August 27, 2026
Thursday, August 27, 2026
spot_img

ಶಾಲೆ ಬಳಿ ವಿದ್ಯುತ್ ಅವಘಡ: ಹೂವು ಕೀಳಲು ಹೋದ ಯುವಕನ ದಾರುಣ ಸಾ*ವು

ಹೊಸದಿಗಂತ ವರದಿ ಉತ್ತರಕನ್ನಡ:

ವಿದ್ಯುತ್ ತಗುಲಿ ಯುವಕನೊಬ್ಬ ಮೃತಪಟ್ಟ ಘಟನೆ ಜೋಗೇಶ್ವರ ಹಳ್ಳದ ಗೌಳಿ ದಡ್ಡಿಯಲ್ಲಿ ರವಿವಾರ ಸಂಜೆ ನಡೆದಿದೆ.

ತಾಲೂಕಿನ ಜೋಗೇಶ್ವರ ಗೌಳಿ ದಡ್ಡಿಯ ಜಾನು ಕೊಕರೆ (26)ಎಂಬಾತನೇ ಮೃತಪಟ್ಟ ಯುವಕ.

ಪ್ರತಿನಿತ್ಯ ಈಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಿದ್ದ ಈತ ಸೋಮವಾರ ಹುಣ್ಣುಮೆ ಇದ್ದಿದ್ದರಿಂದ ರವಿವಾರ ಸಂಜೆ ಕಿರಿಯ ಪ್ರಾಥಮಿಕ ಶಾಲೆಯ ಹತ್ತಿರ ಹೂವು ಕೀಳಲು ಹೋದಾಗ ವಿದ್ಯುತ್ ತಗುಲಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ:

ದೊಡ್ಡ ಅನಾಹುತ ತಪ್ಪಿದಂತಾಗಿದೆ:

ಇಲ್ಲಿನ ಕಿರಿಯ ಪ್ರಾಥಮಿಕ ಶಾಲೆ ಪಕ್ಕದಲ್ಲಿ ವಿದ್ಯುತ್ ಟಿ.ಸಿ ಇದ್ದು ಈ ಟಿಸಿಯ ವಿದ್ಯುತ್ ತಂತಿ ಹರಿದು ಶಾಲೆಯ ಬೇಲಿಗೆ ತಗುಲಿದೆ. ಶಾಲೆ ಅವಧಿಯಲ್ಲಿ ಈ ಘಟನೆ ನಡೆದಿದ್ದರೆ ದೊಡ್ಡ ಅನಾಹುತ ವಾಗತ್ತಿತ್ತು ಎನ್ನಲಾಗಿದೆ.ಅದೃಷ್ಟವಶಾತ್ ದೊಡ್ಡ ಅನಾಹುತ ತಪ್ಪಿದಂತಾಗಿದೆ ಎಂಬ ಮಾತು ಸ್ಥಳೀಯರಿಂದ ಮಾತು ಕೇಳಿಬಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !