September 4, 2026
Friday, September 4, 2026
spot_img

ಇಸ್ರೋದ GSLV-F17 ರಾಕೆಟ್‌ ಉಡಾವಣೆ ಸಕ್ಸಸ್‌! EOS-05 ಇಮೇಜಿಂಗ್‌ ಉಪಗ್ರಹ ಭಾರತಕ್ಕೆ ಹೊಸ ಮೈಲ್‌ಸ್ಟೋನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಾರತದಲ್ಲಿ ಬಹುತೇಕರು ನಿದ್ದೆಗೆ ಜಾರಿದ್ದ ನಿಶ್ಯಬ್ಧದ ಹೊತ್ತಲ್ಲಿ ಇಸ್ರೋ ದೊಡ್ಡ ಸಾಧನೆಯೊಂದನ್ನು ಮಾಡಿಬಿಟ್ಟಿದೆ! ಹೌದು, ಏಳು ತಿಂಗಳ ವಿರಾಮದ ಬಳಿಕ ಭಾರತೀಯ ಬಾಹ್ಯಾಕಾಶ ಸಂಸೋಧನಾ ಸಂಸ್ಥೆ ಮತ್ತೊಂದು ಉಪಗ್ರಹ ಉಡಾವಣೆ ಮಾಡಿದೆ.

ಭಾರತಕ್ಕೆ ಅತ್ಯಂತ ದೊಡ್ಡ ಮೈಲಿಗಲ್ಲು ಇದಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಭೂ ವೀಕ್ಷಣಾ ಉಪಗ್ರಹ EOS-05 ಅನ್ನು ಹೊತ್ತ GSLV-F17 ರಾಕೆಟ್ ಶುಕ್ರವಾರ ನಸುಕಿನ ಜಾವ 2:55ರ ಸುಮಾರಿಗೆ ಬಾಹ್ಯಾಕಾಶ ನಿಲ್ದಾಣದಿಂದ ಯಶಸ್ವಿಯಾಗಿ ಉಡಾವಣೆಯಾಗಿದೆ.

ಈ ಮೂಲಕ ಮೊಟ್ಟಮೊದಲು EOS-05 ಇಮೇಜಿಂಗ್‌ ಉಪಗ್ರಹವನ್ನ ಯಶಸ್ವಿಯಾಗಿ ಉಡಾಯಿಸಿದ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ 2ನೇ ಉಡಾವಣಾ ಪ್ಯಾಡ್‌ನಿಂದ ರಾಕೆಟ್‌ ಹಾರಿದ್ದು, ಭೂ ವೀಕ್ಷಣಾ ಸಾಟಲೈಟ್ EOS-05 ಅನ್ನು ಸಬ್-ಜಿಯೋಸಿಂಕ್ರೋನಸ್ ವರ್ಗಾವಣೆ ಕಕ್ಷೆಗೆ ಯಶಸ್ವಿಯಾಗಿ ನಿಯೋಜನೆ ಮಾಡುವಲ್ಲಿ ಯಶಸ್ವಿಯಾಗಿದೆ.

ಇದು GSLV ನಿಂದ GTO ಅಥವಾ ಸಬ್-GTO ಕಕ್ಷೆಗೆ ಉಡಾಯಿಸಲಾದ ಅತ್ಯಂತ ಭಾರವಾದ ಉಪಗ್ರಹವಾಗಿದೆ. ಇದು ನಮಗೆಲ್ಲರಿಗೂ ಬಹಳ ಹೆಮ್ಮೆ ಮತ್ತು ಸಂತೋಷದ ಕ್ಷಣ. ಈ ಬಾರಿ EOS-05 ಉಪಗ್ರಹ ಹೊತ್ತು ಉಡಾವಣೆಯಾಗುವ ಮೂಲಕ GSLV ರಾಕೆಟ್‌ ತನ್ನ 19ನೇ ಕಾರ್ಯಚರಣೆ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ EOS-05‌ ಉಪಗ್ರಹವು ಅನನ್ಯವಾಗಿ ಕಾನ್ಫಿಗರ್ ಮಾಡಲಾದ ಭೂ ವೀಕ್ಷಣಾ ಉಪಗ್ರಹವಾಗಿದ್ದು, ನೈಜ-ಸಮಯದ ಚಿತ್ರಣವನ್ನು ಹೊಂದಿದೆ. ಇದು GSLV ಯಿಂದ GTO ಅಥವಾ ಸಬ್-GTO ಕಕ್ಷೆಗೆ ಉಡಾಯಿಸಲ್ಪಟ್ಟ ಅತ್ಯಂತ ಭಾರವಾದ ಉಪಗ್ರಹವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !