June 25, 2026
Thursday, June 25, 2026
spot_img

ಇಂದು ಮಂಗಳೂರಿಗೆ ಬಂದ್ರೂ ಯಾರಿಗೂ ನೋಡೋಕೆ ಸಿಗೋದಿಲ್ಲ ಶಾರುಖ್‌ ಖಾನ್‌, ಯಾಕೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಾಲಿವುಡ್‌ ನಟ ಶಾರುಖ್‌ ಖಾನ್‌ ಇಂದು ಮಂಗಳೂರಿಗೆ ಭೇಟಿ ನೀಡ್ತಿದ್ದಾರೆ. ಐಕಾನಿಕ್‌ ಸ್ಟಾರ್‌ ಒಬ್ಬರು ಊರಿಗೆ ಬರ್ತಿದ್ದಾರೆ ಅಂದ್ರೆ ಜನರು ಮುಗಿಬೀಳೋದು ಮಾಮೂಲಿ. ಆದರೆ ಈ ಬಾರಿ ಶಾರುಖ್‌ ಖಾನ್‌ ಬರ್ತಿರೋದು ಪ್ರೈವೇಟ್‌ ಈವೆಂಟ್‌ಗೆ! ಹೌದು, ಶಾರುಖ್‌ ಖಾನ್‌ ಆನ್‌ ಈವನಿಂಗ್‌ ವಿತ್‌ ಶಾರುಖ್‌ ಖಾನ್‌ ಎನ್ನುವ ವಿಶೇಷ ಕಾರ್ಯಕ್ರಮಕ್ಕಾಗಿ ಮಂಗಳೂರಿಗೆ ಬರ್ತಿದ್ದಾರೆ. ಈ ಕಾರ್ಯಕ್ರಮವನ್ನು ರೋಹನ್‌ ಕಾರ್ಪೋರೇಷನ್‌ ಆಯೋಜಿಸಿದೆ.

ರೋಹನ್‌ ಕಾರ್ಪೋರೇಷನ್‌ನ ಹೊಸವಸತಿ ಯೋಜನೆಯಾದ ರೋಹನ್‌ ಮರೀನಾ ಒನ್‌ ಉದ್ಘಾಟನೆಯನ್ನು ಶಾರುಖ್‌ ಖಾನ್‌ ಮಾಡಲಿದ್ದಾರೆ. ಶಾರುಖ್‌ ಖಾನ್‌ ನೋಡೋದಕ್ಕೆ ಆಹ್ವಾನ ಪತ್ರಿಕೆ ಇರಬೇಕಾಗುತ್ತದೆ. ಈ ಕಾರ್ಯಕ್ರಮ ಸಾರ್ವಜನಿಕರಿಗೆ ಮುಕ್ತವಾಗಿಲ್ಲ. ಅತಿಥಿಗಳಿಗೆ ಪಾಸ್‌ ನೀಡಲಾಗಿದೆ. ಪಾಸ್‌ ಜೊತೆಗೆ ಬಂದವರಿಗೆ ಎಂಟ್ರಿ ಇರಲಿದೆ. ಇನ್ನು ಸಾರ್ವಜನಿಕರಿಗೆ ಒಳಗೆ ಬರೋದಕ್ಕೆ ಅವಕಾಶ ಇಲ್ಲ. ಕಟ್ಟುನಿಟ್ಟಾದ ಪ್ರೋಟೋಕಾಲ್‌ಗಳು ಇರುವ ಕಾರಣ ಪಾಸ್‌ಗಳಿಲ್ಲದ ವ್ಯಕ್ತಿಗಳಿಗೆ ಪ್ರವೇಶ ಇರೋದಿಲ್ಲ. ಇನ್ನು ಗೇಟ್‌ನಲ್ಲಿ ನಿಂತು ಮುಜುಗರ ಅಥವಾ ನಿರಾಸೆ ಅನುಭವಿಸುವ ಸಂದರ್ಭ ಎದುರಾಗುವುದು ಬೇಡ ಎಂದು ವಿನಂತಿಸಲಾಗಿದೆ.

ಹೆದ್ದಾರಿಯಲ್ಲಿ ಸಾರ್ವಜನಿಕರ ಓಡಾಟಕ್ಕೆ ಯಾವುದೇ ತೊಂದರೆ ಇರುವುದಿಲ್ಲ. ಆದರೆ ಹೆದ್ದಾರಿ ಬಳಿ ನಿಂತು ಶಾರುಖ್‌ ಝಲಕ್‌ಗಾಗಿ ನಿಲ್ಲುವುದು ಸೂಕ್ತವಲ್ಲ. ಟ್ರಾಫಿಕ್‌ ಜಾಮ್‌ ಮಾಡದೇ ಸಹಕರಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !