ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರೀತಿ ಹೆಸರಿನಲ್ಲಿ ಯುವಕನೊಬ್ಬ ಕೊಡುತ್ತಿದ್ದ ಕಾಟವನ್ನು ತಾಳಲಾರದೇ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ನಡೆದಿದೆ.
ವರ್ಷಾ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಯುವತಿ. ವರ್ಷಾ ಮೈಸೂರಿನಲ್ಲಿ ಬಿ.ಇ. ವ್ಯಾಸಂಗ ಮಾಡುತ್ತಿದ್ದರು. ಕೆಲ ದಿನಗಳಿಂದ ಒಬ್ಬ ಯುವಕ ವರ್ಷಾಳನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದ. ಆದರೆ ವರ್ಷಾಗೆ ಇದು ಇಷ್ಟವಿರಲಿಲ್ಲ. ಆದರೆ ತನ್ನ ಪ್ರೀತಿಯನ್ನು ಅಕ್ಸೆಪ್ಟ್ ಮಾಡಲೇಬೇಕು ಎಂದು ಆತ ಫೋರ್ಸ್ ಮಾಡಿದ್ದಾನೆ.
ಈ ವಿಷಯವನ್ನು ಮನೆಯವರಿಗೂ ತಿಳಿಸಲಾಗದೇ ವರ್ಷಾ ಸಂಕಟಪಟ್ಟಿದ್ದಾಳೆ. ಆತನ ಕಾಟ ತಾಳಲಾರದೇ ಒಬ್ಬಳೇ ಇದ್ದ ವೇಳೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ತಾಯಿ ಬಳಿ ಒಂದೆರಡು ಬಾರಿ ಹುಡುಗನಿಂದ ಕಿರಿಕಿರಿ ಆಗುತ್ತಿರುವ ವಿಷಯವನ್ನು ಹೇಳಿಕೊಂಡಿದ್ದಳು ಎನ್ನಲಾಗಿದೆ. ತಾಯಿ ನಾಗರತ್ನ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ಸದ್ಯ ಹುಡುಗನಿಗಾಗಿ ಯಳಂದೂರು ಠಾಣೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.



