September 4, 2026
Friday, September 4, 2026
spot_img

ನಾನೇನು ಕಿವಿ ಮೇಲೆ ದಾಸವಾಳ ಇಟ್ಕೊಂಡಿದಿನಾ? ಸಭೆಗೆ ಬರಿಗೈಲಿ ಬಂದ ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ತರಾಟೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನಲ್ಲಿ ಬೀದಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಸಭೆ ನಡೆಸಿದ್ದು, ಬರಿಗೈಯಲ್ಲಿ ಬಂದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪಶುಸಂಗೋಪನೆ ಇಲಾಖೆಯ ಕಾರ್ಯವೈಖರಿಯನ್ನು ಪರಿಶೀಲನೆ ನಡೆಸಿದರು. ಇಲಾಖೆಯಲ್ಲಿ 19 ಮಂದಿ ಅಧಿಕಾರಿಗಳಿದ್ದರೂ ಸಚಿವರು ಕರೆದ ಸಭೆಗೆ ಕನಿಷ್ಠ ಅಂಕಿ-ಅಂಶಗಳನ್ನು ಇಲ್ಲದೆ ಬರಿಗೈಲಿ ಬಂದಿದ್ದರು. ಇದರಿಂದ ಕೋಪಗೊಂಡ ಸಚಿವರು ನಾವೆಲ್ಲ ಕಿವಿಲಿ ಹೂ ಮುಡ್ಕೊಂಡಿದಿವಾ ಎಂದು ಗರಂ ಆಗಿದ್ದಾರೆ. ಅಲ್ಲದೇ ಅಗತ್ಯ ಅಂಕಿ-ಅಂಶಗಳಿಲ್ಲದೆ ಬರಿಗೈಲಿ ಸಭೆಗೆ ಬಂದ ಅಧಿಕಾರಿಯನ್ನ ಜಿಬಿಎ ಕರ್ತವ್ಯದಿಂದಲೇ ಬಿಡುಗಡೆ ಮಾಡುವಂತೆ ಸ್ಥಳದಲ್ಲೇ ಸೂಚನೆ ನೀಡಿದರು.

ಇದಕ್ಕೆ ಕೋಪಗೊಂಡ ಸಚಿವ ಕೃಷ್ಣ ಬೈರೇಗೌಡ ‘ಅಗತ್ಯ ದಾಖಲೆ ತರದೇ ಬರಿಗೈಲಿ ಬಂದಿದ್ದೀರಾ?’ ನಾನೇನು ಕಿವಿ ಮೇಲೆ ದಾಸವಾಳ ಹೂವು ಇಟ್ಟುಕೊಂಡಿದ್ದೀನಾ? ಇದು ಯಾವ ಜಾದು? ಲಕ್ಷಾಂತರ ಬೀದಿ ನಾಯಿಗಳ ಸಂತಾನಹರಣ ಮಾಡಿದ್ದೇವೆ ಎನ್ನುತ್ತೀರಿ, ಆದರೆ ಅವುಗಳ ಸಂಖ್ಯೆ ಮಾತ್ರ ಹಾಗೆಯೇ ಇದೆ. ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ನೀವು ಜನರನ್ನು ಮೂರ್ಖರನ್ನಾಗಿಸುತ್ತಿದ್ದೀರಾ? ಯಾವುದೇ ಅಂಕಿಅಂಶಗಳಿಲ್ಲದೆ ಸಭೆಗೆ ಹೇಗೆ ಬರುತ್ತೀರಿ? ಇವರನ್ನು ತಕ್ಷಣ ಕರ್ತವ್ಯದಿಂದ ಬಿಡುಗಡೆ ಮಾಡಿ ಎಂದು ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !