ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರತಿಷ್ಠಿತ ಕ್ಯಾಪ್‌ಜೆಮಿನಿ ಕಂಪನಿಯ ಡೇಕೇರ್‌ನಲ್ಲಿ ಮಕ್ಕಳನ್ನು ವಾಶಿಂಗ್ ಮಶೀನ್‌ಗೆ ಹಾಕಿ ಕ್ರೌರ್ಯ ಮೆರೆಯಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕಂಪನಿ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ.
ಪ್ರತೀ ಮಗುವಿನ ಸುರಕ್ಷತೆ ಹಾಗೂ ಯೋಗಕ್ಷೇಮ ನಮ್ಮ ಆದ್ಯತೆಯಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಡೇರ್ ಕೇರ್ ಕೇಂದ್ರವನ್ನು ನಮ್ಮ ಸಂಸ್ಥೆಯ ಬಾಹ್ಯ ಸೇವಾ ಪೂರೈಕೆದಾರ ಲಿಟಲ್ ಸ್ಕಾಲರ್ಸ್ ನಡೆಸುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ಪೊಲೀಸ್ ಇಲಾಖೆಗೆ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ ಎಂದು ತಿಳಿಸಿದೆ.
ತನಿಖೆ ಪೂರ್ಣಗೊಳ್ಳುವವರೆಗೂ ಡೇ ಕೇರ್ ಮುಚ್ಚಲಾಗುತ್ತಿದೆ. ಸತ್ಯಾಂಶ ಹೊರಬರಲಿ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸಹಕಾರ ನೀಡುತ್ತೇವೆ. ಸದ್ಯ ಡೇ ಕೇರ್‌ನ್ನು ತಾತ್ಕಾಲಿಕವಾಗಿ ಮುಚ್ಚಿರುವ ಕಾರಣ ಆ ಪೋಷಕರಿಗೆ ವರ್ಕ್ ಫ್ರಮ್ ಹೋಮ್ ಅವಕಾಶ ನೀಡಲಾಗಿದೆ. ನಮ್ಮ ಎಲ್ಲ ಬ್ರಾಂಚ್‌ನ ಡೇ ಕೇರ್ ಔಟ್‌ಲೆಟ್ ಬಗ್ಗೆ ನಿಗಾ ಇಟ್ಟಿದ್ದೇವೆ ಎಂದಿದ್ದಾರೆ.



