June 28, 2026
Sunday, June 28, 2026
spot_img

KITCHEN HACKS| ಅಡುಗೆಮನೆಯ ದೊಡ್ಡ ಕಿರಿಕಿರಿಗೆ ಸಿಕ್ತು ಮುಕ್ತಿ! ಮಳೆಗಾಲದಲ್ಲಿ ದಿನಸಿ ಸಾಮಗ್ರಿಗಳು ಹಾಳಾಗದಂತೆ ತಡೆಯಲು ಇಲ್ಲಿದೆ ಟಿಪ್ಸ್

ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ವಾತಾವರಣದಲ್ಲಿ ಆರ್ದ್ರತೆ ಮತ್ತು ತೇವಾಂಶ ಭಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತದೆ. ಈ ಹವಾಮಾನದ ಬದಲಾವಣೆಯು ನಮ್ಮ ಅಡುಗೆಮನೆಯ ಮೇಲೆಯೂ ನೇರ ಪರಿಣಾಮ ಬೀರುತ್ತದೆ. ಮಳೆಗಾಲದಲ್ಲಿ ಗೃಹಿಣಿಯರನ್ನು ಕಾಡುವ ಅತ್ಯಂತ ಪ್ರಮುಖ ಸಮಸ್ಯೆ ಎಂದರೆ ದಿನಸಿ ಪದಾರ್ಥಗಳು, ಸಾಂಬಾರ್ ಮಸಾಲೆಗಳು, ಹಪ್ಪಳ ಮತ್ತು ಒಣಮೆಣಸಿನಕಾಯಿಗಳು ತೇವಾಂಶವನ್ನು ಹೀರಿಕೊಂಡು ಮೆತ್ತಗಾಗುವುದು ಅಥವಾ ಬೇಗನೆ ಬೂಷ್ಟು ಹಿಡಿಯುವುದು. ಈ ಸಮಸ್ಯೆಯನ್ನು ತಡೆಯಗಟ್ಟಿ ದಿನಸಿ ಪದಾರ್ಥಗಳನ್ನು ದೀರ್ಘಕಾಲ ತಾಜಾವಾಗಿಡಲು ಅನುಸರಿಸಬೇಕಾದ ಸೂಕ್ತ ಹಾಗೂ ಸರಳ ಪರಿಹಾರಗಳು ಇಲ್ಲಿವೆ.

ಅನುಸರಿಸಬೇಕಾದ ಪ್ರಮುಖ ಕ್ರಮಗಳು:

ದಿನಸಿ ಪದಾರ್ಥಗಳನ್ನು ಕಡ್ಡಾಯವಾಗಿ ಗಾಳಿಯಾಡದ ಏರ್-ಟೈಟ್ ಪ್ಲಾಸ್ಟಿಕ್ ಅಥವಾ ಗಾಜಿನ ಡಬ್ಬಿಗಳಲ್ಲಿ ಮಾತ್ರ ಶೇಖರಿಸಿಡಬೇಕು. ತೆರೆದ ಪ್ಯಾಕೆಟ್‌ಗಳಲ್ಲಿ ಹಾಗೇ ಬಿಡಬಾರದು.

ಉಪ್ಪು ಮತ್ತು ಸಕ್ಕರೆ ನೀರಾಗುವುದನ್ನು ತಡೆಯಲು, ಉಪ್ಪಿನ ಡಬ್ಬಿಯ ತಳಭಾಗದಲ್ಲಿ ಸ್ವಲ್ಪ ಅಕ್ಕಿ ಕಾಳುಗಳನ್ನು ಹಾಕಿಡಬೇಕು. ಅಕ್ಕಿಯು ಡಬ್ಬಿಯಲ್ಲಿನ ತೇವಾಂಶವನ್ನು ಹೀರಿಕೊಳ್ಳುತ್ತದೆ.

ಸಾಂಬಾರ್ ಪದಾರ್ಥಗಳು, ಧಾನ್ಯಗಳು ಮತ್ತು ಬೇಳೆಕಾಲುಗಳ ಡಬ್ಬಿಗೆ 2-3 ಲವಂಗ ಅಥವಾ ಬಿರಿಯಾನಿ ಎಲೆಗಳನ್ನು ಹಾಕಿಡಬೇಕು. ಇದು ಪದಾರ್ಥಗಳು ಮೆತ್ತಗಾಗದಂತೆ ತಡೆಯುತ್ತದೆ ಮತ್ತು ಹುಳು ಹಿಡಿಯದಂತೆ ರಕ್ಷಿಸುತ್ತದೆ.

ರವೆ, ಮೈದಾ ಅಥವಾ ಗೋಧಿ ಹಿಟ್ಟು ಮಳೆಗಾಲದಲ್ಲಿ ಬೇಗನೆ ಮುಗ್ಗಲು ವಾಸನೆ ಬರುತ್ತವೆ. ಆದ್ದರಿಂದ ಇವುಗಳನ್ನು ಬಳಸುವ ಮುನ್ನ ಲಘುವಾಗಿ ಬಾಣಲೆಯಲ್ಲಿ ಹುರಿದು, ಸಂಪೂರ್ಣವಾಗಿ ತಣಿದ ನಂತರ ಡಬ್ಬಿಗಳಿಗೆ ತುಂಬಿಸಿಡಬೇಕು.

ಇದನ್ನೂ ಓದಿ:

ಸಾಂಬಾರ್ ಪುಡಿ, ಖಾರದ ಪುಡಿ ಅಥವಾ ಉಪ್ಪನ್ನು ಬಳಸುವಾಗ ಯಾವುದೇ ಕಾರಣಕ್ಕೂ ಒದ್ದೆ ಕೈ ಅಥವಾ ಒದ್ದೆಯಾದ ಚಮಚಗಳನ್ನು ಬಳಸಲೇಬಾರದು.

ದಿನಸಿ ಇಡುವ ಕಪಾಟುಗಳ ಮೂಲೆಗಳಲ್ಲಿ ಸ್ವಲ್ಪ ಅಡುಗೆ ಸೋಡಾಅಥವಾ ಚಾಕ್ ಪೀಸ್ ಇಡಬೇಕು. ಇದು ಕಪಾಟಿನ ಒಳಗಿನ ಆರ್ದ್ರತೆ ಮತ್ತು ಮುಗ್ಗು ನಾತವನ್ನು ಹೀರಿಕೊಳ್ಳುತ್ತದೆ.

ಮಳೆಗಾಲದ ಮಧ್ಯೆ ಯಾವಾಗಲಾದರೂ ಕಡು ಬಿಸಿಲು ಬಂದಾಗ, ಒಣಮೆಣಸಿನಕಾಯಿ, ಹಪ್ಪಳ, ಸಂಡಿಗೆಗಳನ್ನು ತಕ್ಷಣವೇ ಬಿಸಿಲಿನಲ್ಲಿ ಒಣಗಿಸಿ ಇಟ್ಟುಕೊಳ್ಳಬೇಕು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !