ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಮಹಿಳಾ ಆಯೋಗ ಇರುವ ಮಾದರಿಯಲ್ಲೇ ಪುರುಷರ ರಕ್ಷಣೆಗಾಗಿ ತಕ್ಷಣವೇ ‘ಪುರುಷ ಆಯೋಗ’ವನ್ನು ರಚಿಸಬೇಕು ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಪುರುಷರು ಕೂಡ ಮಹಿಳೆಯರಿಂದ ಸಾಕಷ್ಟು ಶೋಷಣೆಗೆ ಒಳಗಾಗುತ್ತಿದ್ದಾರೆ. ಮಹಿಳೆಯರ ರಕ್ಷಣೆಗಾಗಿ ಇರುವ ಕೆಲವು ಕಾನೂನುಗಳು ದುರ್ಬಳಕೆಯಾಗುತ್ತಿದ್ದು, ಇದರಿಂದ ಅಮಾಯಕ ಪುರುಷರು ಮತ್ತು ಅವರ ಕುಟುಂಬದವರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ನೊಂದ ಪುರುಷರ ಧ್ವನಿಯಾಗಲು ಮತ್ತು ಅವರಿಗೆ ಕಾನೂನುಬದ್ಧ ನ್ಯಾಯ ಕೊಡಿಸಲು ಪ್ರತ್ಯೇಕ ಆಯೋಗದ ಅಗತ್ಯತೆ ಸದ್ಯದ ಪರಿಸ್ಥಿತಿಯಲ್ಲಿ ಹೆಚ್ಚಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ:
‘ಪುರುಷ ರಕ್ಷಣಾ ವೇದಿಕೆ’ ಸ್ಥಾಪಿಸಬೇಕು
ಪೊಲೀಸ್ ಠಾಣೆಗಳಲ್ಲಿ ಪುರುಷರು ನೀಡುವ ದೂರುಗಳಿಗೆ ಯಾವುದೇ ಬೆಲೆ ಸಿಗುತ್ತಿಲ್ಲ.ಈ ಹಿನ್ನೆಲೆಯಲ್ಲಿ ಪುರುಷರ ಮೇಲಿನ ದೌರ್ಜನ್ಯವನ್ನು ತಡೆಯಲು ‘ಪುರುಷ ರಕ್ಷಣಾ ವೇದಿಕೆ’ಯನ್ನು ಸ್ಥಾಪಿಸಬೇಕು. ಮಹಿಳೆಯರಿಂದ ಅಥವಾ ಸಮಾಜದ ಯಾವುದೇ ವರ್ಗದಿಂದ ಪುರುಷರ ಮೇಲೆ ನಡೆಯುವ ದೌರ್ಜನ್ಯಗಳು, ಸುಳ್ಳು ಮೊಕದ್ದಮೆಗಳು ಮತ್ತು ಮಾನಸಿಕ ಕಿರುಕುಳವನ್ನು ತಡೆಯುವುದು ಈ ನೂತನ ಸಂಘಟನೆಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.



