ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಕೃಷಿ ತಾಪಂಡ ಮನೆಯಲ್ಲಿಯೇ ಗೆಳೆಯ ವೈಶಾಖ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಮನೆಯಲ್ಲಿ ನಿನ್ನೆ ತಡರಾತ್ರಿ ವೈಶಾಖ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೃಷಿ ಮನೆಯಲ್ಲಿ ತಂಗಿದ್ದ ವೈಶಾಖ್ ನಟಿ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದು, ಅದಕ್ಕೂ ಮುನ್ನ ಕೃಷಿಗೆ ಕರೆ ಮಾಡಿ ತಾನು ಜೀವನ ಮುಗಿಸುತ್ತೇನೆ ಎಂದು ಹೇಳಿದ್ದರು. ಕೃಷಿ ಏನು ಮಾಡಬೇಕು ಗೊತ್ತಾಗದೇ ತಕ್ಷಣ ಅವರ ಕುಟುಂಬದವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಆದರೆ ಜನ ಮನೆ ತಲುಪುವ ವೇಳೆಗೆ ವೈಶಾಖ್ ಪ್ರಾಣ ಹೋಗಿತ್ತು. ವೈಶಾಖ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ತೆಗೆದುಕೊಂಡುಹೋಗಲಾಗಿದೆ.
ಈ ಹಿಂದೆ ಉದ್ಯಮಿ ಅರವಿಂದ ರೆಡ್ಡಿಗೆ ಅನಾಮಧೇಯ ಪತ್ರವೊಂದು ಬಂದಿತ್ತು. ಏಳು ಕೋಟಿರೂಪಾಯಿಗೆ ಬೇಡಿಕೆ ಹಾಗೂ ಕೃಷಿ ತಾಪಂಡ ಜೊತೆ ಇರುವ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಪತ್ರದಲ್ಲಿ ಹೇಳಲಾಗಿತ್ತು. ಈ ಪತ್ರವನ್ನು ಅರವಿಂದ್ ಪೊಲೀಸರಿಗೆ ನೀಡಿದ್ದರು. ತನಿಖೆ ವೇಳೆ ವೈಶಾಖ್ ಸಿಕ್ಕಿಬಿದ್ದರು.



