September 4, 2026
Friday, September 4, 2026
spot_img

ಆಟೋ ಚಾಲಕರಿಗೆ ಗುಡ್‌ನ್ಯೂಸ್‌: ಎಲ್‌ಪಿಜಿ ದರ ಬರೋಬ್ಬರಿ 10 ರೂ. ಇಳಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಿರಂತರ ಎಲ್‌ಪಿಜಿ ದರ ಏರಿಕೆಯಿಂದ ಕಂಗಾಲಾಗಿದ್ದ ಆಟೋ ಚಾಲಕರಿಗೆ ಕೊನೆಗೂ ಗುಡ್‌ನ್ಯೂಸ್‌ ಸಿಕ್ಕಿದೆ.

ಪ್ರಮುಖ ಇಂಧನ ವಿತರಕ ಸಂಸ್ಥೆಯಾದ ಟೋಟಲ್ ಗ್ಯಾಸ್ ತನ್ನ ಬಂಕ್‌ಗಳಲ್ಲಿ ಆಟೋ ಎಲ್‌ಪಿಜಿ ದರವನ್ನು ಪ್ರತಿ ಲೀಟರ್‌ಗೆ ಭರ್ಜರಿ 10 ರೂಪಾಯಿಗಳಷ್ಟು ಕಡಿತಗೊಳಿಸಿದೆ.

ಕಳೆದ ಕೆಲವು ತಿಂಗಳುಗಳ ಹಿಂದೆ ನಡೆದ ಅಮೆರಿಕ, ಇಸ್ರೇಲ್‌ ಮತ್ತು ಇರಾನ್‌ ನಡುವಿನ ಭೀಕರ ಸಂಘರ್ಷದಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಇಂಧನ ಪೂರೈಕೆ ಏರುಪೇರಾಗಿತ್ತು. ಇದರ ನೇರ ಪರಿಣಾಮವಾಗಿ ಆಟೋ ಎಲ್‌ಪಿಜಿ ದರವು ಸಾರ್ವಕಾಲಿಕ ದಾಖಲೆಯ ಬರೋಬ್ಬರಿ 100 ರೂಪಾಯಿಗಳ ಗಡಿಯನ್ನು ದಾಟಿತ್ತು. ಇದು ದೈನಂದಿನ ಜೀವನಕ್ಕಾಗಿ ಆಟೋ ಬಾಡಿಗೆಯನ್ನೇ ನಂಬಿಕೊಂಡಿದ್ದ ಲಕ್ಷಾಂತರ ಚಾಲಕರ ಜೇಬಿಗೆ ಕತ್ತರಿ ಹಾಕಿತ್ತು.

ಈಗ ಜಾಗತಿಕ ಪರಿಸ್ಥಿತಿ ತಿಳಿಯಾಗುತ್ತಿದ್ದಂತೆ ಇತ್ತೀಚೆಗಷ್ಟೇ ಹಂತ-ಹಂತವಾಗಿ 95 ರೂಪಾಯಿಗಳಿಗೆ ಇಳಿಕೆಯಾಗಿದ್ದ ದರ ಇದೀಗ ಮತ್ತೊಂದು ದೊಡ್ಡ ಕುಸಿತ ಕಂಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !