ಹೊಸದಿಗಂತ ವರದಿ ಚಿತ್ರದುರ್ಗ:
ಸ್ಟಿಂಗ್ ಆಪರೇಷನ್ ಪಿತಾಮಹಾ ಯಾರೆಂದು ಎಲ್ಲರಿಗೂ ಗೊತ್ತಿದೆ. ಸಿಎಂ ಡಿಕೆಶಿ ಸ್ಟಿಂಗ್ ಪ್ರಕರಣ ಗಂಭೀರವಾಗಿ ಪರಿಗಣಿಸಬೇಕು. ಸೂಕ್ತ ತನಿಖೆ ಕೈಗೊಂಡು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು. ಅದು ಯಾರೇ ಇರಲಿ, ಎಷ್ಟೇ ದೊಡ್ಡ ಸ್ಥಾನದಲ್ಲಿರಲಿ. ಸರಿಯಾದ ರೀತಿಯಲ್ಲಿ ಸ್ಟಿಂಗ್ ತನಿಖೆ ಆಗಬೇಕು ಎಂದು ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ಚರ್ಚೆ ವಿಚಾರ ಸಿಎಂ ಡಿಕೆಶಿ ಅವರೇ ಸಂಪುಟ ಸಭೆಯಲ್ಲಿ ಬಹಿರಂಗ ಹಿಟ್ ಅಂಡ್ ರನ್ ಮಾಡಲು ಆಗೋದಿಲ್ಲ. ಸ್ಟಿಂಗ್ ಪ್ರಕರಣ ಬಗ್ಗೆ ಜೆಡಿಎಸ್ ಹೋರಾಟ ಮಾಡಲಿ. ಜೆಡಿಎಸ್ ಸ್ವತಂತ್ರವಾಗಿ ಹೋರಾಟ ಮಾಡುತ್ತದೆ, ಮಾಡಲಿ ನಾವೇನು ಮಾಡಬೇಕೋ ಅದನ್ನು ನಾವು ಮಾಡುತ್ತೇವೆ. ಮೈಸೂರಿನಲ್ಲಿ ದನಕರುಗಳ ಜಾತ್ರೆಯಲ್ಲಿ ಅವ್ಯವಸ್ಥೆಯಾಗಿದ್ದು, ದನಕರುಗೆ ಮೇವಿಲ್ಲ. ದಸರಾಗೆ ಬಂದ ಮಹಿಳೆಯರಿಗೆ ರೈತರಿಗೆ ಊಟದ ವ್ಯವಸ್ಥೆ ಇಲ್ಲ. ದಸರಾಗೆ ಬಂದವರೆಲ್ಲ ಬೇಸರ ವ್ಯಕ್ತಪಡಿಸುತ್ತಿದ್ದಾರೆ ಎಂದ ಅವರು, ಸಿಎಂ ಡಿ.ಕೆ.ಶಿವಕುಮಾರ್ ಬೇರೆ ಪ್ರಪಂಚದಲ್ಲೇ ಇದ್ದಾರೆ ಎಂದು ಆರೋಪಿಸಿದರು.
ಭೀಕರ ಬರಗಾಲದ ನಡುವೆ ಕೈಕಟ್ಟಿ ಕುಳಿತ ಸರ್ಕಾರ
ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದೆ ರೈತರಿಗೆ 2,500 ರೂ. ಘೋಷಿಸಿ ಕೈಕಟ್ಟಿ ಕುಳಿತಿದ್ದಾರೆ. ರಾಜ್ಯ ಸರ್ಕಾರ ವಿವೇಕತನದಿಂದ ವರ್ತನೆ ಮಾಡಲಿ. ಕಬ್ಬು ಬೆಳೆಗಾರರ ಹೋರಾಟ, ಪಾದಯಾತ್ರೆಗೆ ನಮ್ಮ ಬೆಂಬಲ. ರೈತರ ಸಮಸ್ಯೆಗೆ ಪರಿಹಾರದ ಬಗ್ಗೆ ಗೊಂದಲ ಇಲ್ಲ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವ ಶಿವರಾಜಸಿಂಗ್ ಚವ್ಹಾಣ್ ಭೇಟಿ ಆಗಿದ್ದಾರೆ. ರೈತರ ಮುಖಂಡರನ್ನು ಭೇಟಿ ಆಗಿದ್ದಾರೆ, ಸಮಿತಿ ರಚನೆ ಮಾಡಿದ್ದಾರೆ. ದಸರಾ ಮುಗಿದ ಬಳಿಕ ಸಮಿತಿ ರೈತರ ಸಮಸ್ಯೆ ಆಲಿಸಲಿದೆ. ಕಬ್ಬು ಬೆಳೆಗಾರರ ವಿಚಾರಕ್ಕೆ ರಾಜ್ಯ ಸರ್ಕಾರದ ಜವಬ್ದಾರಿಯೂ ಇದೆ. ಎಸ್ಎಪಿಯನ್ನು ರಾಜ್ಯ ಸರ್ಕಾರ ಕೊಡಬೇಕಾಗುತ್ತದೆ. ರೈತರ ಬೇಡಿಕೆಯಂತೆ ಸಾವಿರ ರೂಪಾಯಿಯಂತೆ ರಾಜ್ಯ ಸರ್ಕಾರ ಕೊಡಬೇಕು ಎಂದು ಹೇಳಿದರು.
