July 22, 2026
Wednesday, July 22, 2026
spot_img

SPICY | ಮನೆಯಲ್ಲಿ ಮಶ್ರೂಮ್ ಇದ್ರೆ ಈ ರೀತಿ ಪೆಪ್ಪರ್ ಡ್ರೈ ಮಾಡಿ ನೋಡಿ, ಚಿಕನ್ ಫ್ರೈ ಕೂಡ ಮರೆತುಬಿಡ್ತೀರಾ!

ಬ್ಯಾಚುಲರ್ಸ್ ಇರಲಿ ಅಥವಾ ಅಡುಗೆಯಲ್ಲಿ ಹೊಸಬರಿರಲಿ, ಯಾರು ಬೇಕಾದರೂ ಸುಲಭವಾಗಿ ಮಾಡಬಹುದಾದ ಕ್ವಿಕ್ ರೆಸಿಪಿ ಇಲ್ಲಿದೆ. ಯಾವುದೇ ಆರ್ಟಿಫಿಷಿಯಲ್ ಕಲರ್ ಅಥವಾ ಸಾಸ್‌ಗಳ ಅತಿಯಾದ ಬಳಕೆಯಿಲ್ಲದೆ, ಸಂಪೂರ್ಣ ನೈಸರ್ಗಿಕ ಮಸಾಲೆಗಳೊಂದಿಗೆ ಮಶ್ರೂಮ್ ಪೆಪ್ಪರ್ ಡ್ರೈ ಮಾಡಬಹುದು.

ಬೇಕಾಗುವ ಸಾಮಗ್ರಿಗಳು

ಬಟನ್ ಮಶ್ರೂಮ್

ಈರುಳ್ಳಿ

ಕ್ಯಾಪ್ಸಿಕಂ

ಹಸಿ ಮೆಣಸಿನಕಾಯಿ

ಶುಂಠಿ-ಬೆಳ್ಳುಳ್ಳಿ ಪೇಸ್ಟ್

ಕಾಳುಮೆಣಸಿನ ಪುಡಿ

ಸೋಯಾ ಸಾಸ್

ಎಣ್ಣೆ

ಸಾಸಿವೆ ಮತ್ತು ಜೀರಿಗೆ

ಕರಿಬೇವು ಮತ್ತು ಕೊತ್ತಂಬರಿ ಸೊಪ್ಪು

ಉಪ್ಪು

ತಯಾರಿಸುವ ವಿಧಾನ

ಮೊದಲು ಒಂದು ಬಾಣಲೆಯಲ್ಲಿ 2 ಚಮಚ ಎಣ್ಣೆಯನ್ನು ಕಾಯಿಸಿ ಅದಕಕೆ ಸಾಸಿವೆ, ಜೀರಿಗೆ, ಕರಿಬೇವು ಮತ್ತು ಹಸಿರು ಮೆಣಸಿನಕಾಯಿ ಹಾಕಿ ಚಟಪಟ ಸಿಡಿಸಿ. ಈಗ ಹೆಚ್ಚಿದ ಈರುಳ್ಳಿಯನ್ನು ಸೇರಿಸಿ, ಅದು ಹಗುರವಾಗಿ ಹೊಂಬಣ್ಣಕ್ಕೆ ತಿರುಗುವವರೆಗೆ ಚೆನ್ನಾಗಿ ಬಾಡಿಸಬೇಕು. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವವರೆಗೆ 1 ನಿಮಿಷ ಹುರಿದು, ಈಗ ಹೆಚ್ಚಿದ ಕ್ಯಾಪ್ಸಿಕಂ ಹಾಕಿ ನಂತರ ಕಟ್ ಮಾಡಿದ ಮಶ್ರೂಮ್ ತುಂಡುಗಳನ್ನು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಬೇಕು.

ಮಶ್ರೂಮ್ ಬೆಂದು ನೀರೆಲ್ಲಾ ಒಣಗಿದ ನಂತರ, ಅರ್ಧ ಚಮಚ ಸೋಯಾ ಸಾಸ್ ಮತ್ತು ತಾಜಾವಾಗಿ ಕುಟ್ಟಿದ ಕಾಳುಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಟಾಸ್ ಮಾಡಿ. ಸಣ್ಣ ಉರಿಯಲ್ಲಿ 1 ನಿಮಿಷ ಮಸಾಲೆ ಎಲ್ಲವೂ ಮಶ್ರೂಮ್‌ಗೆ ಹಿಡಿಯುವಂತೆ ಕೈಯಾಡಿಸಿ. ಕೊನೆಯದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ ಮಶ್ರೂಮ್ ಪೆಪ್ಪರ್ ಡ್ರೈ ಸಿದ್ಧ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !