August 26, 2026
Wednesday, August 26, 2026
spot_img

ಈ ಚಂದಕ್ಕೆ ಮಕ್ಕಳನ್ಯಾಕೆ ಅಂಗನವಾಡಿಗೆ ಕಳಿಸ್ಬೇಕು? ಮಕ್ಕಳಿಗೆ ಕಾಲಿನಿಂದ ಒದ್ದು ದರ್ಪತೋರಿದ ಶಿಕ್ಷಕಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಕ್ಕಳು ಸೇಫ್‌ ಆಗಿ ಇರುವ ಜಾಗ ಎಂದರೆ ಮನೆ, ಮನೆಯನ್ನು ಬಿಟ್ಟು ಬೇರೆ ಇನ್ನೊಂದು ಜಾಗದಲ್ಲಿ ಮಕ್ಕಳು ಸೇಫ್‌ ಆಗಿ ಇರ್ತಾರೆ ಅಂತಂದ್ರೆ ಅದು ಸ್ಕೂಲ್‌ ಮಾತ್ರ! ಆದರೆ ಯಾವ ಶಾಲೆ? ಯಾವ ರೀತಿ ಟೀಚರ್ಸ್‌ ಕೈಯಲ್ಲಿ ಮಕ್ಕಳನ್ನು ಕೊಡ್ತಿದ್ದೀವಿ ಅನ್ನೋದು ತುಂಬಾನೇ ಮುಖ್ಯ.

ಮಹಾರಾಷ್ಟ್ರದ ಪನ್ವೇಲ್‌ ತಾಲೂಕಿನ ನಂದಗಾಂವ್‌ ಗ್ರಾಮದ ಅಂಗನವಾಡಿಯಲ್ಲಿ ಪುಟ್ಟ ಬಾಲಕಿಯನ್ನು ಟೀಚರ್‌ ಕಾಲಿನಿಂದ ಒದ್ದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಈಕೆ ಮನುಷ್ಯಳಾ ಎಂದು ಪ್ರಶ್ನಿಸುತ್ತಿದ್ದಾರೆ.

ಮಹಾರಾಷ್ಟ್ರದ ಪನ್ವೇಲ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಬಾಲಕಿಯ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯೂ ಚಿಕ್ಕ ಹುಡುಗಿಯ ಎದೆಗೆ ಒದೆಯುತ್ತಿರುವುದು ವಿಡಿಯೊದಲ್ಲಿ ಸೆರೆಹಿಡಿಯಲಾಗಿದೆ. ಬಾಲಕಿ ಈ ತೀವ್ರವಾದ ಒದೆಯಿಂದ ಕೆಳಗೆ ಬಿದ್ದರೂ ಕಿಂಚಿತ್ತು ಕರುಣೆ ತೋರಲಿಲ್ಲ.

ಈ ವಿಡಿಯೊವನ್ನುಮಧುರ್ ಎಂಬ ಬಳಕೆದಾರ ಶೇರ್ ಮಾಡಿಕೊಂಡಿದ್ದಾರೆ. ವೈರಲ್ ಆದ ವಿಡಿಯೋದಲ್ಲಿ, ಅಸಹಾಯಕ ಮಗುವಿಗೆ ಕ್ರೂರವಾಗಿ ಹಿಂಸಿಸುತ್ತಿರುವುದು ಸೆರೆಯಾಗಿದೆ.ಪುಟ್ಟ ಹುಡುಗಿಯ ಎದೆಗೆ ಒದೆಯಲು ನೀವು ಎಷ್ಟು ಕ್ರೂರಿಯಾಗಿರಬೇಕು? ಪನ್ವೇಲ್‌ನ ನಂದಗಾಂವ್‌ನ ಈ ಅಂಗನವಾಡಿ ಕಾರ್ಯಕರ್ತೆಗೂ ಇದೇ ರೀತಿ ಒದ್ದು ಶಿಕ್ಷೆ ನೀಡಬೇಕೆಂದು ಸೋಷಿಯಲ್ ಮೀಡಿಯಾದಲ್ಲಿ ಅಗ್ರಹ ಕೇಳಿ ಬಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !