June 28, 2026
Sunday, June 28, 2026
spot_img

ಚಿಂತೆ ಬಿಡಿ, ತಿಂಡಿ ಮಾಡಿ 12 | ಬೆಳಗಿನ ಗಡಿಬಿಡಿಗೆ ಪರ್ಫೆಕ್ಟ್ ಬ್ರೇಕ್‌ಫಾಸ್ಟ್ ಅವಲಕ್ಕಿ ಉಪ್ಪಿಟ್ಟು.. ಆರೋಗ್ಯಕ್ಕೂ ಸೈ, ರುಚಿಗೂ ಜೈ

ಬೆಳಗಿನ ಉಪಹಾರಕ್ಕೆ ಪೌಷ್ಟಿಕ ಹಾಗೂ ಸುಲಭವಾಗಿ ಮಾಡಬಹುದಾದ ತಿಂಡಿ ಎಂದರೆ ಅದು ಅವಲಕ್ಕಿ ಉಪ್ಪಿಟ್ಟು. ಇದನ್ನು ತಯಾರಿಸುವ ಸರಳ ವಿಧಾನ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು:

  • ಗಟ್ಟಿ ಅಥವಾ ಮಾಧ್ಯಮ ಅವಲಕ್ಕಿ – 2 ಕಪ್
  • ಈರುಳ್ಳಿ – 1 (ಸಣ್ಣಗೆ ಹೆಚ್ಚಿದ್ದು)
  • ಹಸಿರು ಮೆಣಸಿನಕಾಯಿ – 3-4
  • ಶೇಂಗಾ ಬೀಜ (ಕಡಲೇಕಾಯಿ) – 2 ಚಮಚ
  • ಸಾಸಿವೆ, ಜೀರಿಗೆ, ಕಡಲೆಬೇಳೆ, ಉದ್ದಿನಬೇಳೆ – ತಲಾ ಅರ್ಧ ಚಮಚ
  • ಅರಿಶಿನ – ಕಾಲು ಚಮಚ
  • ಎಣ್ಣೆ – 2 ಚಮಚ
  • ರುಚಿಗೆ ತಕ್ಕಷ್ಟು ಉಪ್ಪು, ನಿಂಬೆರಸ ಮತ್ತು ಕೊತ್ತಂಬರಿ ಸೊಪ್ಪು

ಮಾಡುವ ಸರಳ ವಿಧಾನ:

ಮೊದಲು ಅವಲಕ್ಕಿಯನ್ನು ಚೆನ್ನಾಗಿ ತೊಳೆದು, ನೀರನ್ನು ಸಂಪೂರ್ಣವಾಗಿ ಸೋಸಿ 10 ನಿಮಿಷ ಪಕ್ಕಕ್ಕಿಡಿ. ಇದರಿಂದ ಅವಲಕ್ಕಿ ಸಾಫ್ಟ್ ಆಗುತ್ತದೆ.

ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಸಾಸಿವೆ, ಜೀರಿಗೆ, ಕಡಲೆಬೇಳೆ, ಉದ್ದಿನಬೇಳೆ ಮತ್ತು ಶೇಂಗಾ ಹಾಕಿ ಹುರಿಯಿರಿ. ನಂತರ ಕರಿಬೇವು, ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ ಹಾಗೂ ಈರುಳ್ಳಿ ಹಾಕಿ ಹೊಂಬಣ್ಣ ಬರುವವರೆಗೆ ಬಾಡಿಸಿ.

ಈಗ ಒಗ್ಗರಣೆಗೆ ಅರಿಶಿನ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಕ್ಸ್ ಮಾಡಿ. ನಂತರ ನೆನೆಸಿಟ್ಟ ಅವಲಕ್ಕಿಯನ್ನು ಹಾಕಿ, ಕಡಿಮೆ ಉರಿಯಲ್ಲಿ 2-3 ನಿಮಿಷ ಚೆನ್ನಾಗಿ ಕೈಯಾಡಿಸಿ. ಕೊನೆಯಲ್ಲಿ ನಿಂಬೆರಸ ಮತ್ತು ಕೊತ್ತಂಬರಿ ಸೊಪ್ಪು ಉದುರಿಸಿದರೆ ಬಿಸಿಬಿಸಿ, ರುಚಿಯಾದ ಅವಲಕ್ಕಿ ಉಪ್ಪಿಟ್ಟು ಸವಿಯಲು ಸಿದ್ಧ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !