September 4, 2026
Friday, September 4, 2026
spot_img

ಟಿವಿ ಮುಂದೆ ಕೂರೋಕೆ ಎಲ್ಲರೂ ರೆಡಿನಾ? ಕಣ್ಣು ಕುಕ್ಕುವಂತಿದೆ ಈ ಬಾರಿಯ ನಯಾ ಬಿಗ್ ಬಾಸ್ ಸಾಮ್ರಾಜ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವರುಷ ಪೂರ್ತಿ ಕಾದಿದ್ದ ಆ ಶುಭಗಳಿಗೆ ಕೊನೆಗೂ ಬಂದೇ ಬಿಡ್ತು. ಟಿವಿ ಮುಂದೆ ಕೂತು ರಿಮೋಟ್ ಕಂಟ್ರೋಲ್ ಪಕ್ಕಕ್ಕಿಟ್ಟು, ‘ಯಾರಪ್ಪಾ ಈ ಸಲ ದೊಡ್ಮನೆಗೆ ಹೋಗೋದು?’ ಎಂದು ಕುತೂಹಲದಿಂದ ಕಾಯ್ತಿದ್ದ ಬಿಗ್ ಬಾಸ್ ಫ್ಯಾನ್ಸ್‌ಗೆ ಮೈ ನವಿರೇಳಿಸೋ ಸರ್ಪ್ರೈಸ್ ಸಿಕ್ಕಿದೆ. ಹೌದು, ಹಿಂದಿ ಬಿಗ್ ಬಾಸ್ ಸೀಸನ್ 20ರ ಗ್ರ್ಯಾಂಡ್ ಹೌಸ್‌ ಹೇಗಿದೆ ಅನ್ನೋದರ ಮೊದಲ ಝಲಕ್ ಹೊರಬಿದ್ದಿದ್ದು, ನೋಡಿದವರೆಲ್ಲಾ ‘ವಾಹ್… ಇದೇನಪ್ಪಾ ಇಷ್ಟೊಂದು ಕ್ರೇಜಿಯಾಗಿದೆ!’ ಅಂತ ಬಾಯ್ಮೇಲೆ ಬೆರಳಿಟ್ಟುಕೊಳ್ತಿದ್ದಾರೆ.

ಈ ಸಲದ ಬಿಗ್ ಬಾಸ್ ಮನೆ ಬರಿ ಮನೆ ಥರ ಇಲ್ಲ, ಇದೊಂಥರಾ ಮೈಂಡ್ ಗೇಮ್ ಆಡೋ ಮ್ಯಾಜಿಕ್ ವರ್ಲ್ಡ್ ಥರ ಡಿಸೈನ್ ಆಗಿದೆ. ಈ ಸೀಸನ್‌ನ ಮೇನ್ ಥೀಮ್ ಏನೆಂದರೆ “ಡ್ಯುಯಾಲಿಟಿ” ಅಂದರೆ ಪ್ರತಿಯೊಂದರಲ್ಲೂ ಎರಡು ಮುಖ! ಅಂದರೆ ಕಣ್ಣಿಗೆ ಕಾಣೋದೊಂದು, ಒಳಗಡೆ ಇರೋದೇ ಇನ್ನೊಂದು. ಪ್ರತಿಯೊಂದು ಮೂಲೆನೂ ಜನರಿಗೆ ಮತ್ತೆ ಸ್ಪರ್ಧಿಗಳಿಗೆ ಶಾಕ್ ಕೊಡೋ ಥರಾನೇ ಕಟ್ಟಿದ್ದಾರೆ.

ರೂಮ್ ನಂಬರ್ 2 ಮತ್ತು 20ರ ಸಸ್ಪೆನ್ಸ್

ಈ ಬಾರಿ ಮನೆ ಒಳಗಡೆ ಕಾಲಿಡ್ತಿದ್ದಂಗೆ ಕಣ್ಣು ನೆಡೋದು ‘ರೂಮ್ ನಂಬರ್ 2’ ಮತ್ತು ‘ರೂಮ್ ನಂಬರ್ 20’ ಮೇಲೆ. ಈ ಎರಡು ರೂಮ್‌ಗಳಲ್ಲಿ ಏನೋ ದೊಡ್ಡ ರಹಸ್ಯನೇ ಅಡಗಿದೆ ಅಂತ ಟೀಸರ್ ಸುಳಿವು ಕೊಡ್ತಿದೆ. ಇನ್ನು ಮನೆಯ ಒಳಗಡೆ ಇಟ್ಟಿರೋ ಕಲಾಕೃತಿಗಳಂತೂ ಕಂಪ್ಲೀಟ್ ಕ್ರೇಜಿ. ಜಿಮ್, ಈಜುಕೊಳ, ಸೂಪರ್ ಲಾನ್ ಜೊತೆಗೆ, ಅಡುಗೆ ಮನೆಯಲ್ಲಿ ‘BB ಫುಡ್ ಟ್ರಕ್’ ಎಂದು ಬರೆದಿರೋ ಬೋರ್ಡ್ ಹೈಲೈಟ್ ಆಗ್ತಿದೆ.

