October 9, 2026
Friday, October 9, 2026
spot_img

ಗೌರಿ-ಗಣೇಶ ಹಬ್ಬಕ್ಕೆ KSRTCಯಿಂದ ಗುಡ್‌ನ್ಯೂಸ್: 2,500 ಹೆಚ್ಚುವರಿ ಬಸ್, ಟಿಕೆಟ್‌ಗೂ ಭರ್ಜರಿ ರಿಯಾಯಿತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ಸಲದ ಗೌರಿ ಗಣೇಶ ಹಬ್ಬಕ್ಕೆ ಊರಿಗೆ ಹೋಗ್ಬೇಕು ಅನ್ನೋ ಪ್ಲಾನ್ ನಲ್ಲಿದ್ದೀರಾ? ಹಾಗಿದ್ರೆ ಈ ಗುಡ್ ನ್ಯೂಸ್ ನಿಮಗೇನೇ….

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗುವ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ನಗರಗಳಿಂದ ಹೆಚ್ಚುವರಿ ಬಸ್ ವ್ಯವಸ್ಥೆಗೆ ಸಿದ್ಧತೆ ಮಾಡಿಕೊಂಡಿದೆ. ಜತೆಗೆ ಸೆಪ್ಟೆಂಬರ್ 11ರಿಂದ 14ರವರೆಗೆ ಬರೋಬ್ಬರಿ 2,500 ಹೆಚ್ಚುವರಿ ಬಸ್‌ಗಳನ್ನು ಕಾರ್ಯಾಚರಣೆಗೆ ಇಳಿಸಲು ನಿರ್ಧರಿಸಲಾಗಿದೆ.

ನೆರೆಯ ರಾಜ್ಯಗಳಿಗೂ ವಿಶೇಷ ಬಸ್‌

ರಾಜ್ಯದ ಪ್ರಮುಖ ನಗರಗಳಿಂದ ವಿವಿಧ ಜಿಲ್ಲೆಗಳಿಗೆ ಹಾಗೂ ಧರ್ಮಸ್ಥಳ, ಹೊರನಾಡು, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಗಳಿಗೂ ವಿಶೇಷ ಬಸ್ ಗಳು ಸಂಚರಿಸಲಿವೆ. ಇದರ ಜತೆಗೆ ನೆರೆಯ ರಾಜ್ಯಗಳಿಗೂ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಕೇರಳ, ತಮಿಳುನಾಡು, ಮಹಾರಾಷ್ಟ್ರ, ಗೋವಾ ಮತ್ತು ತೆಲಂಗಾಣದ ಪ್ರಮುಖ ನಗರಗಳಿಗೆ ತೆರಳುವ ಪ್ರಯಾಣಿಕರಿಗೂ ಈ ಹೆಚ್ಚುವರಿ ಸೇವೆ ಲಭ್ಯವಾಗಲಿದೆ.

ಇದನ್ನೂ ಓದಿ:

5,10,ಶೇ ರಿಯಾಯಿತಿ

ಇನ್ನು ಪ್ರಯಾಣಿಕರಿಗೆ ಮತ್ತೊಂದು ಸಿಹಿ ಸುದ್ದಿಯನ್ನೂ KSRTC ನೀಡಿದೆ.ಅದು ಏನಂದ್ರೆ 4 ಅಥವಾ ಅದ್ಕಕಿಂತ ಜಾಸ್ತಿ ಟಿಕೆಟ್ ಗಳನ್ನು ಒಮ್ಮೆಗೆ ಮುಂಗಡವಾಗಿ ಕಾಯ್ದಿರಿಸಿದರೆ ಶೇ.5ರಷ್ಟು ರಿಯಾಯಿತಿ ಸಿಗಬಹುದು. ಅಷ್ಟೇ ಅಲ್ಲದೆ ಹೋಗುವ ಹಾಗೂ ಬರುವ ಟಿಕೆಟ್ಗಳನ್ನು ಒಮ್ಮೆಗೆ ಕಾಯ್ದಿರಿಸಿದರೆ ಶೇ.10ರಷ್ಟು ರಿಯಾಯಿತಿ ನಿಮ್ಮದಾಗಲಿದೆ.

ಪ್ರಯಾಣಿಕರು KSRTC ಅಧಿಕೃತ ವೆಬ್‌ಸೈಟ್ ಅಥವಾ ಮೊಬೈಲ್ ಆ್ಯಪ್ ಮೂಲಕ ಮುಂಗಡ ಟಿಕೆಟ್ ಕಾಯ್ದಿರಿಸಿ ಈ ರಿಯಾಯಿತಿ ಸೌಲಭ್ಯ ಪಡೆಯಬಹುದು.

Must Read