ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸತತ ಎರಡನೇ ದಿನವೂ ಕುಸಿತ ಕಂಡಿದೆ. ನಿನ್ನೆ ಬಂಗಾರದ ದರದಲ್ಲಿ 85 ರೂಪಾಯಿ ಇಳಿಕೆಯಾಗಿದ್ದರೆ, ಇಂದು (ಮಂಗಳವಾರ) ಬರೋಬ್ಬರಿ 265 ರೂಪಾಯಿಗಳಷ್ಟು ಭಾರಿ ತಗ್ಗಿದೆ. ವಿದೇಶಿ ಮಾರುಕಟ್ಟೆಯಲ್ಲೂ ಚಿನ್ನದ ದರ ಇಳಿಕೆಯಾಗಿದ್ದು, ಇದರ ಪ್ರಭಾವ ದೇಶೀಯ ಮಾರುಕಟ್ಟೆಯ ಮೇಲೂ ಬೀರಿದೆ.
ಆಭರಣ ಚಿನ್ನ ಹಾಗೂ ಅಪರಂಜಿ ದರ ವಿವರ
ಬೆಲೆ ಇಳಿಕೆಯಿಂದಾಗಿ ಆಭರಣ ಚಿನ್ನದ (22 ಕ್ಯಾರಟ್) ದರ ಮತ್ತೊಮ್ಮೆ 13,000 ರೂ. ಗಡಿಯೊಳಗೆ ಬಂದಿದೆ. ಇತ್ತ 24 ಕ್ಯಾರಟ್‌ನ ಅಪರಂಜಿ ಚಿನ್ನದ ಬೆಲೆಯೂ ಸಹ 14,000 ರೂ. ಮಟ್ಟಕ್ಕಿಂತ ಕೆಳಗಿಳಿಯುವ ಸನ್ನಾಹದಲ್ಲಿದೆ. ಸದ್ಯ ಭಾರತದಲ್ಲಿ 10 ಗ್ರಾಂ ತೂಕದ 22 ಕ್ಯಾರಟ್ ಚಿನ್ನದ ಬೆಲೆ 1,28,450 ರೂಪಾಯಿ ಹಾಗೂ 24 ಕ್ಯಾರಟ್ ಚಿನ್ನದ ಬೆಲೆ 1,40,130 ರೂಪಾಯಿ ಆಗಿದೆ.
ಬೆಂಗಳೂರು ಮತ್ತು ಇತರೆಡೆ ಇಂದಿನ ದರ ಎಷ್ಟು?
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ 1,28,450 ರೂಪಾಯಿ ತಲುಪಿದೆ. ಇನ್ನು ತಮಿಳುನಾಡು ಹಾಗೂ ಕೇರಳದ ಕೆಲವು ಪ್ರಮುಖ ನಗರಗಳಲ್ಲಿ ಚಿನ್ನದ ದರ 24,500 ರೂಪಾಯಿ ಆಸುಪಾಸಿನಲ್ಲಿದೆ.
ಬೆಳ್ಳಿ ಬೆಲೆಯಲ್ಲೂ ಕುಸಿತ
ಚಿನ್ನದ ಬೆನ್ನಲ್ಲೇ ಬೆಳ್ಳಿ ದರದಲ್ಲೂ ಐದು ರೂಪಾಯಿಗಳಷ್ಟು ಇಳಿಕೆ ಕಂಡುಬಂದಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ 100 ಗ್ರಾಂ ಬೆಳ್ಳಿಯ ಬೆಲೆ 23,500 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲೂ ಇದೇ ದರ ಮುಂದುವರಿದಿದೆ. ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿರುವುದು ಆಭರಣ ಖರೀದಿದಾರರಲ್ಲಿ ಸಂತಸ ಮೂಡಿಸಿದೆ.