ಸಿಜೆಪಿಗೆ ಕಾಂಗ್ರೆಸ್ ಫಂಡಿಂಗ್: ಆರೋಪ
ಕಾಂಗ್ರೆಸ್ ಮುಖಂಡರ ಹೇಳಿಕೆಗಳನ್ನು ಗಮನಿಸಬೇಕು. ಸಿಜೆಪಿ, ಸಂಘಟನೆಗಳಿಗೆ ಕಾಂಗ್ರೆಸ್ ಫಂಡಿಂಗ್ ಸ್ಪಷ್ಟವಾಗಿದೆ. ವಿದೇಶಿ ಫಂಡಿಂಗ್ ಜತೆ ಕಾಂಗ್ರೆಸ್ ಹಣ ನೀಡುತ್ತಿದೆ. ಸೋಲಿನಿಂದ ಹತಾಶರಾದ ರಾಹುಲ್ ಗಾಂಧಿಯಿಂದ ಸಂಘಟನೆಗಳ ದುರ್ಬಳಕೆ. ದೇಶದಲ್ಲಿ ಒಂದು ರೀತಿ ಅತಂತ್ರ ಸೃಷ್ಟಿಗೆ ಕಾಂಗ್ರೆಸ್ ಕೈಹಾಕಿದೆ. ರಾಹುಲ್ ಗಾಂಧಿ ಏನೇ ಕಪಟ ನಾಟಕ ಮಾಡಲಿ. ಕಮ್ಯೂನಿಸ್ಟ್ ಪಾರ್ಟಿ ಬಳಸಿ ದೇಶದಲ್ಲಿ ಗೊಂದಲ ಸೃಷ್ಟಿ ಯತ್ನ ಫಲಿಸಲ್ಲ. ದೇಶದ ಜನ ಪ್ರಧಾನಿ ಮೋದಿ ನಾಯಕತ್ವ ಒಪ್ಪಿಕೊಂಡಿದ್ದಾರೆ. ಇದೆಲ್ಲ ತಾತ್ಕಾಲಿಕ, ಎಲ್ಲವೂ ಸರಿ ಹೋಗಲಿದೆ ಎಂದರು.
ಇದನ್ನೂ ಓದಿ:
ಹಿರಿಯೂರು ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಕೇಂದ್ರ ಕೋರ್ ಕಮಿಟಿಯಲ್ಲಿ ಚರ್ಚೆ ಆಗಿದೆ. ಕೆಲವು ಅಭ್ಯರ್ಥಿ ಆಕಾಂಕ್ಷಿಗಳ ಹೆಸರು ಚರ್ಚೆ ಆಗಿದೆ. ಕೇಂದ್ರದ ಚುನಾವಣೆ ಕಮಿಟಿಗೆ ಹೆಸರು ಕಳಿಸುತ್ತೇವೆ ಹಿರಿಯೂರು ಕ್ಷೇತ್ರಕ್ಕೆ ಬಿಜೆಪಿ ಅಥವಾ ಜೆಡಿಎಸ್ ಅಭ್ಯರ್ಥಿ ಎಂಬುದು ತೀರ್ಮಾನಿಸುತ್ತೇವೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.



