June 29, 2026
Monday, June 29, 2026
spot_img

ಮೂರು ವರ್ಷದ ಮಗುವಿನ ಮೇಲೆ ಅತ್ಯಾಚಾರ, ಕೊಲೆ ಮಾಡಿದ್ದ ಪಾಪಿಗೆ ಮರಣದಂಡನೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮೂರು ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿ ಕ್ರೂರವಾಗಿ ಕೊಲೆ ಮಾಡಿದ್ದ 65 ವರ್ಷದ ವ್ಯಕ್ತಿಗೆ ಪುಣೆಯ ವಿಶೇಷ ನ್ಯಾಯಾಲಯ ಮರಣದಂಡನೆ ಶಿಕ್ಷೆ ನೀಡಿದೆ.

ಭೀಮರಾವ್‌ ಕಾಂಬ್ಳೆ ಎಂಬ ವೃದ್ಧ ನಡೆಸಿದ ಅನಾಗರಿಕೆ, ಪೈಶಾಚಿಕ ಕೃತ್ಯದ ಗಂಭೀರತೆಯನ್ನು ಪರಿಗಣಿಸಿದ ನ್ಯಾಯಾಲಯ ಅಪರಾಧ ನಡೆದ ಎರಡು ತಿಂಗಳಿನಲ್ಲಿಯೇ ಈ ತೀರ್ಪನ್ನು ನೀಡಿದೆ. ಆದರೆ ಪೋಷಕರು ತಮ್ಮ ಮಗುವಿಗೆ ಆದ ನೋವು, ಹಿಂಸೆ, ಅದೇ ರೀತಿಯ ಸಾವು ಈತನಿಗೂ ಬರಬೇಕು ಎಂದು ಕಣ್ಣೀರಿಟ್ಟಿದ್ದಾರೆ.

ಜೂನ್ 25 ರಂದು ನ್ಯಾಯಾಲಯ ಆರೋಪಿ ವಿರುದ್ಧದ ಎಲ್ಲಾ ಆರೋಪಗಳು ನಿಜವೆಂದು ಹೇಳಿತ್ತು. ಪ್ರಾಸಿಕ್ಯೂಷನ್ ಮತ್ತು ದೂರುದಾರರ ವಾದಗಳನ್ನು ಆಲಿಸಿದ ನಂತರ ಇಂದಿಗೆ ಶಿಕ್ಷೆಯ ತೀರ್ಪನ್ನು ಕಾಯ್ದಿರಿಸಿತು. ಇಂದು ಆರೋಪಿಗೆ ಮರಣ ದಂಡನೆ ಶಿಕ್ಷೆಯ ತೀರ್ಪು ಪ್ರಕಟಿಸಿದೆ.

ವಿಶೇಷ ಸಾರ್ವಜನಿಕ ಅಭಿಯೋಜಕ ಅಜಯ್ ಮಿಸಾರ್, ವಿಚಾರಣೆ ವೇಳೆ ಅಪರಾಧದ ಗಂಭೀರತೆಯನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು. ಗರಿಷ್ಠ ಶಿಕ್ಷೆಯ ಬೇಡಿಕೆಗೆ ಪೂರಕವಾಗಿ ಸುಪ್ರೀಂ ಕೋರ್ಟ್‌ನ 12 ಮಹತ್ವದ ತೀರ್ಪುಗಳನ್ನು ಉಲ್ಲೇಖಿಸಿದ್ದರು. ಆರೋಪಿಯ ವಿರುದ್ಧದ ಎಲ್ಲಾ ಆರೋಪಗಳು ಸಾಬೀತಾಗಿವೆ ಎಂದು ಪ್ರಾಸಿಕ್ಯೂಷನ್ ತೀರ್ಮಾನಿಸಿತು. ಐಪಿಸಿಯ ಎಲ್ಲಾ ವಿಭಾಗಗಳ ಅಡಿಯಲ್ಲಿ ತಪ್ಪಿತಸ್ಥನೆಂದು ಘೋಷಿಸಿತು ಎಂದು ಮಿಸಾರ್ ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !