June 25, 2026
Thursday, June 25, 2026
spot_img

ನಿಮ್ಮ ಪಾಸ್‌ಪೋರ್ಟ್ ಇನ್ನೂ ಆಗಿಲ್ವಾ? ಜುಲೈಗೂ ಮುನ್ನವೇ ಅರ್ಜಿ ಹಾಕಿ, ಇಲ್ಲದಿದ್ರೆ ಜೇಬಿಗೆ ಕತ್ತರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿದೇಶ ಪ್ರಯಾಣದ ಯೋಚನೆಯಲ್ಲಿರುವ ಭಾರತೀಯ ನಾಗರಿಕರಿಗೆ ಕೇಂದ್ರ ಸರ್ಕಾರ ಬಿಗ್ ಶಾಕ್ ನೀಡಿದೆ. ಬರೋಬ್ಬರಿ 14 ವರ್ಷಗಳ ನಂತರ ಮೊದಲ ಬಾರಿಗೆ ಪಾಸ್‌ಪೋರ್ಟ್ ಶುಲ್ಕವನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು, ಈ ಹೊಸ ದರಗಳು ಜುಲೈ 1 ರಿಂದ ಜಾರಿಗೆ ಬರಲಿವೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಸಾಮಾನ್ಯ ಮತ್ತು ತತ್ಕಾಲ್ ಹೊಸ ದರ ಪಟ್ಟಿ

18 ವರ್ಷ ಮೇಲ್ಪಟ್ಟ ಅರ್ಜಿದಾರರಿಗೆ ಪುಟಗಳ ಆಧಾರದ ಮೇಲೆ ಶುಲ್ಕವನ್ನು ಪರಿಷ್ಕರಿಸಲಾಗಿದೆ:

  • 36 ಪುಟಗಳ ಪಾಸ್‌ಪೋರ್ಟ್: ಸಾಮಾನ್ಯ ಯೋಜನೆಯಡಿ ಶುಲ್ಕವನ್ನು 1,500 ರೂ.ನಿಂದ 2,500 ರೂ.ಗಳಿಗೆ ಹೆಚ್ಚಿಸಲಾಗಿದೆ. ಇನ್ನು ತತ್ಕಾಲ್ ಯೋಜನೆ (Tatkaal Scheme) ಅಡಿಯಲ್ಲಿ ಇದು 3,500 ರೂ.ನಿಂದ 5,000 ರೂ.ಗಳಿಗೆ ಏರಿಕೆಯಾಗಿದೆ.
  • 60 ಪುಟಗಳ ಪಾಸ್‌ಪೋರ್ಟ್: ಸಾಮಾನ್ಯ ವರ್ಗದಲ್ಲಿ ಶುಲ್ಕ 2,000 ರೂ.ನಿಂದ 3,500 ರೂ.ಗಳಿಗೆ ಹಾಗೂ ತತ್ಕಾಲ್ ಅಡಿಯಲ್ಲಿ 6,000 ರೂ.ಗಳಿಗೆ ಏರಿಕೆಯಾಗಿದೆ.

ಗಮನಿಸಿ: ಜುಲೈ 1ರ ನಂತರ ಅರ್ಜಿ ಸಲ್ಲಿಸುವ ಪ್ರತಿಯೊಬ್ಬರಿಗೂ ಈ ಪರಿಷ್ಕೃತ ದರಗಳು ಅನ್ವಯವಾಗಲಿವೆ. ವಿದೇಶ ಪ್ರವಾಸ ಕೈಗೊಳ್ಳುವವರು ಈಗಿನಿಂದಲೇ ಹೆಚ್ಚಿನ ಹಣ ಪಾವತಿಸಲು ಸಿದ್ಧರಾಗಬೇಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !