ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಧುರಂಧರ್’ ಮತ್ತು ‘ಧುರಂಧರ್ 2’ ಚಿತ್ರಗಳ ಭರ್ಜರಿ ಯಶಸ್ಸಿನ ನಂತರ, ಬಾಲಿವುಡ್ ಸ್ಟಾರ್ ರಣ್‌ವೀರ್ ಸಿಂಗ್ ‘ಡಾನ್ 3’ ಚಿತ್ರದಿಂದ ಹೊರಬಂದಿದ್ದಾರೆ. ಅವರ ಮುಂದಿನ ಚಿತ್ರ ಯಾವುದು ಎಂಬ ಕುತೂಹಲಕ್ಕೆ ಈಗ ತೆರೆ ಬಿದ್ದಿದ್ದು, ನಿರ್ದೇಶಕ ಜೈ ಮೆಹ್ತಾ ಅವರ ‘ಪ್ರಳಯ’ ಸಿನಿಮಾದಲ್ಲಿ ನಟಿಸುವುದು ಕನ್ಫರ್ಮ್ ಆಗಿದೆ. ಇದು ಹಾಲಿವುಡ್ ಶೈಲಿಯ ರೋಮಾಂಚಕ ಜೋಂಬಿ ಸರ್ವೈವಲ್ ಥ್ರಿಲ್ಲರ್ ಕಥೆಯಾಗಿದೆ.
ಆಸ್ಟ್ರೇಲಿಯಾದಲ್ಲಿ ಶೂಟಿಂಗ್, 300 ಕೋಟಿ ಬಜೆಟ್
ಜೋಂಬಿಗಳಿಂದ ತುಂಬಿದ ಜಗತ್ತಿನಲ್ಲಿ ದಂಪತಿಯು ಬದುಕುಳಿಯಲು ನಡೆಸುವ ಹೋರಾಟವೇ ಈ ಚಿತ್ರದ ಮುಖ್ಯ ಕಥಾಹಂದರ. ಈ ಹೈ-ವೋಲ್ಟೇಜ್ ಚಿತ್ರಕ್ಕಾಗಿ ರಣ್‌ವೀರ್ ಸಿಂಗ್ ಈಗಾಗಲೇ ಸಿದ್ಧತೆ ಆರಂಭಿಸಿದ್ದಾರೆ. ಸುಮಾರು 300 ಕೋಟಿ ರೂಪಾಯಿ ಭಾರಿ ಬಜೆಟ್‌ನಲ್ಲಿ ನಿರ್ಮಾಣವಾಗಲಿರುವ ಈ ಸಿನಿಮಾ, ರಣ್‌ವೀರ್ ಕೆರಿಯರ್‌ನಲ್ಲೇ ಅತ್ಯಂತ ದುಬಾರಿ ಪ್ರಾಜೆಕ್ಟ್ ಆಗಿದೆ. ಚಿತ್ರದಲ್ಲಿ ಅತ್ಯಾಧುನಿಕ ವಿಎಫ್‌ಎಕ್ಸ್ (VFX) ಮತ್ತು ಗ್ರಾಫಿಕ್ಸ್ ಬಳಸಲಾಗುತ್ತಿದ್ದು, 2026ರ ಸೆಪ್ಟೆಂಬರ್‌ನಿಂದ ಆಸ್ಟ್ರೇಲಿಯಾದಲ್ಲಿ ಇದರ ಬಹುಪಾಲು ಚಿತ್ರೀಕರಣ ನಡೆಯಲಿದೆ.
ದಕ್ಷಿಣದ ಸ್ಟಾರ್ ನಟಿ ಕಲ್ಯಾಣಿ ಪ್ರಿಯದರ್ಶನ್ ನಾಯಕಿ?
ಈ ಚಿತ್ರದಲ್ಲಿ ರಣ್‌ವೀರ್ ಸಿಂಗ್ ಅವರಿಗೆ ಜೋಡಿಯಾಗಿ ಸೌತ್ ಇಂಡಸ್ಟ್ರಿಯ ಖ್ಯಾತ ನಟಿ, ‘ಲೋಕಃ’ ಚಿತ್ರದ ನಾಯಕಿ ಕಲ್ಯಾಣಿ ಪ್ರಿಯದರ್ಶನ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಒಟ್ಟಾರೆಯಾಗಿ, ಈ ವಿಭಿನ್ನ ಹಾರರ್ ಆಕ್ಷನ್ ಸಿನಿಮಾ ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ.



