August 23, 2026
Sunday, August 23, 2026
spot_img

ಚಿನ್ನ ತಗೋಬೇಕಾ? ಹಾಗಿದ್ರೆ ಇಂದಿನ ಚಿನ್ನ, ಬೆಳ್ಳಿ ಬೆಲೆ ಮೊದಲು ತಿಳಿದುಕೊಳ್ಳಿ

ಆಭರಣ ಪ್ರಿಯರಿಗೆ ಚಿನ್ನದ ದರ ಮತ್ತೆ ಶಾಕ್ ನೀಡಿದೆ. ನಿನ್ನೆಯಷ್ಟೇ ಅಲ್ಲದೆ ಇಂದೂ ಕೂಡ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಕೇವಲ ಭಾರತ ಅಷ್ಟೇ ಅಲ್ಲದೆ, ಜಾಗತಿಕ ಮಾರುಕಟ್ಟೆಯಲ್ಲೂ ಹಲವೆಡೆ ಲೋಹದ ಬೆಲೆಗಳು ದುಬಾರಿಯಾಗಿವೆ.

ಇಂದಿನ ಚಿನ್ನದ ದರ ಎಷ್ಟಿದೆ?

ಇಂದಿನ ಮಾರುಕಟ್ಟೆ ಮೌಲ್ಯದ ಪ್ರಕಾರ, ಪ್ರತಿ 1 ಗ್ರಾಮ್ ಚಿನ್ನದ ಬೆಲೆಯಲ್ಲಿ 245 ರೂಪಾಯಿ ಹೆಚ್ಚಳವಾಗಿದೆ. ಇದರೊಂದಿಗೆ ಭಾರತದಲ್ಲಿ ಸದ್ಯ 22 ಕ್ಯಾರಟ್‌ನ 10 ಗ್ರಾಮ್ ಚಿನ್ನದ ಬೆಲೆ 1,32,500 ರೂಪಾಯಿ ತಲುಪಿದೆ. ಅದೇ ರೀತಿ, ಅತ್ಯಂತ ಶುದ್ಧವಾದ 24 ಕ್ಯಾರಟ್‌ನ (ಅಪರಂಜಿ) 10 ಗ್ರಾಮ್ ಚಿನ್ನದ ದರ 1,44,550 ರೂಪಾಯಿ ಆಗಿದೆ.

ಬೆಳ್ಳಿ ಬೆಲೆಯೂ ದುಬಾರಿ!

ಚಿನ್ನದ ದರ ಏರಿಕೆಯ ಬೆನ್ನಲ್ಲೇ ಬೆಳ್ಳಿ ಬೆಲೆಯೂ ಗ್ರಾಮ್‌ಗೆ 5 ರೂಪಾಯಿಯಷ್ಟು ದುಬಾರಿಯಾಗಿದೆ. ಸದ್ಯ ಮಾರುಕಟ್ಟೆಯಲ್ಲಿ 100 ಗ್ರಾಮ್ ಬೆಳ್ಳಿ ಬೆಲೆ 24,500 ರೂಪಾಯಿಗೆ ಮಾರಾಟವಾಗುತ್ತಿದೆ.

ಐಟಿ ಸಿಟಿ ಬೆಂಗಳೂರಿನಲ್ಲಿ 10 ಗ್ರಾಮ್ (22 ಕ್ಯಾರಟ್) ಚಿನ್ನದ ಬೆಲೆ 1,32,500 ರೂಪಾಯಿ ಆಗಿದ್ದರೆ, 100 ಗ್ರಾಮ್ ಬೆಳ್ಳಿ ದರ 24,500 ರೂಪಾಯಿ ಇದೆ. ಇನ್ನು ನೆರೆರಾಜ್ಯಗಳಾದ ತಮಿಳುನಾಡು ಮತ್ತು ಕೇರಳದ ಕೆಲವು ಭಾಗಗಳಲ್ಲಿ 100 ಗ್ರಾಮ್ ಬೆಳ್ಳಿಯ ದರ ಗರಿಷ್ಠ 25,000 ರೂಪಾಯಿವರೆಗೂ ತಲುಪಿದೆ.

ಬೆಲೆಗಳು ನಿರಂತರವಾಗಿ ಏರುತ್ತಿರುವುದರಿಂದ ಹೂಡಿಕೆದಾರರು ಮತ್ತು ಗ್ರಾಹಕರು ಮಾರುಕಟ್ಟೆಯ ಇಂದಿನ ಲೇಟೆಸ್ಟ್ ದರಗಳನ್ನು ಗಮನಿಸಿ ಖರೀದಿ ಮಾಡುವುದು ಉತ್ತಮ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !