June 27, 2026
Saturday, June 27, 2026
spot_img

ಅದ್ಭುತ ಸಿನಿಮಾಗಳನ್ನು ನೀಡಿದ ತಮಿಳಿನ ಖ್ಯಾತ ನಿರ್ದೇಶಕ ಕೆ. ಭಾಗ್ಯರಾಜ್ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ತಮಿಳು ಚಿತ್ರರಂಗದ ಹಿರಿಯ ನಿರ್ದೇಶಕ, ಚಿತ್ರಕಥೆಗಾರ ಹಾಗೂ ನಟ ಕೆ. ಭಾಗ್ಯರಾಜ್‌ ಹೃದಯಾಘಾತದಿಂದ ನಿಧನರಾಗಿದ್ದಾರೆ.

73 ವರ್ಷಗಳ ಭಾಗ್ಯರಾಜ್‌ ತಮಿಳು ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಭಾಗ್ಯರಾಜ್ ಅವರ ಪತ್ನಿ ಪೂರ್ಣಿಮಾ ಮಾಜಿ ನಟಿ. ಇವರ ಮಕ್ಕಳ ಹೆಸರು ಶಂತನು ಮತ್ತು ಶರಣ್ಯ. ಮಗ ಶಂತನು ಭಾಗ್ಯರಾಜ್ ಕೂಡ ಚಿತ್ರರಂಗದಲ್ಲಿ ನಟನಾಗಿದ್ದಾರೆ. ಅವರು ಕೆಲವೇ ದಿನಗಳ ಹಿಂದೆ ಗೋವಾಕ್ಕೆ ಹೋಗಿದ್ದರು. ಅಲ್ಲಿ ನಟಿ ಮತ್ತು ರಾಜಕಾರಣಿ ಖುಷ್ಬೂ ಸುಂದರ್ ಮಗಳ ಮದುವೆ ನಡೆದಿತ್ತು. ಆ ಮದುವೆ ಸಮಾರಂಭದಲ್ಲಿ ಭಾಗ್ಯರಾಜ್ ಪಾಲ್ಗೊಂಡಿದ್ದರು.

ಭಾಗ್ಯರಾಜ್ ಅವರ ಪೂರ್ಣ ಹೆಸರು ಕೃಷ್ಣಸ್ವಾಮಿ ಭಾಗ್ಯರಾಜ್. ಅವರು ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ ಜನಿಸಿದ್ದರು. ಆರಂಭದಲ್ಲಿ ಅವರು ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಪ್ರಖ್ಯಾತ ನಿರ್ದೇಶಕ ಭಾರತೀರಾಜ ಅವರ ಬಳಿ ಅವರು ಸಿನಿಮಾ ಕಲೆ ಕಲಿತಿದ್ದರು. ನಂತರ ಅವರು ಸ್ವತಂತ್ರ ನಿರ್ದೇಶಕರಾಗಿ ದೊಡ್ಡ ಯಶಸ್ಸು ಕಂಡರು. ತಮಿಳು ಚಿತ್ರರಂಗದಲ್ಲಿ ಅವರು ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿದ್ದರು. 80 ಮತ್ತು 90ರ ದಶಕದಲ್ಲಿ ಅವರ ಸಿನಿಮಾಗಳು ಅಬ್ಬರಿಸಿದ್ದವು. ಅವರ ಸಾಮಾಜಿಕ ಕಥೆಗಳು ಜನರಿಗೆ ತುಂಬಾ ಹತ್ತಿರವಾಗಿದ್ದವು.

ಭಾಗ್ಯರಾಜ್ ಅವರು ತಮ್ಮ ವೃತ್ತಿಜೀವನದಲ್ಲಿ 25 ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಹಾಗೆಯೇ ಅವರು 75 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರನ್ನು ಚಿತ್ರರಂಗದ ಅತ್ಯುತ್ತಮ ಚಿತ್ರಕಥೆಗಾರ ಎಂದು ಕರೆಯಲಾಗುತ್ತದೆ. ಅವರ ‘ಮುಂದಾನೈ ಮುಡಿಚ್ಚು’ ಸಿನಿಮಾ ದೊಡ್ಡ ಹಿಟ್ ಆಗಿತ್ತು. ಅದರೊಂದಿಗೆ ‘ಅಂದ 7 ನಾಟ್ಕಳ್’ ಮತ್ತು ‘ಡಾರ್ಲಿಂಗ್ ಡಾರ್ಲಿಂಗ್ ಡಾರ್ಲಿಂಗ್’ ಚಿತ್ರಗಳು ಕ್ಲಾಸಿಕ್ ಎನಿಸಿಕೊಂಡಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !