June 30, 2026
Tuesday, June 30, 2026
spot_img

ಚಿಕ್ಕದಾಗಿರೋ ಮನೆಯ ಲಿವಿಂಗ್‌ ರೂಮ್‌ ದೊಡ್ಡದಾಗಿ ಕಾಣಿಸ್ಬೇಕಾದ್ರೆ ಈ ಟ್ರಿಕ್ಸ್‌ ನೆನಪಿಡಿ

ತಮ್ಮ ಕನಸಿನ ಮನೆ ದೊಡ್ಡದಾಗಿ, ಅಂದವಾಗಿ ಇರಬೇಕು ಅನ್ನೋದು ಪ್ರತಿಯೊಬ್ಬರ ಕನಸು. ಚಿಕ್ಕ ಸೈಟ್‌ನಲ್ಲಿ ಮನೆ ಕಟ್ಟಿದ್ದೇವೆ, ಅಥವಾ ಲಿವಿಂಗ್‌ ರೂಮ್‌ ಚಿಕ್ಕದಾಯ್ತು ಅನ್ನೋರು ಕೆಲವು ಟ್ರಿಕ್ಸ್‌ಗಳನ್ನು ಬಳಸಿ ಮನೆ ದೊಡ್ಡದಾಗಿ ಕಾಣುವಂತೆ ಮಾಡಬಹುದು. ಯಾವ ರೀತಿ ಟ್ರಿಕ್ಸ್‌? ಇಲ್ಲಿದೆ ನೋಡಿ ಮಾಹಿತಿ..

ಮನೆಯ ನೆಲ, ಗೋಡೆ, ಛಾವಣಿ ಎಲ್ಲವೂ ತಿಳಿಬಣ್ಣದ್ದಾಗಿರಲಿ. ಗಾಢ ಬಣ್ಣದ ನೆಲ, ಅದೇ ಬಣ್ಣದ ಗೋಡೆ ಇದ್ದರೆ ಮನೆ ಇನ್ನೂ ಚಿಕ್ಕದಾಗಿ ಕಾಣಿಸುತ್ತದೆ. ಕ್ರೀಮ್‌, ಪೇಸ್ಟಲ್ಸ್‌ ಅಥವಾ ಬೂದುಬಣ್ಣ ಸೂಕ್ತ. ನೆಲಕ್ಕೆ ಕ್ರೀಂ, ಬಿಳಿ ಅಥವಾ ಮರದ ಬಣ್ಣ ಹಾಕಿಸಬಹುದು.

ಮನೆಯ ಲಿವಿಂಗ್‌ ಏರಿಯಾದ ಒಂದು ಭಾಗಕ್ಕೆ ಸಂಪೂರ್ಣ ಕನ್ನಡಿಯ ಡಿಸೈನ್‌ ಮಾಡಿ. ಇದರಿಂದ ಮನೆ ಇನ್ನೂ ದೊಡ್ಡದಾದಂತೆ ಕಾಣಿಸುತ್ತದೆ. ದೊಡ್ಡ ಕನ್ನಡಿ, ದೊಡ್ಡ ಕಿಟಕಿಗಳನ್ನು ಮಿಸ್‌ ಮಾಡಬೇಡಿ. ಕಿಟಕಿಗಳಿಂದ ಬರುವ ಬೆಳಕು ನಿಮ್ಮ ಮನೆಯನ್ನು ಇನ್ನಷ್ಟು ದೊಡ್ಡದಾಗಿ ಕಾಣುವಂತೆ ಮಾಡುತ್ತದೆ.

ಕಾಂಪಾಕ್ಟ್‌ ಫರ್ನಿಚರ್‌ಗಳನ್ನು ಬಳಕೆ ಮಾಡಿ. ಪುಟ್ಟ ಹಾಲ್‌ಗೆ ನೀವು ದೊಡ್ಡ ಮಹಾರಾಜ ಸೋಫಾ ಹಾಕಿಬಿಟ್ರೆ ಇನ್ನೇನಕ್ಕೂ ಜಾಗವೇ ಇಲ್ಲದಂತೆ ಆಗಿಬಿಡುತ್ತದೆ. ಸ್ವಲ್ಪ ಜಾಗ ಉಳಿದಿದ್ದರೂ ಅದನ್ನು ಬಾಲ್ಕನಿ ಮಾಡಿ. ರೂಮಿನ ಬದಲು ಹಾಲ್‌ನಲ್ಲಿ ಬಾಲ್ಕನಿ ಮಾಡಿದ್ರೆ ಇನ್ನೂ ಅಂದವಾಗಿ ಕಾಣಿಸುತ್ತದೆ.

ಲಿವಿಂಗ್‌ ರೂಮ್‌ನಲ್ಲಿ ನೂರಾರು ವಸ್ತುಗಳನ್ನು ಇಡಬೇಡಿ. ಅತಿಯಾಗಿ ಡೆಕೋರೇಷನ್‌ ಮಾಡಬೇಡಿ. ಸಿಂಪಲ್‌ ಆದ ಮನೆಗೆ ಸಿಂಪಲ್‌ ಆದ ಡಿಸೈನ್ಸ್‌ ಇರಲಿ. ದೊಡ್ಡ ಕಾರ್ಪೆಟ್‌, ದೊಡ್ಡ ಸೋಫಾ, ನೂರಾರು ಶೋ ಐಟಮ್ಸ್‌ ಇಡಬೇಡಿ. ಕಲರ್‌ ಕಾಂಬಿನೇಷನ್‌ ತಕ್ಕಂತೆ ಮನೆಯನ್ನು ಡೆಕೋರೆಟ್‌ ಮಾಡಿ.

ಮನೆಯ ಕರ್ಟನ್‌ಗಳ ಮೇಲೆ ಗಮನ ಇರಲಿ. ಪುಟ್ಟ ಕರ್ಟನ್‌ ಬದಲು ಗೋಡೆಯ ಶುರುವಿನಿಂದ ನೆಲದವರೆಗೂ ಬರುವ ಉದ್ದದ ಕರ್ಟನ್‌ಗಳನ್ನು ಬಳಕೆ ಮಾಡಿ. ಇದರಿಂದ ಮನೆ ಉದ್ದ ಹಾಗೂ ಅಗಲ ಎರಡೂ ಚೆನ್ನಾಗಿ ಕಾಣಿಸುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !