June 29, 2026
Monday, June 29, 2026
spot_img

ವೆಸ್ಟ್ ಇಂಡೀಸ್ ದಾಂಡಿಗರ ಅಬ್ಬರ: ಟೆಸ್ಟ್ ಇತಿಹಾಸದಲ್ಲೇ ಮೊದಲ ಬಾರಿಗೆ 400+ ರನ್ ಪಾರ್ಟ್‌ನರ್‌ಶಿಪ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಬ್ಯಾಟರ್‌ಗಳು ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸದೊಂದು ಮೈಲಿಗಲ್ಲು ಸ್ಥಾಪಿಸಿದ್ದಾರೆ. ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಮೈದಾನದಲ್ಲಿ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ವಿಂಡೀಸ್ ಪಡೆ ಐತಿಹಾಸಿಕ ಸಾಧನೆ ಮಾಡಿದೆ. ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ವೆಸ್ಟ್ ಇಂಡೀಸ್ ಎದುರು ಪ್ರಥಮ ಇನಿಂಗ್ಸ್‌ನಲ್ಲಿ ಶ್ರೀಲಂಕಾ 308 ರನ್‌ಗಳಿಗೆ ಆಲೌಟ್ ಆಗಿತ್ತು.

ಬೆನ್ ಸ್ಟೋಕ್ಸ್-ಬೈರ್‌ಸ್ಟೋವ್ ದಾಖಲೆ ಉಡೀಸ್!

ಶ್ರೀಲಂಕಾ ಸವಾಲಿಗೆ ಉತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ಪರ ಅಮೀರ್ ಜಾಂಗೂ ಮತ್ತು ನಾಯಕ ರೋಸ್ಟನ್ ಚೇಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಈ ಜೋಡಿ 6ನೇ ವಿಕೆಟ್‌ಗೆ ಬರೋಬ್ಬರಿ 401 ರನ್‌ಗಳ ಬೃಹತ್ ಜೊತೆಯಾಟದೊಂದಿಗೆ ವಿಶ್ವ ದಾಖಲೆ ಬರೆಯಿತು.

ಈ ಹಿಂದೆ 2016 ರಲ್ಲಿ ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್ ಮತ್ತು ಜಾನಿ ಬೈರ್‌ಸ್ಟೋವ್ ಜೋಡಿ 6ನೇ ವಿಕೆಟ್‌ಗೆ 399 ರನ್ ಗಳಿಸಿದ್ದು ಇದುವರೆಗಿನ ಗರಿಷ್ಠ ಸಾಧನೆಯಾಗಿತ್ತು. ಈಗ ಈ 8 ವರ್ಷಗಳ ಹಳೆಯ ದಾಖಲೆ ಇತಿಹಾಸ ಪುಟ ಸೇರಿದೆ.

400+ ರನ್ ಗಳಿಸಿದ ವಿಶ್ವದ ಮೊದಲ ಜೋಡಿ!

ಟೆಸ್ಟ್ ಕ್ರಿಕೆಟ್‌ನ 149 ವರ್ಷಗಳ ಸುದೀರ್ಘ ಇತಿಹಾಸದಲ್ಲೇ 6ನೇ ವಿಕೆಟ್‌ಗೆ 400ಕ್ಕೂ ಅಧಿಕ ರನ್ ಕಲೆಹಾಕಿದ ಜಗತ್ತಿನ ಮೊದಲ ಜೋಡಿ ಎಂಬ ಹೆಗ್ಗಳಿಕೆಗೆ ಅಮೀರ್ ಜಾಂಗೂ ಹಾಗೂ ರೋಸ್ಟನ್ ಚೇಸ್ ಪಾತ್ರರಾಗಿದ್ದಾರೆ. ಈ ಮೂಲಕ ಕ್ರಿಕೆಟ್ ಲೋಕ ಯಾರೂ ಊಹಿಸದ ಅಪರೂಪದ ಇತಿಹಾಸಕ್ಕೆ ಸಾಕ್ಷಿಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !