August 25, 2026
Tuesday, August 25, 2026
spot_img

ಮ್ಯಾನೇಜರ್‌ಗಳಿಗೆ ಎಂಪ್ಲಾಯಿಗಳು ಸೇವಕರ ರೀತಿ ಕಾಣಿಸ್ತಾರಾ? ಹುಷಾರಿಲ್ಲದಕ್ಕೆ ಪ್ರೂಫ್‌ ಕೇಳಿದವರಿಗೆ ಚಳಿ ಬಿಡಿಸಿದ ಜೆನ್‌ ಝೀ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಖಾಸಗಿ ಕಂಪನಿಗಳಲ್ಲಿ ಎಂಪ್ಲಾಯಿಗಳಿಗೆ ರಜೆ ಸಿಗೋದು ತುಂಬಾನೇ ಕಷ್ಟ. ಕೆಲವು ಕಡೆ ಹುಷಾರಿಲ್ಲ ಅಂದರೆ ಏನೂ ಕೇಳದೇ ರಜೆ ಹಾಕಿ ರೆಸ್ಟ್‌ ಮಾಡಿ ಎನ್ನುವ ಬಾಸ್‌ಗಳಿದ್ದಾರೆ. ಆದರೆ ಹಲವು ಕಡೆ ಏನು ಹುಷಾರಿಲ್ಲ? ಇಲ್ಲೇ ಬನ್ನಿ ಆಸ್ಪತ್ರೆ ಇದೆ, ಮನೆಯಿಂದಲೇ ಕೆಲಸ ಮಾಡಿ ಅನ್ನೋರು ಇದ್ದಾರೆ.

ಇದೇ ರೀತಿಯ ಮ್ಯಾನೇಜರ್‌ ಒಬ್ಬರಿಗೆ ಜೆನ್‌ಝೀಯೊಬ್ಬರು ಚಳಿ ಬಿಡಿಸಿರುವ ವಾಟ್ಸಾಪ್‌ ಸ್ಕ್ರೀನ್‌ಶಾಟ್‌ ವೈರಲ್‌ ಆಗಿದೆ. ಮ್ಯಾನೇಜರ್‌ಗೆ ಉಲ್ಟಾ ಮಾತಾಡಿದ್ರೆ ತಮ್ಮ ಕೆಲಸ, ಹೈಕ್‌ ಇನ್ನಿತರ ಸಮಸ್ಯೆಗಳು ಬರುತ್ತವೆ ಎಂದು ಎಲ್ಲವನ್ನೂ ಸಹಿಸಿಕೊಂಡು ಹೋಗುವ ಜನರ ಮಧ್ಯೆ ಈ ಜನರೇಷನ್‌ ಝೀ ಇರುವುದನ್ನು ಇರುವಂತೆಯೇ ಹೇಳೋದು ಕಲಿತಿದೆ.

ವಾಟ್‌ ಎವರ್‌ ವಿಶಾಲ್‌ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ಪೋಸ್ಟ್ ನಲ್ಲಿ ಜೆನ್‌ ಝೀ ಉದ್ಯೋಗಿ ಹಾಗೂ ಮ್ಯಾನೇಜರ್ ನಡುವಿನ ವಾಟ್ಸ್ಪ್‌ ಸಂಭಾಷಣೆಯ ಸ್ಕ್ರೀನ್‌ಶಾಟ್ ನೋಡಬಹುದು. ಸರ್‌ ನನಗೆ ಹುಷಾರಿಲ್ಲ ಆಫೀಸ್‌ಗೆ ಬರೋಕೆ ಆಗೋದಿಲ್ಲ ಎಂದು ಎಂಪ್ಲಾಯಿ ಹೇಳಿದ್ದಾರೆ. ಅದಕ್ಕೆ ಮ್ಯಾನೇಜರ್‌ ಆಸ್ಪತ್ರೆಗೆ ಹೋಗೋಣ ಬನ್ನಿ ಎಂದಿದ್ದಾರೆ. ಮತ್ತೆ ಎಂಪ್ಲಾಯಿ ಅವಶ್ಯಕತೆ ಇದ್ದರೆ ಹೇಳ್ತೇನೆ. ಈಗ ಪ್ಯಾರಾಸಿಟಮಲ್‌ ತಗೊಂಡು ಮಲ್ಕೋತಿನಿ ಎಂದಿದ್ದಾರೆ. ಅದಕ್ಕೆ ಮ್ಯಾನೇಜರ್‌ ಡೈರೆಕ್ಟರ್‌ ಹೇಳಿದ್ದಾರೆ. ಯಾರಿಗೆ ಹುಷಾರಿಲ್ವೋ ಅವರ ಬಳಿ ವೈದ್ಯರ ಪ್ರಿಸ್ಕ್ರಿಪ್ಷನ್‌ ತಗೊಳೋದಕ್ಕೆ ಎಂದಿದ್ದಾರೆ. ಇದಕ್ಕೆ ಗರಂ ಆದ ಎಂಪ್ಲಾಯಿ, ನಾನು ಶಾಲೆಯಲ್ಲಿ ಓದೋ ವಿದ್ಯಾರ್ಥಿ ಅಲ್ಲ. ಅವರು ನಮ್ಮ ಕಂಪನಿಯ ಡೈರೆಕ್ಟರ್‌ ತಾನೆ, ಡಾಕ್ಟರ್‌ ಅಲ್ವಲ್ಲ! ಅವರ ಹೆಸರಲ್ಲೇ ಒಂದು ಪ್ರಿಸ್ಕ್ರಿಪ್ಷನ್‌ ನೀವೇ ಬರ್ಕೊಳಿ. ನನ್ನ ಹತ್ರ ಯಾವ ವೈದ್ಯರ ಚೀಟಿಯೂ ಇಲ್ಲ, ಅಪ್ಪ ಅಮ್ಮ ಸೈನ್‌ ಮಾಡಿರುವ ಲೀವ್‌ ನೋಟ್‌ ಕೂಡ ಇಲ್ಲ. ಈಗ ನಾನು ರೆಸ್ಟ್‌ ಮಾಡ್ಬೇಕು. ಕಾಲ್‌ ಅಥವಾ ಮೆಸೇಜ್‌ಗೆ ರಿಪ್ಲೇ ಮಾಡೋದಿಲ್ಲ ಎಂದು ಬರೆದುಕೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !