July 1, 2026
Wednesday, July 1, 2026
spot_img

ಟಾಕ್ಸಿಕ್‌ ಲೇಡೀಸ್‌ ಎಲ್ಲಿ ಅಂತಿದ್ದೋರಿಗೆ ಉತ್ತರ ಸಿಕ್ಕೇಬಿಡ್ತು, ವುಮೆನ್‌ ಟೀಂ ಟೀಸರ್‌ ರಿಲೀಸ್‌ ಆಯ್ತು ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟ ಯಶ್‌ ಹಾಗೂ ಪವರ್‌ಫುಲ್‌ ನಟಿಯರು ಅಭಿನಯಿಸಿರುವ ಟಾಕ್ಸಿಕ್‌ ಸಿನಿಮಾದ ಹೊಸ ಟೀಸರ್‌ ಬಿಡುಗಡೆ ಆಗಿದೆ. ಸಿನಿಮಾದಲ್ಲಿ ಬರೀ ಯಶ್‌ ಟೀಸರ್‌ ಮಾತ್ರ ಬರ್ತಿದೆ ನಮ್ಮ ಲೇಡೀಸ್‌ ಗ್ಯಾಂಗ್‌ ಎಲ್ಲಿ ಎಂದು ಅಭಿಮಾನಿಗಳು ಪ್ರಶ್ನೆ ಮಾಡ್ತಿದ್ದರು.

ಇದೀಗ ಟಾಕ್ಸಿಕ್‌ ತಂಡ ಪ್ರಶ್ನೆಗೆ ಉತ್ತರ ನೀಡಿದ್ದು, ಲೇಡೀಸ್‌ ಇಂಟ್ರಡಕ್ಷನ್‌ ಟೀಸರ್‌ ರಿಲೀಸ್‌ ಮಾಡಿದೆ.ಟೀಸರ್​​ನ ಆರಂಭದಲ್ಲಿಯೇ ಎಚ್ಚರಿಕೆಯನ್ನು ಸಹ ಚಿತ್ರತಂಡ ನೀಡಿದೆ. ಮಕ್ಕಳು ಈ ಟೀಸರ್​ ನೋಡಬೇಡಿ, ಮಕ್ಕಳಿಗೆ ಈ ಟೀಸರ್ ತೋರಿಸಬೇಡಿ ಎಂದು ಪೋಷಕರಿಗೆ, ವಯಸ್ಸಾದವರು ನಿಮ್ಮ ರಿಸ್ಕ್​​ನಲ್ಲಿ ನೋಡಿ ಎಂಬ ಎಚ್ಚರಿಕೆಯನ್ನು ಟೀಸರ್ ನ ಆರಂಭದಲ್ಲಿಯೇ ನೀಡಲಾಗಿದೆ.

ಈಗ ಬಿಡುಗಡೆ ಆಗಿರುವ ಟೀಸರ್​​ನಲ್ಲಿ ಸಿನಿಮಾನಲ್ಲಿ ನಟಿಸಿರುವ ನಾಯಕಿಯರ ಪಾತ್ರಗಳ ಝಲಕ್ ತೋರಿಸಲಾಗಿದೆ. ಕಿಯಾರಾ ಅಡ್ವಾಣಿ, ನಯನತಾರಾ, ರುಕ್ಮಿಣಿ ವಸಂತ್ , ಹುಮಾ,ತಾರಾ ಸುತಾರಿಯಾ ಟೀಸರ್‌ನಲ್ಲಿ ಮಿಂಚಿದ್ದಾರೆ. ಪ್ರತೀ ನಟಿಗೂ ವಿಭಿನ್ನ ಗೆಟಪ್‌ ಹಾಗೂ ಇಂಟ್ರಡಕ್ಷನ್‌ ನೀಡಲಾಗಿದೆ. ಈ ಸಿನಿಮಾದಲ್ಲಿ ಐವರು ನಾಯಕರು ಯಶ್‌ ಜೊತೆಗಲ್ಲ, ಯಶ್‌ ವಿರುದ್ಧ ಹೋರಾಡ್ತಾರೆ ಎನ್ನುವ ಸುಳಿವುಗಳನ್ನು ಬಿಟ್ಟುಕೊಟ್ಟಿದ್ದಾರೆ. ಟೀಸರ್‌ ಹೇಗಿದೆ? ನೀವೂ ನೋಡಿ..

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !