July 4, 2026
Saturday, July 4, 2026
spot_img

ಹುಬ್ಬಳ್ಳಿ-ಧಾರವಾಡದ ಪಾಲಿಕೆ ಚುನಾವಣೆ ಮುಕ್ತಾಯ; ದುರ್ಗಮ್ಮ ಬಿಜವಾಡ ಹೊಸ ಮೇಯರ್, ರತ್ನಾಬಾಯಿ ಉಪಮೇಯರ್!

ಹೊಸದಿಗಂತ ವರದಿ ಹುಬ್ಬಳ್ಳಿ:

ಹುಬ್ಬಳ್ಳಿ: ನಗರದ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಶನಿವಾರ ಮೇಯರ್ ಹಾಗೂ ಉಪಮೇಯರ್ ಚುನಾವಣೆ ನಡೆದಿದ್ದು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ನೂತನ ಮೇಯರ್ ಆಗಿ  ಹುಬ್ಬಳ್ಳಿಯ ದುರ್ಗಮ್ಮ ಬಿಜವಾಡ(ವಾರ್ಡ್69) ಹಾಗೂ ಉಪಮೇಯರ್ ಆಗಿ ಧಾರವಾಡದ ರತ್ನಾಬಾಯಿ ನಾಝರೆ (ವಾರ್ಡ್ ನಂ. 9) ಅವರು ಆಯ್ಕೆಯಾದರು. ಮೇಯರ್ ಸ್ಥಾನ ಪರಿಶಿಷ್ಟ ಜಾತಿ ಮಹಿಳೆ ಮತ್ತು ಉಪ ಮೇಯರ್ ಸ್ಥಾನ ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾಗಿತ್ತು.ದುರ್ಗಮ್ಮ ಬಿಜವಾಡ ಅವರು ಪಾಲಿಕೆಯ ಒಂಬತ್ತನೇ ಮಹಿಳಾ ಮೇಯರ್ ಆಗಿದ್ದಾರೆ. ಚುನಾವಣೆಯಲ್ಲಿ ಹುಬ್ಬಳ್ಳಿಯ ದುರ್ಗಮ್ಮ ಬಿಜವಾಡ ಅವರು 50  ಮತಗಳನ್ನು ಪಡೆದರೆ, ಪ್ರತಿಸ್ಪಽ ಕಾಂಗ್ರೆಸ್‌ನ ಕವಿತಾ ಕಬ್ಬೇರ (ವಾರ್ಡ್ 20) ಅವರು 35 ಮತಗಳನ್ನಷ್ಟೇ ಪಡೆದರು. ಎಐಎಂಐಎಂನ ಮೂವರು ಸದಸ್ಯರು ತಟಸ್ಥವಾಗಿ ಉಳಿದರು.‌

ಇದನ್ನೂ ಓದಿ:

ಉಪಮೇಯರ್ ಆಗಿ ರತ್ನಾಬಾಯಿ ನಾಝರೆ (ವಾರ್ಡ್ 9) 50 ಮತಗಳನ್ನು ಪಡೆದರೇ ಎದುರಾಳಿ ಕಾಂಗ್ರೆಸ್ ಅಭ್ಯರ್ಥಿ ದಿಲ್ಶಾದ್ ಬೇಗಂ ನದಾಫ್ (ವಾರ್ಡ್ 9) 35 ಮತಗಳ ಪಡೆದರು. ಎಐಎಂಐಎಂ ನಿಂದ ಉಪ ಮೇಯರ್ ಸ್ಥಾನಕ್ಕೆ ಮಾತ್ರ ಸ್ಪಽಸಿದ್ದ ವಹಿದಾಖಾನಂ ಕಿತ್ತೂರ 3 ಮತ ಪಡೆದರು. ಬೆಳಿಗ್ಗೆ 11 ಗಂಟೆಗೆ ಚುನಾವಣಾ ಸ್ಪಽಗಳು ನಾಮಪತ್ರ ಸಲ್ಲಿಸಿದರು. ಮಧ್ಯಾಹ್ನ 1.30 ಕ್ಕೆ ಮತದಾನ ಪ್ರಕ್ರಿಯೆ ನಡೆಯಿತು. ಕೈ ಎತ್ತುವ ಮೂಲ ಮತದಾನ ನಡೆಯಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !