ಸಾಮಾಗ್ರಿಗಳು
ಅವಲಕ್ಕಿ ತೆಳುವಾದ್ದು
ಈರುಳ್ಳಿ
ಕಾಯಿತುರಿ
ಸೌತೆಕಾಯಿ
ಒಗರಣೆಗೆ ಎಣ್ಣೆ ಸಾಸಿವೆ ಜೀರಿಗೆ ಕಡ್ಲೆಬೇಳೆ ಶೇಂಗಾ ಹಸಿಮೆಣಸು
ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
ಮೊದಲು ಅವಲಕ್ಕಿಯನ್ನು ಒಂದು ಬೌಲ್ ಗೆ ಹಾಕಿಕೊಳ್ಳಿ, ಇದಕ್ಕೆ ತುರಿದ ಸೌತೆಕಾಯಿ ಹಾಗೂ ಕಾಯಿತುರಿಯನ್ನು ಹೇರಳವಾಗಿ ಹಾಕಿ
ನಂತರ ಹಸಿ ಈರುಳ್ಳಿ ಹಾಗೂ ಕೊತ್ತಂಬರಿ ಸೊಪ್ಪು, ಉಪ್ಪು ಹಾಕಿ ಕೈಯಲ್ಲಿ ಮಿಕ್ಸ್ ಮಾಡಿ
ಆನಂತರ ಒಗರಣೆಗೆ ಎಣ್ಣೆ ಹಾಕಿ, ನಂತರ ಸಾಸಿವೆ ಜೀರಿಗೆ ಕಡ್ಲೆಬೇಳೆ ಶೇಂಗಾ ಹಸಿಮೆಣಸು ಹಾಕಿ ಬಾಡಿಸಿ
ಸ್ವಲ್ಪ ಹಿಂಗ್ ಹಾಕಿ ಮಿಕ್ಸ್ ಮಾಡಿ
ಈ ಒಗರಣೆಯನ್ನು ಅವಲಕ್ಕಿಗೆ ಹಾಕಿ ಮಿಕ್ಸ್ ಮಾಡಿದ್ರೆ ನಿಮ್ಮ ಕಾಯಿತುರಿಯ ಅವಲಕ್ಕಿ ರೆಡಿ



