July 3, 2026
Friday, July 3, 2026
spot_img

ನಿಮಗೆ ತಾಕತ್ತಿದ್ದರೆ, ಧಮ್ಮಿದ್ದರೆ, ಕನ್ನಡಿಗರ ಮೇಲೆ ಕಾಳಜಿಯಿದ್ದರೆ ತಮಿಳುನಾಡಿಗೆ ಪಾದಯಾತ್ರೆ ಮಾಡಿ: ಸಿಎಂಗೆ ಆರ್‌. ಅಶೋಕ್‌ ಸವಾಲ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಿಮ್ಮದೇ ಕಾಂಗ್ರೆಸ್‌ ಪಕ್ಷದ ತಮಿಳುನಾಡು ಘಟಕದ ಅಧ್ಯಕ್ಷರಯ ಮೇಕೆದಾಟಿಗೆ ಒಂದು ಇಟ್ಟಿಗೆ ಹಾಕೋದಕ್ಕೂ ಬಿಡೋದಿಲ್ಲ ಎಂದು ಸವಾಲ್‌ ಹಾಕಿದ್ದಾರೆ. ನೀವೇನ್‌ ಮಾಡ್ತಾ ಇದ್ದೀರಾ? ನಿಮಗೆ ತಾಕತ್ತಿದ್ದರೆ, ಧಮ್ಮಿದ್ದರೆ, ಕನ್ನಡಿಗರ ಮೇಲೆ ನಿಜವಾದ ಕಾಳಜಿಯಿದ್ದರೆ, ಈಗ ಚೆನ್ನೈಗೆ ಪಾದಯಾತ್ರೆ ಮಾಡಿ ಅಲ್ಲಿನ ತಮಿಳುನಾಡು ಕಾಂಗ್ರೆಸ್ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಕೂತು ನಿಮ್ಮ ರಾಜಕೀಯ ಬದ್ಧತೆಯನ್ನು ಸಾಬೀತುಪಡಿಸಿ ಎಂದು ಸಿಎಂ ಡಿ.ಕೆ. ಶಿವಕುಮಾರ್‌ಗೆ ಆರ್‌. ಅಶೋಕ್‌ ಸವಾಲ್‌ ಹಾಕಿದ್ದಾರೆ.

ಡಿಕೆಶಿ ವಿರುದ್ಧ ಸುದೀರ್ಘ ಟ್ವೀಟ್‌ ಮಾಡಿದ್ದು, ಅಂದು ವೋಟು ಗಿಟ್ಟಿಸಿಕೊಳ್ಳಲು ಪಾದಯಾತ್ರೆಯ ನಾಟಕವಾಡಿದ ನೀವು ಈಗ ತಮಿಳುನಾಡಿನ ಮೈತ್ರಿ ರಾಜಕಾರಣಕ್ಕೆ ಹೆದರಿ ತಲೆಮರೆಸಿಕೊಂಡಿದ್ದೀರಾ? ಕಾವೇರಿ ಕೊಳ್ಳದ ನಮ್ಮ ರೈತರ ಮತ್ತು ಬೆಂಗಳೂರಿನ ಕೋಟ್ಯಂತರ ಜನರ ಕುಡಿಯುವ ನೀರಿನ ಹಕ್ಕಿಗಿಂತ ನಿಮಗೆ ದೆಹಲಿ ಹೈಕಮಾಂಡ್ ಅಣತಿ ಮತ್ತು ತಮಿಳುನಾಡಿನ ಮೈತ್ರಿ ರಾಜಕಾರಣವೇ ಹೆಚ್ಚಾಯಿತೇ? ಇದು ಕನ್ನಡಿಗರ ರಕ್ತ ಹೀರುವ ನಡೆ. ಚುನಾವಣೆಗಾಗಿ ಮೇಕೆದಾಟು ಹೆಸರು ಬಳಸಿಕೊಂಡ ಹಾಗೆ ಅಲ್ಲ, ಈಗ ಕೆಲಸ ಮಾಡಿ ಎಂದು ಗರಂ ಆಗಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !