಟಕ ಬ್ಯಾಟಿಂಗ್ ಶೈಲಿ ಹಾಗೂ ಆಧುನಿಕ ಕ್ರಿಕೆಟ್‌ಗೆ ಅವರ ಕೊಡುಗೆಯ ಬಗ್ಗೆ ಆಳವಾದ ವಿಶ್ಲೇಷಣೆ ಮಾಡಲಾಗಿದೆ. ಯುವ ದಾಂಡಿಗ ಇಷ್ಟು ಸಣ್ಣ ವಯಸ್ಸಿನಲ್ಲೇ ಒತ್ತಡವನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಅವರ ಮಾರ್ಗದರ್ಶಕ ಸುಬಿನ್ ಭರುಚಾ ಹಂಚಿಕೊಂಡಿದ್ದಾರೆ.

ದಿಗ್ಗಜರ ಶ್ಲಾಘನೆ

ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್ ಈ ಸಂಚಿಕೆಯಲ್ಲಿ ವೈಭವ್ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದು, “ನನ್ನ ಜೀವನದಲ್ಲಿ ನಾನು ಕಂಡ ಅತ್ಯುತ್ತಮ ಟಿ20 ಬ್ಯಾಟಿಂಗ್ ಪ್ರತಿಭೆ ವೈಭವ್” ಎಂದು ಬಣ್ಣಿಸಿದ್ದಾರೆ. 1864 ರಲ್ಲಿ ಜಾನ್ ವಿಸ್ಡನ್ ಸ್ಥಾಪಿಸಿದ ಈ ನಿಯತಕಾಲಿಕೆಯಲ್ಲಿ ಸ್ಥಾನ ಪಡೆಯುವ ಮೂಲಕ ವೈಭವ್ ಸೂರ್ಯವಂಶಿ ಜಾಗತಿಕ ಕ್ರಿಕೆಟ್‌ನಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !