ಸಾಮಾಗ್ರಿಗಳು
ಎಲೆ ಕೋಸು
ಈರುಳ್ಳಿ
ಹಸಿಮೆಣಸು
ಒಣಮೆಣಸು
ಕಾಯಿ
ಶುಂಠಿ
ಬೆಲ್ಲ
ಕರಿಬೇವು
ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಕಿಕೊಳ್ಳಿ, ರೌಂಡ್ ಆಗಿ ಹೆಚ್ಚಿದ ಎರಡು ಮೆಣಸಿನಕಾಯಿ ಹಾಕಿ
ಆನಂತರ ಈರುಳ್ಳಿ ಹಾಕಿ ಬಾಡಿಸಿ, ಕೋಸನ್ನು ಸಿಪ್ಪೆ ಎರೆಯುವ ಕ್ರೇಪರ್‌ನಿಂದ ನೂಡಲ್ಸ್ ರೀತಿ ಎರೆದುಕೊಳ್ಳಿ
ನಂತರ ಕರಿಬೇವು ಹಾಕಿ ಕೋಸು ಹಾಕಿ, ಉಪ್ಪು ಹಾಕಿ ಮುಚ್ಚಿ ಬೇಯಿಸಿ
ನಂತರ ಮಿಕ್ಸಿಗೆ ಕಾಯಿತುರಿ, ಅರಿಶಿಣ, ಶುಂಠಿ, ಒಣಮೆಣಸು ಹಾಗೂ ಉಪ್ಪು ಹಾಕಿ ರುಬ್ಬಿ ಇಡಿ
ಈ ಮಿಶ್ರಣವನ್ನು ಕೋಸಿಗೆ ಹಾಕಿ, ಬೆಲ್ಲ ಹಾಕಿ ಮಿಕ್ಸ್ ಮಾಡಿ
ಕಡೆಗೆ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿದ್ರೆ ಪಲ್ಯ ರೆಡಿ



