October 25, 2026
Sunday, October 25, 2026
spot_img

ವಾಲ್ಮೀಕಿ ಪ್ರಶಸ್ತಿ ವಿಜೇತರ ಪಟ್ಟಿ ಪ್ರಕಟ: 10 ಸಾಧಕರಿಗೆ ನಗದು ಬಹುಮಾನದ ಜೊತೆಗೆ ಚಿನ್ನದ ಪದಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮಹರ್ಷಿ ವಾಲ್ಮೀಕಿ ಜಯಂತಿಯ ಸಂಭ್ರಮಕ್ಕೆ ಕರ್ನಾಟಕ ಸಜ್ಜಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಸಾಲಿನ ರಾಜ್ಯಮಟ್ಟದ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ 10 ಸಾಧಕರನ್ನು ಆಯ್ಕೆ ಮಾಡಿದೆ.

ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.

137 ಅರ್ಜಿಗಳಿಂದ 10 ಸಾಧಕರ ಆಯ್ಕೆ

ಈ ಬಾರಿಯ ಪ್ರಶಸ್ತಿಗಾಗಿ ರಾಜ್ಯದ ವಿವಿಧ ಭಾಗಗಳಿಂದ ಒಟ್ಟು 137 ಅರ್ಜಿಗಳು ಸಲ್ಲಿಕೆಯಾಗಿದ್ದವು. ತಜ್ಞರ ಸಮಿತಿಯು ಅರ್ಜಿಗಳನ್ನು ಪರಿಶೀಲಿಸಿ, ಶಿಕ್ಷಣ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆ, ವಿಜ್ಞಾನ-ತಂತ್ರಜ್ಞಾನ ಹಾಗೂ ಸಾಮಾಜಿಕ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೊಡುಗೆ ನೀಡಿದವರನ್ನು ಆಯ್ಕೆ ಮಾಡಿದೆ.

ಇದನ್ನೂ ಓದಿ:

ಪ್ರಶಸ್ತಿಗೆ ಆಯ್ಕೆಯಾದವರು ಯಾರೆಲ್ಲ?

ಕೇತಮ್ಮ – ಸಾಮಾಜಿಕ ಸೇವೆ
ಡಾ. ಚಂದ್ರನಾಯಕ್ ಎಸ್. – ವಿಜ್ಞಾನ, ತಂತ್ರಜ್ಞಾನ ಮತ್ತು ಶಿಕ್ಷಣ
ತಿಪ್ಪಣ್ಣ ಮರಿಕುಂಟೆ – ಸಾಹಿತ್ಯ ಕ್ಷೇತ್ರ
ಶಿವನಗೌಡ ಹೊನ್ನನಗೌಡ ಪಾಟೀಲ್ – ಸಾಮಾಜಿಕ ಸೇವೆ
ತೇಜಸ್ವಿ ಕಟ್ಟಿಮನಿ – ಶೈಕ್ಷಣಿಕ ಕ್ಷೇತ್ರ
ವೆಂಕಟರಾಮ್ – ಸಾಮಾಜಿಕ ಸೇವೆ
ಆರ್.ಎಂ. ಮುನಿರಾಜು – ಸಾಂಸ್ಕೃತಿಕ ಸೇವೆ
ಬಿ.ಜಿ. ಕೃಷ್ಣಪ್ಪ – ಸಾಮಾಜಿಕ ಸೇವೆ
ನಂದಕುಮಾರ ಮಾಲಿ ಪಾಟೀಲ – ಸಾಮಾಜಿಕ ಸೇವೆ
ಜೆ.ಪಿ. ರಾಜು – ಸಾಮಾಜಿಕ ಸೇವೆ

ಪ್ರಶಸ್ತಿಯೊಂದಿಗೆ ನಗದು, ಚಿನ್ನದ ಪದಕ

ಪ್ರತಿಯೊಬ್ಬ ಪುರಸ್ಕೃತರಿಗೂ 5 ಲಕ್ಷ ನಗದು ಬಹುಮಾನ, 25 ಗ್ರಾಂ ಚಿನ್ನದ ಪದಕ, ಸ್ಮರಣಿಕೆ ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುತ್ತದೆ. ಸಾಧಕರ ಸೇವೆಯನ್ನು ಗುರುತಿಸುವುದರ ಜೊತೆಗೆ ಸಮಾಜಕ್ಕೆ ಅವರ ಕೊಡುಗೆಯನ್ನು ಪರಿಚಯಿಸುವುದೂ ಈ ಗೌರವದ ಉದ್ದೇಶವಾಗಿದೆ.

ಬೆಂಗಳೂರಿನಲ್ಲಿ ವಾಲ್ಮೀಕಿ ಜ್ಯೋತಿ ಮೆರವಣಿಗೆ

ಜಯಂತಿಯ ಅಂಗವಾಗಿ ಬೆಂಗಳೂರಿನಲ್ಲಿ ‘ವಾಲ್ಮೀಕಿ ಜ್ಯೋತಿ ಮೆರವಣಿಗೆ’ ಆಯೋಜಿಸಲಾಗಿದೆ. ಬಸವನಗುಡಿಯ ಬೇಡರ ಕಣ್ಣಪ್ಪ ಸ್ವಾಮಿ ದೇವಸ್ಥಾನದಿಂದ ಆರಂಭವಾಗುವ ಮೆರವಣಿಗೆಯಲ್ಲಿ ಪೂರ್ಣಕುಂಭ, ನಾದಸ್ವರ, ಡೊಳ್ಳು ಕುಣಿತ ಹಾಗೂ ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಲಿವೆ. ಬಳಿಕ ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿ, ವಿಧಾನಸೌಧದಲ್ಲಿ ಮುಖ್ಯ ಸಮಾರಂಭ ನಡೆಯಲಿದೆ.

Must Read

Skip to toolbar