ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿನಿಮಾ, ವೆಬ್‌ಸಿರೀಸ್ ಹಾಗೂ ಇತರೆ ಕಾಪಿರೈಟ್ ಹೊಂದಿರುವ ವಿಡಿಯೋ ವಿಷಯಗಳ ಅಕ್ರಮ ಹಂಚಿಕೆಗೆ ಕಡಿವಾಣ ಹಾಕುವಂತೆ ಕೇಂದ್ರ ಸರ್ಕಾರ ಟೆಲಿಗ್ರಾಂಗೆ ನೋಟಿಸ್ ಜಾರಿ ಮಾಡಿದೆ. 15 ದಿನಗಳೊಳಗೆ ಕೈಗೊಂಡ ಕ್ರಮದ ವರದಿ (ATR) ಸಲ್ಲಿಸುವಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸೂಚಿಸಿದೆ.
ಪ್ರತಿ ಪೈರಸಿ ಚಾನೆಲ್‌ಗಳನ್ನು ಪ್ರತ್ಯೇಕವಾಗಿ ತೆಗೆದುಹಾಕುವ ಬದಲು, ಇಂತಹ ಅಕ್ರಮ ವಿಷಯಗಳು ಹರಡದಂತೆ ಮುಂಚಿತ ಕ್ರಮ ಕೈಗೊಳ್ಳುವುದು ಟೆಲಿಗ್ರಾಂನ ಜವಾಬ್ದಾರಿ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಇದನ್ನೂ ಓದಿ:
ಕಾನೂನು ಕ್ರಮದ ಎಚ್ಚರಿಕೆ
ಕಾಪಿರೈಟ್ ಉಲ್ಲಂಘನೆ ಕೇವಲ ನಾಗರಿಕ ಅಪರಾಧವಲ್ಲ, ಅದು ಕ್ರಿಮಿನಲ್ ಅಪರಾಧವೂ ಆಗಿದೆ ಎಂದು ಸರ್ಕಾರ ನೆನಪಿಸಿದೆ. ಸಮರ್ಪಕ ಕ್ರಮ ಕೈಗೊಳ್ಳದಿದ್ದರೆ ಮಾಹಿತಿ ತಂತ್ರಜ್ಞಾನ ಕಾಯ್ದೆ ಸೇರಿದಂತೆ ಅನ್ವಯವಾಗುವ ಕಾನೂನುಗಳಡಿ ಮುಂದಿನ ಕ್ರಮ ಎದುರಿಸಬೇಕಾಗಬಹುದು ಎಂದು ಎಚ್ಚರಿಕೆ ನೀಡಿದೆ.
ದೂರು ಪರಿಹಾರ ವ್ಯವಸ್ಥೆಗೂ ಮಾಹಿತಿ ಕೇಳಿಕೆ
ಚಿತ್ರ ನಿರ್ಮಾಪಕರು, OTT ಸಂಸ್ಥೆಗಳು ಹಾಗೂ ಕಾನೂನು ಜಾರಿ ಸಂಸ್ಥೆಗಳ ದೂರುಗಳನ್ನು ಹೇಗೆ ನಿರ್ವಹಿಸಲಾಗುತ್ತಿದೆ ಎಂಬ ವಿವರಗಳನ್ನೂ ಕೇಂದ್ರ ಸರ್ಕಾರ ಟೆಲಿಗ್ರಾಂನಿಂದ ಕೇಳಿದೆ.