ಸೀಕ್ರೆಟ್ ಮೆಸೇಜ್ ಗೋಡೆಗಳು

ಇಷ್ಟೇ ಅಲ್ಲ, ಟೀ ಕುಡಿಯೋ ಕಪ್‌ಗಳು ಬೆಂಚ್ ಆಗಿದ್ರೆ, ಸಮುದ್ರದ ಆಕ್ಟೋಪಸ್ ಚೆಸ್ ಗೇಮ್ ಆಡ್ತಿದೆ. ಮೇಲಕ್ಕೆ ಹಾರೋ ಹಾಟ್-ಏರ್ ಬಲೂನ್ ಇಲ್ಲೊಂದು ಜಬರ್ದಸ್ತ್ ಸೀಟಿಂಗ್ ಜಾಗ ಆಗಿದೆ. ಗೋಡೆಗಳ ಮೇಲಂತೂ “ತಥಾಸ್-ಟೂ”, “ಪ್ರತಿ ಕ್ಷಣನೂ ಎಂಜಾಯ್ ಮಾಡಿ” ಮತ್ತು “ಈ ಗೋಡೆಗಳಿಗೂ ಕಣ್ಣುಗಳಿವೆ” ಎಂದು ಬರೆದಿರೋ ಮೆಸೇಜ್‌ಗಳು ಸ್ಪರ್ಧಿಗಳಿಗೆ ಬೆವರು ಇಳಿಸೋದು ಪಕ್ಕಾ. ಆರ್ಟ್ ಡೈರೆಕ್ಟರ್ ವರ್ಷಾ ಜೈನ್ ಅವರು, “ನಮಗೆ ದಿನಾ ಸಿಗೋ ವಸ್ತುಗಳನ್ನೇ ವಿಭಿನ್ನವಾಗಿ ತೋರಿಸೋ ಐಡಿಯಾ ಇತ್ತು, ಅದಕ್ಕೆ ಹೀಗೆ ಡಿಸೈನ್ ಮಾಡಿದ್ದೀವಿ” ಎಂದು ಹೇಳಿದ್ದಾರೆ.

ಸೆಪ್ಟೆಂಬರ್ 6ಕ್ಕೆ ಗ್ರ್ಯಾಂಡ್ ಓಪನಿಂಗ್!

ಇನ್ನು ಬಾಲಿವುಡ್ ಸುಲ್ತಾನ್, ಸಲ್ಮಾನ್ ಖಾನ್ ತಮ್ಮದೇ ಸ್ಟೈಲ್ ನಲ್ಲಿ ನಿರೂಪಣೆ ಮಾಡೋಕೆ ರೆಡಿಯಾಗಿದ್ದಾರೆ. ಯಾರ್ಯಾರು ಕಂಟೆಸ್ಟೆಂಟ್ಸ್ ಆಗಿ ಬರ್ತಾರೆ ಅನ್ನೋ ಕುತೂಹಲ ಕೋಟಿ ಜನರಲ್ಲಿದೆ. ಸೆಪ್ಟೆಂಬರ್ 6ರಿಂದ ಜಿಯೋ-ಹಾಟ್‌ಸ್ಟಾರ್ ಮತ್ತು ಕಲರ್ಸ್ ಚಾನೆಲ್‌ನಲ್ಲಿ ಈ ಮಹಾ ಶೋ ಶುರುವಾಗಲಿದೆ. ಒಟ್ಟಿನಲ್ಲಿ ಈ ಸಲದ ಬಿಗ್ ಬಾಸ್ ಮನೆ ಮಾತ್ರ ಸಖತ್ ರಂಗಾಗಿದೆ, ಆಟ ಇನ್ನಷ್ಟು ಮಜಾವಾಗಿರಲಿದೆ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !